HEALTH TIPS

'ಇ-ಸಂಜೀವಿನಿ' ಆಯಪ್ ದೇಶದ ಡಿಜಿಟಲ್ ಕ್ರಾಂತಿಯ ಪ್ರತಿಬಿಂಬ : ಪ್ರಧಾನಿ ಮೋದಿ

 

              ನವದೆಹಲಿ: 'ಆನ್‌ಲೈನ್‌ನಲ್ಲಿ ವೈದ್ಯಕೀಯ ಸಮಾಲೋಚನೆಗಳನ್ನು ಸುಗಮಗೊಳಿಸುವ 'ಇ- ಸಂಜೀವಿನಿ' ಆಯಪ್ ಭಾರತದ ಡಿಜಿಟಲ್ ಕ್ರಾಂತಿಯನ್ನು ಪ್ರತಿಬಿಂಬಿಸುತ್ತಿದ್ದು, ಈ ಆಯಪ್‌ನಿಂದ ಇದುವರೆಗೆ 10 ಕೋಟಿಗೂ ಹೆಚ್ಚು ಜನರು ಪ್ರಯೋಜನ ಪಡೆದಿದ್ದಾರೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹೇಳಿದ್ದಾರೆ.

              'ಮನ್ ಕಿ ಬಾತ್' ಮಾಸಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ' ಈ ಆಯಪ್ ಜನಸಾಮಾನ್ಯರು, ಮಧ್ಯಮ ವರ್ಗ ಅಥವಾ ದೂರದ ಪ್ರದೇಶಗಳಲ್ಲಿ ವಾಸಿಸುವವರಿಗೆ ಜೀವ ರಕ್ಷಣೆಯ ಆಯಪ್ ಆಗುತ್ತಿದೆ. ಇದು ಭಾರತದ ಡಿಜಿಟಿಲ್ ಕ್ರಾಂತಿಯ ಶಕ್ತಿ' ಎಂದು ಅಭಿಪ್ರಾಯಪಟ್ಟರು.

                    ಭಾರತದ 'ಯುಪಿಐ' ಮತ್ತು ಸಿಂಗಪುರದ 'ಪೇ ನೌ' ನಡುವಿನ ಇತ್ತೀಚಿನ ಒಪ್ಪಂದವನ್ನು ಉಲ್ಲೇಖಿಸಿದ ಅವರು, ಈ ಒಪ್ಪಂದದಿಂದಾಗಿ ಎರಡು ದೇಶಗಳ ಜನರ ನಡುವೆ ಸುಲಭವಾದ ಹಣ ವರ್ಗಾವಣೆಗೆ ಅನುಮತಿಸಲಾಗಿದೆ. ಡಿಜಿಟಲ್ ತಂತ್ರಜ್ಞಾನದ ಅಳವಡಿಕೆಯಿಂದ ದೇಶದಲ್ಲಿ ಜೀವನ ಸೌಕರ್ಯಕ್ಕೆ ಉತ್ತೇಜನ ದೊರೆತಂತಾಗಿದೆ' ಎಂದರು.

                 'ಇ- ಸಂಜೀವಿನಿ' ಆಯಪ್ ವೈದ್ಯಕೀಯ ಸಮಾಲೋಚನೆಗಳನ್ನು ಒದಗಿಸುವಲ್ಲಿ ಎಷ್ಟು ಸಹಾಯಕವಾಗಿದೆ ಎಂಬುದನ್ನು ತೋರಿಸುವ ಸಲುವಾಗಿ ಪ್ರಧಾನಿ ಅವರು ವೈದ್ಯರು ಮತ್ತು ರೋಗಿಯೊಂದಿಗೆ ಮಾತನಾಡಿದರು. 'ಇದೊಂದು ದೊಡ್ಡ ಸಾಧನೆ. ಭಾರತದ ಜನರು ತಂತ್ರಜ್ಞಾನವನ್ನು ಹೇಗೆ ತಮ್ಮ ಜೀವನದ ಭಾಗವಾಗಿಸಿಕೊಂಡಿದ್ದಾರೆ ಎಂಬುದಕ್ಕೆ ಇದು ಜೀವಂತ ಉದಾಹರಣೆಯಾಗಿದೆ. ಕರೋನಾ ಸಮಯದಲ್ಲಿ, ಇ-ಸಂಜೀವಿನಿ ಅಪ್ಲಿಕೇಷನ್ ಒಂದು ದೊಡ್ಡ ವರವಾಗಿ ಸಾಬೀತಾಗಿದೆ ಎಂದು ನಾವು ನೋಡಿದ್ದೇವೆ' ಎಂದರು.

                   ತಮ್ಮ ಭಾಷಣದಲ್ಲಿ ಸ್ವಚ್ಛಭಾರತದ ಕುರಿತು ಮಾತನಾಡಿದ ಮೋದಿ ಅವರು, 'ಸ್ವಚ್ಛ ಭಾರತವು ಒಂದು ಸಾಮೂಹಿಕ ಆಂದೋಲನವಾಗಿದ್ದು, ನಾವೆಲ್ಲ ಸಂಕಲ್ಪ ಮಾಡಿದರೆ ಸ್ವಚ್ಛ ಭಾರತಕ್ಕೆ ಬಹುದೊಡ್ಡ ಕೊಡುಗೆ ನೀಡಬಹುದು' ಎಂದರು.

               ಭಾರತದ ಸಾಂಸ್ಕೃತಿಕ ಪರಂಪರೆ, ಭಾರತೀಯ ಕ್ರೀಡೆಗಳು ಮತ್ತು ಆಟಿಕೆಗಳ ಕುರಿತು ಉಲ್ಲೇಖಿಸಿದ ಮೋದಿ ಅವರು, 'ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ' ಸ್ವೀಕರಿಸಿದವರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries