HEALTH TIPS

ಟರ್ಕಿಗೆ 10 ಕೋಟಿ ರೂ.ಗಳ ನೆರವು: ಕೆ.ಎನ್.ಬಾಲಗೋಪಾಲ್


              ತಿರುವನಂತಪುರಂ: ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪ ಪರಿಹಾರಕ್ಕೆ ಕೇರಳ ಸರ್ಕಾರ ಆರ್ಥಿಕ ನೆರವು ಮಂಜೂರು ಮಾಡಿದೆ. ಕೇರಳ 10 ಕೋಟಿ ನೆರವು ನೀಡಿದೆ ಎಂದು ವಿತ್ತ ಸಚಿವ ಕೆ.ಎನ್.ಬಾಲಗೋಪಾಲ್ ತಿಳಿಸಿದ್ದಾರೆ.
            ಭೂಕಂಪದಿಂದ ಪೀಡಿತ ಟರ್ಕಿಯ ಜನರಿಗೆ ಸಹಾಯ ಮಾಡಲು ರಾಜ್ಯ ಬಜೆಟ್‍ನಲ್ಲಿ ಈ ಮೊತ್ತವನ್ನು ಘೋಷಿಸಲಾಗಿದೆ. ಈ ಮೊತ್ತವನ್ನು ಟರ್ಕಿಗೆ ವರ್ಗಾಯಿಸಲು ಕೇಂದ್ರ ವಿದೇಶಾಂಗ ಸಚಿವಾಲಯವೂ ಅನುಮತಿ ನೀಡಿತ್ತು.
          ಇದೇ ವೇಳೆ ಬ್ರಹ್ಮಪುರಂ ವಿಚಾರದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕೊಚ್ಚಿ ಕಾರ್ಪೋರೇಷನ್‍ಗೆ 100 ಕೋಟಿ ರೂಪಾಯಿ ದಂಡ ವಿಧಿಸಿದೆ. ಒಂದು ತಿಂಗಳೊಳಗೆ ದಂಡ ಪಾವತಿಸುವಂತೆ ಆದೇಶ ನೀಡಲಾಗಿದೆ. ರಾಜ್ಯ ಸರ್ಕಾರಕ್ಕೆ ನೀಡಿದ ಆದೇಶದಲ್ಲಿ ನ್ಯಾಯಾಲಯವು ಸೂಕ್ತ ಭಾಷೆಯಲ್ಲಿ ಟೀಕಿಸಿದೆ. ಅಗ್ನಿ ಅವಘಡ ಸಂಭವಿಸಿದಾಗ ಕ್ರಮ ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರ ಗಂಭೀರವಾಗಿ ವಿಫಲವಾಗಿದೆ ಎಂದು ನ್ಯಾಯಪೀಠ ಹೇಳಿದೆ.
           ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶವು ಸರ್ಕಾರ ಮತ್ತು ನಿಗಮವು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸೂಚಿಸುತ್ತದೆ. ಈ ಹಿಂದೆ ಕೊಚ್ಚಿಯಲ್ಲಿನ ತ್ಯಾಜ್ಯ ಹಾಗೂ ಬ್ರಹ್ಮಪುರಂ ಸ್ಥಾವರಕ್ಕೆ ಸಂಬಂಧಿಸಿದಂತೆ ನ್ಯಾಯಮಂಡಳಿ ಎಚ್ಚರಿಕೆ ನೀಡಿತ್ತು. ಆದರೆ ಸರ್ಕಾರ ಇದಕ್ಕೆ ಕಿಮ್ಮತ್ತಿನ ಬೆಲೆಯನ್ನೂ ನೀಡಿರಲಿಲ್ಲ. ಅಗತ್ಯ ಬಿದ್ದರೆ 500 ಕೋಟಿ ದಂಡ ವಿಧಿಸಲಾಗುವುದು ಎಂದು ಎ.ಕೆ. ಗೋಯಲ್ ನೇತೃತ್ವದ ಪೀಠ ಎಚ್ಚರಿಕೆ ನೀಡಿತ್ತು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries