ಕಣ್ಣೂರು: ಸೋಲಾರ್ ಪ್ರಕರಣ ವಿರುದ್ದ ನಡೆದ ಪ್ರತಿಭಟನೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣದಲ್ಲಿ ಮೂವರು ತಪ್ಪಿತಸ್ಥರು ಎಂದು ನ್ಯಾಯಾಲಯ ತೀರ್ಪು ನೀಡಿದೆ.
88ನೇ ಆರೋಪಿ ದೀಪಕ್, 18ನೇ ಆರೋಪಿ ಸಿಒಟಿ ನಸೀರ್ ಮತ್ತು 99ನೇ ಆರೋಪಿ ಬಿಜು ಪರಂಬತ್ ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಪು ನೀಡಿದೆ. 110 ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ತೀರ್ಪು ಕಣ್ಣೂರು ಸಬ್ ಕೋರ್ಟ್ ಗೆ ಸೇರಿದ್ದು. ಘಟನೆಯಲ್ಲಿ 113 ಮಂದಿ ಆರೋಪಿಗಳಾಗಿದ್ದರು. ನ್ಯಾಯಾಲಯ ಮೂವರನ್ನು ತಪ್ಪಿತಸ್ಥರೆಂದು ತೀರ್ಪು ನೀಡಿದೆ. ಅವರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯ ಶಿಕ್ಷೆಯನ್ನು ನಂತರ ನಿರ್ಧರಿಸುತ್ತದೆ.
2013ರ ಅಕ್ಟೋಬರ್ 27ರಂದು ಈ ಘಟನೆ ನಡೆದಿತ್ತು. ರಾಜಕೀಯವಾಗಿ ಭಾರೀ ಕೋಲಾಹಲ ಸೃಷ್ಟಿಸಿದ್ದ ಸೋಲಾರ್ ಕೇಸ್ ಹೊತ್ತಿ ಉರಿಯುತ್ತಿದ್ದ ಕಾಲ ಅದು. ಇದೇ ವೇಳೆ ಪೆÇಲೀಸ್ ಅಥ್ಲೆಟಿಕ್ ಕೂಟದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಕಣ್ಣೂರಿಗೆ ಬಂದಾಗ ಆಗ ಮುಖ್ಯಮಂತ್ರಿಯಾಗಿದ್ದ ಉಮ್ಮನ್ ಚಾಂಡಿ ಮೇಲೆ ಕಲ್ಲು ತೂರಾಟ ನಡೆದಿತ್ತು. ಇದು ದೊಡ್ಡ ರಾಜಕೀಯ ವಿವಾದವಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಲು ಉಮ್ಮನ್ ಚಾಂಡಿ ಬಂದ ದಿನವೇ ಎಡಪಕ್ಷಗಳ ಕಾರ್ಯಕರ್ತರು ಕಲೆಕ್ಟರೇಟ್ ಎದುರು ಪ್ರತಿಭಟನೆ ನಡೆಸಿದ್ದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಧಿಕೃತ ವಾಹನದಲ್ಲಿ ಬರುತ್ತಿದ್ದ ವೇಳೆ ಕಲ್ಲು ತೂರಾಟ ನಡೆದಿದೆ. ದಾಳಿಯಲ್ಲಿ ಕಾರಿನ ಗಾಜು ಒಡೆದು ತಲೆ ಮತ್ತು ಎದೆಗೆ ಗಾಯವಾಗಿತ್ತು. ಆದರೆ ಗಾಯದ ನಡುವೆಯೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಮ್ಮನ್ ಚಾಂಡಿ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.
ಉಮ್ಮನ್ ಚಾಂಡಿ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣದಲ್ಲಿ ನ್ಯಾಯಾಲಯದಿಂದ ಮೂವರ ತಪ್ಪಿತಸ್ಥರೆಂದು ಪರಿಗಣನೆ: 110 ಆರೋಪಿಗಳ ಖುಲಾಸೆ
0
ಮಾರ್ಚ್ 27, 2023





