HEALTH TIPS

ನಿಮ್ಮ ಕೂದಲು ಉದುರುವುದಕ್ಕೂ ಮೊಬೈಲ್‌ಗೂ ಸಂಬಂಧವಿದೆ ಗೊತ್ತೆ?

 ಕೂದಲು ಉದುರುವುದು ಅನೇಕ ಕಾರಣಗಳಿಂದ ಉಂಟಾಗುತ್ತದೆ. ಮಾನಸಿಕ ಒತ್ತಡ, ಜೀನ್ಸ್ ಹಾಗೂ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ, ಕೂದಲಿಗೆ ಪೋಷಕಾಂಶ ದೊರೆಯದಿರುವುದು, ವಾಯು ಮಾಲಿನ್ಯ ಹೀಗೆ ಅನೇಕ ಕಾರಣಗಳಿಂದ ಕೂದಲು ಉದುರುವುದು.

ಮೊಬೈಲ್‌ ಹೆಚ್ಚಾಗಿ ನೋಡುವುದರಿಂದ ಕೂಡು ಕೂದಲು ಉದುರುವುದು ಎಂಬುವುದು ಗೊತ್ತೇ? ಇದು ನಿಮಗೆ ಅಚ್ಚರಿಯಾದರೂ ಸತ್ಯ. ನೀವು ಹೆಚ್ಚು ಹೊತ್ತು ಮೊಬೈಲ್‌, ಲ್ಯಾಪ್‌ಟಾಪ್‌, ಟಿವಿ ನೋಡಿದಷ್ಟು ಕೂದಲು ಉದುರುವ ಸಮಸ್ಯೆ ಹೆಚ್ಚಾಗುವುದು, ಹೇಗೆ ಎಂದು ನೋಡೋಣ ಬನ್ನಿ:

ಅಧ್ಯಯನ ವರದಿ ಏನು ಹೇಳುತ್ತದೆ?
Journal of Cosmetology and Trichologyನಲ್ಲಿ ಪ್ರಕಟವಾದ ಆದ್ಯಯನ ವರದಿ ಮೊಬೈಲ್‌ ಅನ್ನು ಕಿವಿಗೆ ಪಕ್ಕ ಇಟ್ಟು ಮಾತನಾಡುವುದಕ್ಕೂ ಕೂದಲು ಉದುರುವುದಕ್ಕೂ ಸಂಬಂಧ ಇದೆ ಎಂದು ಹೇಳಿದೆ.

ಮೊಬೈಲ್ ಅನ್ನು ಕಿವಿ ಪಕ್ಕದಲ್ಲಿ ಇಟ್ಟು ಮಾತನಾಡುವುದರಿಂದ ಮೊಬೈಲ್‌ ರೇಡಿಯೇಷನ್‌ಗಳು ಕೂದಲಿನ ಮೇಲೆ ಪರಿಣಾಮ ಬೀರಿ ಕೂದಲು ಉದುರುವ ಸಮಸ್ಯೆ ಉಂಟಾಗುವುದು.

ಇನ್ನು ಸ್ಕ್ರೀನ್‌ ಟೈಮ್‌ಗೂ ಕೂದಲು ಉದುರುವುದಕ್ಕೂ ಸಂಬಂಧ ಇದೆ.

ಸ್ಕ್ರೀನ್ ಟೈಮ್‌ ಹೆಚ್ಚಾದಾಗ
ಮೊಬೈಲ್‌, ಟಿವಿ, ಲ್ಯಾಪ್‌ ಅಂತ ಹೆಚ್ಚು ಹೊತ್ತು ನೋಡುತ್ತಿದ್ದರೆ ಅದರಲ್ಲಿರುವ ಬ್ಲೂ ಲೈಟ್ ನಿಮ್ಮ ನಿದ್ದೆಗೆ ಭಂಗ ತರುವುದು. ಹೆಚ್ಚು ಹೊತ್ತು ಮೊಬೈಲ್‌ ನೋಡುತ್ತಿದ್ದರೆ ನಿದ್ದೆ ಕಡಿಮೆಯಾಗುವುದು.

ಮೆಲಾಟೋನಿನ್‌ ಎಂಬ ಹಾರ್ಮೋನ್‌ ನಮ್ಮ ದೇಹದ ಕಾರ್ಯಗಳನ್ನು ನಿಯಂತ್ರಿಸುತ್ತದೆ. ರಾತ್ರಿ ನಿದ್ದೆ ಮಾಡಿದಾಗ ಮಾರನೇಯ ದಿನ ನಮ್ಮ ದೇಹ ಚೈತನ್ಯದಿಂದ ಕೂಡಿರುತ್ತದೆ. ಅದೇ ಸರಿಯಾಗಿ ನಿದ್ದೆ ಮಾಡದಿದ್ದರೆ ಅಥವಾ ನಿದ್ದೆ ತುಂಬಾ ಕಡಿಮೆಯಾದರೆ ದೇಹಕ್ಕೆ ಅವಶ್ಯಕವಾದ ಮೆಲಾಟೋನಿನ್‌ ಉತ್ಪತ್ತಿಯಾಗುವುದಿಲ್ಲ. ಇದರಿಂದ ಮಾನಸಿಕ ಒತ್ತಡ, ತೂಕ ಹೆಚ್ಚಾಗುವುದು, ಕೂದಲು ಉದುರುವುದು ಈ ಬಗೆಯ ಸಮಸ್ಯೆ ಕಂಡು ಬರುವುದು.

ಸ್ಕ್ರೀನ್‌ ಹೆಚ್ಚು ನೋಡಿದಷ್ಟು ಮಾನಸಿಕ, ದೈಹಿಕ ಆರೋಗ್ಯ ಕಡಿಮೆಯಾಗುವುದು
ಸ್ಕ್ರೀನ್‌ ಟೈಮ್‌ ಅಧಿಕ ಮಾಡಿದರೆ ದೇಹಕ್ಕೆ ವ್ಯಾಯಾಮ ಇರುವುದಿಲ್ಲ, ಏಕೆಂದರೆ ಒಂದು ಕಡೆ ಕೂತು ಮೊಬೈಲ್‌ ನೋಡುತ್ತೇವೆ, ಅದರಂತೆ ಹೆಚ್ಚು ಹೊತ್ತು ಮೊಬೈಲ್‌ ನೋಡುತ್ತಿದ್ದರೆ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನೀವು ದೈಹಿಕ ಹಾಗೂ ಮಾನಸಿಕ ಆರೋಗ್ಯ ಬೇಕೆಂದರೆ ಮೊಬೈಲ್‌ ಮಿತಿಯಲ್ಲಿ ನೋಡಿ, ಪರಿಸರಕ್ಕೆ ಹತ್ತಿರವಾಗಲು ಪ್ರಯತ್ನಿಸಿ.

ಮಲಗುವ 30 ನಿಮಿಷಕ್ಕೆ ಮುನ್ನ ಮೊಬೈಲ್‌ ನೋಡಬೇಡಿ
ಕೆಲವರು ಮಲಗಲು ಹೋಗುವಾಗಲೂ ಮೊಬೈಲ್‌ ನೋಡುತ್ತಲೇ ಇರುತ್ತಾರೆ, ಹೀಗೆ ಮೊಬೈಲ್ ನೋಡುವುದರಿಂದ ನೀವು ಖುಷಿ ಸಿಗುತ್ತೆ ಅಂದುಕೊಂಡಿದ್ದರೆ ಅದು ತಪ್ಪು, ಇದರಿಂದ ನಿಮ್ಮ ಮಾನಸಿಕ ಒತ್ತಡ ಮತ್ತಷ್ಟು ಹೆಚ್ಚಾಗಿವುದು. ತಜ್ಞರ ಪ್ರಕಾರ ಮಲಗುವ ಎರಡು ಗಂಟೆ ಮುಂಚಿತವಾಗಿ ಮೊಬೈಲ್‌ ದೂರ ಇಡಬೇಕು, ಆದರೆ ಆ ರೀತಿ ಮಾಡುವವರು ತುಂಬಾನೇ ಕಡಿಮೆ ಎಂದು ಹೇಳಬಹುದು. ನೀವು ಪ್ರಾರಂಭದಲ್ಲಿ ಮಲಗುವ 30 ನಿಮಿಷಕ್ಕೆ ಮುನ್ನ ಮೊಬೈಲ್‌ ದೂರವಿಡಿ

 ವೈಫೈಯಿಂದ ಕೂದಲು ಉದುರುವುದೇ? ವೈಫೈಯಿಂದ ಕೂದಲು ಉದುರುವುದಿಲ್ಲ, ಆದರೆ ವೈಫೈ ಕನೆಕ್ಷನ್‌ನಿಂದಾಗಿ ನೀವು ತುಂಬಾ ಹೊತ್ತು ಮೊಬೈಲ್ ನೋಡುತ್ತೀರಿ, ಇದರ ನಿಮ್ಮ ಸ್ಕ್ರೀನ್ ಟೈಮ್ ಹೆಚ್ಚಾಗುವುದು, ಇದರಿಂದ ಕೂದಲು ಉದುರುವುದು, ಇತರ ಆರೋಗ್ಯ ಸಮಸ್ಯೆ ಬರುವುದು. ಕೂದಲು ಉದುರುವುದು ಕಡಿಮೆ ಮಾಡುವುದು ಹೇಗೆ? ನೀವು ಮೊಬೈಲ್‌ ನೋಡುವುದು ಕಡಿಮೆ ಮಾಡಬೇಕು, ಇದರ ಜೊತೆಗೆ ಕೂದಲಿನ ಆರೈಕೆ ಕಡೆಗೆ ಗಮನ ನೀಡಬೇಕು. ಈ ರೀತಿ ಮಾಡುವುದರಿಂದ ನೀವು ಕೂದಲು ಉದುರುವುದನ್ನು ತಡೆಗಟ್ಟಬಹುದು. ಅತೀ ಹೆಚ್ಚು ಮೊಬೈಲ್ ನೋಡುವುದರಿಂದ ನಿಮ್ಮ ಆರೋಗ್ಯದ ಮೇಲೆ ಬೀರುವ ಪರಿಣಾಮಗಳು ಒಬೆಸಿಟಿ ಸಮಸ್ಯೆ ಬರುವುದು ನಿದ್ದೆಗೆ ಭಂಗ ಉಟಾಗುವುದು ಕುತ್ತಿಗೆ ನೋವು, ಬೆನ್ನು ನೋವು ಉಂಟಾಗುವುದು ಖಿನ್ನತೆ , ಮಾನಸಿಕ ಒತ್ತಡ ಹೆಚ್ಚಾಗುವುದು.



Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries