ಕಾಸರಗೋಡು: ರಾಜ್ಯ ಮಾಹಿತಿ ಹಕ್ಕು ಆಯುಕ್ತೆ ಪಿ.ಆರ್.ಶ್ರೀಲತಾ ಅವರು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಗುರುವಾರ ನಡೆಸಿದ ಸಿಟ್ಟಿಂಗ್‍ನಲ್ಲಿ 20ಪ್ರಕರಣಗಳನ್ನು ಪರಿಗಣಿಸಿದ್ದಾರೆ. ಈ ಪೈಕಿ 18 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಆಯೋಗದ ಅದಾಲತ್‍ಗೆ ಹಾಜರಾಗದ ಬದಿಯಡ್ಕ ಗ್ರಾಮ ಪಂಚಾಯಿತಿ ಕಚೇರಿ ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ವಿಚಾರಣೆಗೆ ಒಳಪಡಿಸಲು ನಿರ್ಧರಿಸಲಾಗಿದೆ.
ಜಿಲ್ಲೆಯ ವಿವಿಧ ಗ್ರಾಮ ಕಚೇರಿ ಹಾಗೂ ತಾಲೂಕುಗಳಲ್ಲಿ ಹಂಚಿಕೆಮಾಡಲಾಗಿರುವ ಭೂಮಿಯ ಮಾಹಿತಿ ನೀಡುವಂತೆ ಕೇಳಿಕೊಂಡ ಅರ್ಜಿಗೆ ಸಂಬಂಧಿಸಿ ಜಮೀನು ಹಂಚಿಕೆ ಬಗೆಗಿನ ಮಾಹಿತಿ ಕಡತ ಲಭ್ಯವಿಲ್ಲ ಎಂಬ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಪ್ರತಿಕ್ರಿಯೆಯ ವಿರುದ್ಧ ಕಡತ ಪುನ: ತಯಾರಿಸಿ ನೀಡುವಂತೆ ಆದೇಶಿಸಲಾಗಿದೆ. ಜತೆಗೆ ಅಧಿಕಾರಿಗಳ ವಿರುದ್ಧ ಮಾಹಿತಿ ಹಕ್ಕು ಕಾಯ್ದೆಯನ್ವಯ ಕ್ರಮ ಕೈಗೊಳ್ಳಲೂ ಸೂಚಿಸಲಾಗಿದೆ.
ಜಮೀನು ಹಂಚಿಕೆ ಮಾಹಿತಿ ನೀಡದ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ
0
ಫೆಬ್ರವರಿ 02, 2023
Tags




