ಪೆರ್ಲ: ಬೇಂಗಪದವು ಶ್ರೀ ಗಿರಿಜಾಂಬಾ ಎಎಲ್‍ಪಿ ಶಾಲಾ ವಾರ್ಷಿಕೋತ್ಸವ ಫೆ. 18ರಂದು ಜರುಗಲಿರುವುದು. ಬೆಳಗ್ಗೆ 10ಕ್ಕೆ ಶಾಲಾ ಹಾಗೂ ಅಂಗನವಡಿ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ವೈವಿಧ್ಯ, ಮಧ್ಯಾಹ್ನ 2.30ಕ್ಕೆ ಸಭಾ ಕಾರ್ಯಕ್ರಮ ನಡೆಯುವುದು. ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ ಜೆ.ಎಸ್ ಉದ್ಘಾಟಿಸುವರು. ಶಾಲಾ ವ್ಯವಸ್ಥಾಪಕ ವೈ. ರಾಧಾಕೃಷ್ಣ ಅಡ್ಯಂತಾಯ ಅಧ್ಯಕ್ಷತೆ ವಹಿಸುವರು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶಶಿಧರ ಎಂ. ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಗ್ರಾಪಂ ಸದಸ್ಯೆ ಉಷಾಗಣೇಶ್, ಬಿಆರ್‍ಸಿ ಕೋರ್ಡಿನೇಟರ್ ಸುರೇಶ್, ಪಿಟಿಎ ಅಧ್ಯಕ್ಷ ಕೃಷ್ಣರಾಜ್ ಪೆಲ್ತಾಜೆ, ಮಾತೃಸಂಘದ ಅಧ್ಯಕ್ಷ ರಂಜಿತಾ ಎಸ್ ಪಾಲ್ಗೊಳ್ಳುವರು. 2022-22ನೇ ಸಾಲಿನ ಎಲ್ಲೆಸ್ಸೆಸ್ ಹಾಗೂ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ಹಿರಿಯ ವಿದ್ಯಾರ್ತಿಗಳಿಗೆ ಸನ್ಮಾನ, ಬಹುಮಾನ ವಿತರಣೆ ನಡೆಯುವುದು.
ನಾಳೆ ಬೇಂಗಪದವು ಶಾಲಾ ವಾರ್ಷಿಕೋತ್ಸವ
0
ಫೆಬ್ರವರಿ 16, 2023
Tags




