ತಿರುವನಂತಪುರ: ಮುಖ್ಯಮಂತ್ರಿಗಳ ಯುರೋಪ್ ಪ್ರವಾಸದಿಂದ ರಾಜ್ಯಕ್ಕೆ ಲಾಭವಾಗಿದೆ ಎಂದು ವಿತ್ತ ಸಚಿವ ಕೆ.ಎನ್.ಬಾಲಗೋಪಾಲ್ ಹೇಳಿದ್ದಾರೆ.
ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ ಯುರೋಪ್ ಭೇಟಿಯನ್ನು ಶ್ಲಾಘಿಸಿದರು. ಮುಖ್ಯಮಂತ್ರಿಗಳ ಯುರೋಪ್ ಪ್ರವಾಸದಿಂದ ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಿದ್ದು, ರಾಜ್ಯಕ್ಕೆ ಲಾಭವಾಗಿದೆ ಎಂದು ಕೆ.ಎನ್.ಬಾಲಗೋಪಾಲ್ ಪ್ರತಿಪಾದಿಸಿದರು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ತಂಡ ಫಿನ್‍ಲ್ಯಾಂಡ್, ನಾರ್ವೆ, ಇಂಗ್ಲೆಂಡ್ ಮತ್ತು ವೇಲ್ಸ್‍ಗೆ ಭೇಟಿ ನೀಡಿತ್ತು. ಫಿನ್‍ಲ್ಯಾಂಡ್‍ನಲ್ಲಿನ ಶೈಕ್ಷಣಿಕ ಸುಧಾರಣೆಗಳನ್ನು ಅಧ್ಯಯನ ಮಾಡುವುದು ಪ್ರವಾಸದ ಮುಖ್ಯ ಉದ್ದೇಶವಾಗಿತ್ತು. ಕೆ.ಎನ್.ಬಾಲಗೋಪಾಲ್ ಮಾತನಾಡಿ, ಪ್ರವಾಸದ ನಂತರ ದೊರೆತ ವಿಚಾರಗಳನ್ನು ವಿವಿಧ ಕ್ಷೇತ್ರಗಳಲ್ಲಿ ಅನುμÁ್ಠನಗೊಳಿಸಲಾಗುವುದು ಎಂದರು.
ಇದೇ ವೇಳೆ ಮುಖ್ಯಮಂತ್ರಿ ಹಾಗೂ ಸಚಿವರ ಯುರೋಪ್ ಭೇಟಿ ದೊಡ್ಡ ವಿವಾದವಾಗಿತ್ತು. ಯುರೋಪ್ ಪ್ರವಾಸದಲ್ಲಿ ಮುಖ್ಯಮಂತ್ರಿಗಳು ತಮ್ಮ ಕುಟುಂಬದ ಸದಸ್ಯರೊಂದಿಗೆ ತೆರಳಿದ್ದರು ಎಂಬುದು ಪ್ರಮುಖ ಟೀಕೆಯಾಗಿತ್ತು. ಪಿಣರಾಯಿ ವಿಜಯನ್ ತಮ್ಮ ಪತ್ನಿ ಮತ್ತು ಮೊಮ್ಮಗನೊಂದಿಗೆ ಯುರೋಪ್ ಅನ್ನು ಆನಂದಿಸಿದರು. ಸಚಿವ ವಿ.ಶಿವಂಕುಟ್ಟಿ ಜೊತೆಗೂ ಅವರ ಪತ್ನಿ ಇದ್ದರು.
ಮುಖ್ಯಮಂತ್ರಿಗಳ ಯೂರೋಪ್ ಭೇಟಿ ಫಲ ನೀಡಿದೆ: ವಿವಿಧ ಕ್ಷೇತ್ರಗಳಲ್ಲಿ ಅನುಷ್ಠಾನಗೊಳಿಸಲಾಗುವುದು: ಕೆ.ಎನ್.ಬಾಲಗೋಪಾಲ್
0
ಫೆಬ್ರವರಿ 03, 2023





