ಕಾಸರಗೋಡು: ದ್ರೋಹದ ಬಜೆಟ್ ತೆಗೆದುಹಾಕಿ, ಜನದ್ರೋಹಕರ ಬಜೆಟ್ ಹಿಂದಕ್ಕೆ ಪಡೆಯಬೇಕು, ರಾಜ್ಯ ಸರಕಾರ ನ್ಯಾಯ ಪಾಲಿಸಬೇಕು ಮುಂತಾದ ಬೇಡಿಕೆಯೊಂದಿಗೆ ಭಾರತೀಯ ಮಜ್ದೂರ್ ಸಂಘ್(ಬಿಎಂಎಸ್)ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನಾ ಮೆರವಣಿಗೆ ಮತ್ತು ಧರಣಿ ನಡೆಯಿತು.
ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷ ಎಂ.ಕೆ. ರಾಘವನ್ ಉದ್ಘಾಟಿಸಿದರು. ಕುಡಿಯುವ ನೀರಿನ ದರ ಹೆಚ್ಚಳಗೊಳಿಸಿ ಹೇರಿಕೆಯಿಂದ ಕೂಡ ಜನರಿಗೆ ತೊಂದರೆಯಾಗಿದೆ. ಇನ್ನೊಂದೆಡೆ ಜನಸಾಮಾನ್ಯರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಲಿರುವ ರಾಜ್ಯ ಬಜೆಟ್ ಹಿಂತೆಗೆದುಕೊಳ್ಳುವ ಮೂಲಕ ಸರ್ಕಾರ ನ್ಯಾಯ ಒದಗಿಸಿಕೊಡಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ವಿಶ್ವನಾಥ ಶೆಟ್ಟಿ, ಹರೀಶ್ ಕುದ್ರೆಪ್ಪಾಡಿ, ಗೀತಾ ಬಾಲಕೃಷ್ಣನ್, ಮಧೂರು ವಲಯ ಕಾರ್ಯದರ್ಶಿ ಗುರುದಾಸ್ ಮುಳ್ಳೇರಿ ವಲಯ ಕಾರ್ಯದರ್ಶಿ ಲೀಲಾ ಕೃಷ್ಣನ್, ಉದುಮ ವಲಯ ಕಾರ್ಯದರ್ಶಿ ಸುರೇಶ್, ಶಿವನ್,, ಉಮೇಶ್, ಕುಞÂಕಣ್ಣನ್, ದಿಲೀಪ್ ಉಪಸ್ಥಿತರಿದ್ದರು.
ವಿವಿಧ ಬೇಡಿಕೆ ಮುಂದಿರಿಸಿ ಬಿಎಂಎಸ್‍ನಿಂದ ಪ್ರತಿಭಟನೆ, ಧರಣಿ
0
ಫೆಬ್ರವರಿ 08, 2023

