HEALTH TIPS

ವರದಕ್ಷಿಣೆಯಾಗಿ ಹಳೆಯ ವಸ್ತು ಕೊಟ್ಟರು ಎಂದು ಮದುವೆ ಮುರಿದುಕೊಂಡ ವರ!

 

              ಹೈದರಾಬಾದ್‌: ವರದಕ್ಷಿಣೆಯಾಗಿ ಹಳೆಯ ಪೀಠೋಪರಕಣ ನೀಡಿದ್ದಾರೆ ಎಂದು ಆರೋ‍ಪಿಸಿ ವರನೊಬ್ಬ ಮದುವೆ ನಿರಾಕರಿಸಿದ ವಿಕ್ಷಿಪ್ತ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

                    ಭಾನುವಾರ ಈ ವಿವಾಹ ನಿಗದಿಯಾಗಿತ್ತು. ಆದರೆ ವಿವಾಹ ನಡೆಯಬೇಕಿದ್ದ ಸ್ಥಳಕ್ಕೆ ವರನ ಕಡೆಯವರು ಬರಲು ನಿರಾಕರಿಸಿದ್ದಾರೆ.  ಹೀಗಾಗಿ ವಧುವಿನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

                  ತಾನು ವರನ ಮನೆಗೆ ಹೋದಾಗ ಆತನ ತಂದೆ ತನ್ನೊಂದಿಗೆ ಕೆಟ್ಟದಾಗಿ ವರ್ತಿಸಿದ್ದ ಎಂದು ವಧುವಿನ ತಂದೆ ದೂರಿನಲ್ಲಿ ಹೇಳಿದ್ದಾರೆ.

                   'ಅವರು ಕೇಳಿದ್ದ ಕೆಲವು ವಸ್ತುಗಳನ್ನು ನಾವು ಕೊಟ್ಟಿಲ್ಲ. ಕೊಟ್ಟ ಪೀಠೋಪಕರಣಗಳು ಹಳೆಯದ್ದಾಗಿದ್ದವು ಎಂದು ವರನ ಕಡೆಯವರು ಆರೋಪ ಮಾಡಿದ್ದಾರೆ. ಹೀಗಾಗಿ ಅವರು ಬರಲು ನಿರಾಕರಿಸಿದ್ದಾರೆ. ನಾನು ಮದುವೆಯ ಎಲ್ಲಾ ತಯಾರಿ ಮಾಡಿಕೊಂಡು ಸಂಬಂಧಿಕರು ಹಾಗೂ ಅತಿಥಿಗಳನ್ನು ಆಹ್ವಾನಿಸಿದ್ದೆ. ಆದರೆ ಮದುವೆ ಸ್ಥಳಕ್ಕೆ ವರ ಬರಲಿಲ್ಲ' ಎಂದು ವಧುವಿನ ತಂದೆ ಹೇಳಿದ್ದಾರೆ.

                  'ಪೀಠೋಪಕರಣ ಜತೆ ಹಲವು ವಸ್ತುಗಳು ವರದಕ್ಷಿಣೆ ರೂಪದಲ್ಲಿ ವರನ ಕಡೆಯವರು ಕೇಳಿದ್ದರು. ಆದರೆ ಅವರು ಕೇಳಿದ ಕೆಲ ವಸ್ತುಗಳನ್ನು ವಧುವಿನ ಕಡೆಯವರು ನೀಡಿರಲಿಲ್ಲ. ಜತೆಗೆ ಕೊಟ್ಟ ಪೀಠೋಪಕರಣಗಳು ಹಳೆಯದ್ದಾಗಿದ್ದವು ಎನ್ನುವ ಕಾರಣಕ್ಕೆ ಮದುವೆಯ ಸ್ಥಳಕ್ಕೆ ವರನ ಕಡೆಯವರು ಹೋಗಲು ನಿರಾಕರಿಸಿದ್ದಾರೆ' ಎಂದು ಪೊಲೀಸರು ಹೇಳಿದ್ದಾರೆ.

               ಭಾರತೀಯ ದಂಡ ಸಂಹಿತೆಯ ಹಲವು ಕಲಂಗಳಲ್ಲಿ ಹಾಗೂ ವರದಕ್ಷಿಣೆ ನಿಷೇಧ ಕಾನೂನಿನ್ವಯ ದೂರು ದಾಖಲಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries