ಆಲಪ್ಪುಳ: ಕರುನಾಗಪಳ್ಳಿ ಮಾದಕ ವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಸಿಪಿಎಂ ನಾಯಕ ಶಾನವಾಜ್ ಪಾತ್ರವಿದೆ ಎಂದು ಪೋಲೀಸರು ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೆÇಲೀಸರು ಮತ್ತಿಬ್ಬರು ಆರೋಪಿಗಳನ್ನು ಸೇರಿಸಿದ್ದಾರೆ.
ಶಾನವಾಜ್ ಎಂಬುವರಿಂದ ಲಾರಿ ಬಾಡಿಗೆ ಪಡೆದಿದ್ದ ಇಡುಕ್ಕಿ ನಿವಾಸಿ ಜಯನ್ ಹಾಗೂ ಮತ್ತೋರ್ವ ಲಾರಿ ಮಾಲೀಕ ಅನ್ಸಾರ್ ಅವರನ್ನು ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ. ಶಾನವಾಸ್ ವಿರುದ್ಧ ಡ್ರಗ್ಸ್ ಸಾಗಾಟದಲ್ಲಿ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದು ಪೆÇಲೀಸರು ಹೇಳಿದ್ದಾರೆ.
ತನಿಖಾ ತಂಡದ ಪ್ರಕಾರ ತೌಸೀಫ್ ಮತ್ತು ಜಯನ್ ಪನ್ಮಸಾಲ ಕಳ್ಳಸಾಗಣೆ ತಂಡದ ಪ್ರಮುಖರು. ಜಯನ್ ಕರ್ನಾಟಕದಿಂದ ಪಾನ್ ಮಸಾಲ ಸಾಗಿಸಿರುವುದು ದೃಢಪಟ್ಟಿದೆ. ತನ್ನ ಲಾರಿ ಬಾಡಿಗೆಗೆ ನೀಡಲಾಗಿತ್ತು. ಆದರೆ ದಾಖಲೆಗಳನ್ನು ನೀಡಲು ಸಾಧ್ಯವಾಗಲಿಲ್ಲ ಎಂದು ಅನ್ಸಾರ್ ಈ ಹಿಂದೆ ಪೆÇಲೀಸರಿಗೆ ತಿಳಿಸಿದ್ದ. ಹೀಗಾಗಿಯೇ ಅವರ ಮೇಲೆ ಆರೋಪ ಹೊರಿಸಲಾಗಿತ್ತು. ಅನ್ಸಾರ್ ಮತ್ತು ಜಯನ್ ತಲೆಮರೆಸಿಕೊಂಡಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಇದೇ ವೇಳೆ, ಪಾನ್ಮಸಾಲವನ್ನು ಕಳ್ಳಸಾಗಣೆ ಮಾಡಿದ ಎರಡನೇ ಲಾರಿಯ ಮಾಲೀಕ ಸಿಪಿಎಂ ಮುಖಂಡ ಶಾನವಾಜ್ ಪ್ರಕರಣದಲ್ಲಿ ಯಾವುದೇ ರೀತಿಯಲ್ಲೂ ಭಾಗಿಯಾಗಿರುವುದು ಪತ್ತೆಯಾಗಿಲ್ಲ ಎಂದು ಪೆÇಲೀಸರು ಹೇಳುತ್ತಾರೆ. ಕಳೆದ ಜನವರಿ 8ರಂದು ಕರುನಾಗಪಳ್ಳಿಯಲ್ಲಿ 98 ಗೋಣಿಚೀಲಗಳಲ್ಲಿದ್ದ ಒಂದೂಕಾಲು ಲಕ್ಷ ಪಾನ್ಮಸಾಲ ಪ್ಯಾಕೆಟ್‍ಗಳನ್ನು ಪೆÇಲೀಸರು ವಶಪಡಿಸಿಕೊಂಡಿದ್ದರು. ಶಾನವಾಸ್ ಬಂಧನ ವಿಳಂಬಕ್ಕೆ ಹಲವೆಡೆ ವಿರೋಧ ವ್ಯಕ್ತವಾಗಿತ್ತು. ಸಚಿವ ಸಾಜಿ ಚೆರಿಯನ್‍ಗೆ ನಿಕಟ ಸಂಬಂಧ ಹೊಂದಿರುವ ನಾಯಕ ಎಂಬ ಕಾರಣಕ್ಕೆ ಪೆÇಲೀಸರು ಅವರನ್ನು ಬಂಧಿಸಲು ವಿಳಂಬ ಮಾಡಿದ್ದಾರೆ ಎಂಬುದು ಪ್ರಮುಖ ಆರೋಪವಾಗಿತ್ತು.
ಮಾದಕವಸ್ತು ಕಳ್ಳಸಾಗಣೆ; ಸಿಪಿಎಂ ನಾಯಕ ಶಾನವಾಜ್ ಪಾತ್ರದ ಬಗ್ಗೆ ಯಾವುದೇ ಪುರಾವೆಗಳಿಲ್ಲ: ಪೋಲೀಸರು
0
ಫೆಬ್ರವರಿ 02, 2023





