ಮಂಜೇಶ್ವರ: ಇತ್ತೀಚೆಗೆ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಗುರುನರಸಿಂಹ ಯಕ್ಷಬಳಗ ಮೀಯಪದವು ತಂಡದಿಂದ " ಭಕ್ತ ಮಯೂರಧ್ವಜ" ತಾಳಮದ್ದಳೆ ಜರಗಿತು.
ಹಿಮ್ಮೇಳದಲ್ಲಿ ಭಾಗವತರಾಗಿ ರಾಮಪ್ರಸಾದ ಮಯ್ಯ ಕೂಡ್ಲು, ಚೆಂಡೆ ಮದ್ದಳೆಯಲ್ಲಿ ರಾಜಾರಾಮ ಬಲ್ಲಾಳ್ ಚಿಪ್ಪಾರು. ವಿಕ್ರಂ ಮಯ್ಯ ಪೈವಳಿಕೆ ಭಾಗವಹಿಸಿದ್ದರು. ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ತಾಮ್ರಧ್ವಜ ಗುರುರಾಜ ಹೊಳ್ಳ ಬಾಯಾರು, ಶ್ರೀಕೃಷ್ಣ ರಾಜಾರಾಮ ರಾವ್ ಮೀಯಪದವು, ಮಯೂರಧ್ವಜ ಯೋಗೀಶ ರಾವ್ ಚಿಗುರುಪಾದೆ, ಅರ್ಜುನ ರಾಜಶ್ರೀ ನಾವಡ, ನಕುಲಧ್ವಜ ಗಣೇಶ ನಾವಡ ಮೀಯಪದವು ಭಾಗವಹಿಸಿದ್ದರು.
ಚಿಗುರುಪಾದೆಯಲ್ಲಿ ರಂಜಿಸಿದ ಗುರುನರಸಿಂಹ ತಂಡದ ಭಕ್ತ ಮಯೂರಧ್ವಜ ತಾಳಮದ್ದಳೆ
0
ಫೆಬ್ರವರಿ 22, 2023
Tags

.jpg)
