ಕುಂಬಳೆ: ನಾರಾಯಣಮಂಗಲ ಸಮೀಪದ ಕಾನ ಶ್ರೀಶಂಕರನಾರಾಯಣ ಮಠದಲ್ಲಿ ವರ್ಷಾವಧಿ ಹೊಸ್ತಿನ ದೇವಕಾರ್ಯ ಮತ್ತು ಶ್ರೀಧೂಮಾವತಿ ದೈವದ ಪುದ್ವಾರು ಕೋಲ ಮಾ.11 ಹಾಗೂ 12 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಮಾ.10 ರಂದು ಬೆಳಿಗ್ಗೆ 7 ಕ್ಕೆ ಗಣಪತಿಹವನ, 8 ಕ್ಕೆ ಶುದ್ದಿಕಲಶ, 8.30 ಕ್ಕೆ ನಾಗತಂಬಿಲ, 9 ಕ್ಕೆ ಪೂಜೆ,10 ಕ್ಕೆ ಕೊಪ್ಪರಿಗೆ ಮುಹೂರ್ತ, 12 ಕ್ಕೆ ಶ್ರೀಶಂಕರನಾರಾಯಣ ದೇವರಿಗೆ ಮಹಾಪೂಜೆ ನಡೆಯಲಿದೆ. ಸಂಜೆ 6.30 ರಿಂದ ಹರೀಶ್ ಜೋಷಿ ವಿಟ್ಲ ಅವರ ಸಂಯೋಜನೆಯಲ್ಲಿ ಹವಿಗನ್ನಡ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಮಾ.11 ರಂದು ಬೆಳಿಗ್ಗೆ 7.30 ಕ್ಕೆ ಗಣಪತಿಹವನ, 7.30 ಕ್ಕೆ ಶುದ್ದಿಕಲಶ, 7.45 ಕ್ಕೆ ನಾಗತಂಬಿಲ, 8 ಕ್ಕೆ ರುದ್ರ ಪಠಣ ಆರಂಭ, 10.30 ರಿಂದ ತುಲಾಭಾರ ಸೇವೆ, 11 ಕ್ಕೆ ಶ್ರೀಶಂಕರನಾರಾಯಣ ದೇವರಿಗೆ ಮಹಾಪೂಜೆ ನಡೆಯಲಿದೆ. 10.30ಕ್ಕೆ ಸಮಾರಾಧನೆ ನಡೆಯಲಿದೆ. ಸಂಜೆ 5.30 ಕ್ಕೆ ಶೇಡಿಗುಮ್ಮೆ ದಿ.ಭಾಗವತ ಕೃಷ್ಣ ಭಟ್ಟರ ಸ್ಮರಣಾರ್ಥ ಛಲಂದಕ ಕೌರವ ಆಖ್ಯಾಯಿಕೆಯ ತಾಳಮದ್ದಳೆ ನಡೆಯಲಿದೆ. ಸಂಜೆ 7.30 ಕ್ಕೆ ಭಂಡಾರ ಮನೆಯಿಂದ ಶ್ರಿಧೂಮಾವತಿ ದೈವದ ಭಂಡಾರ ಹೊರಟು ದೈವಸ್ಥಾನದಲ್ಲಿ ತಂಬಿಲ ಮುಗಿಸಿ ಶ್ರೀಮಠಕ್ಕೆ ಆಗಮನ, ಶ್ರೀಶಂಕರನಾರಾಯಣ ದೇವರಿಗೆ ಮಹಾಪೂಜೆ, ಶ್ರೀಧೂಮಾವತಿ ದೈವಗಳ ತೊಡಂಙಲ್ ನಡೆಯಲಿದೆ. ಮಾ.6 ರಂದು ಬೆಳಿಗ್ಗೆ 9.30 ಕ್ಕೆ ಶ್ರೀಧೂಮಾವತಿ ದೈವದ ಕೋಲದೊಂದಿಗೆ ಉತ್ಸವ ಸಮಾರೋಪಗೊಳ್ಳಲಿದೆ.
ಕಾನಮಠದಲ್ಲಿ ಹೊಸ್ತಿನ ದೇವಕಾರ್ಯ ಮತ್ತು ಧೂಮಾವತಿ ದೈವಕೋಲ 11 ರಿಂದ
0
ಮಾರ್ಚ್ 01, 2023





