HEALTH TIPS

ಮಾ.11 ಕ್ಕೆ ತೊಟ್ಟೆತ್ತೋಡಿ ಶಾಲಾ ಅಮೃತ ಮಹೋತ್ಸವ


                   ಮಂಜೇಶ್ವರ: ತೊಟ್ಟೆತ್ತೋಡಿ ವಾಣೀವಿಲಾಸ ಕಿರಿಯ ಪ್ರಾಥಮಿಕ ಶಾಲೆಯ 75 ವರ್ಷಗಳನ್ನು ಪೂರೈಸಿದ್ದು ಮಾರ್ಚ್ 11ರಂದು ಅಮೃತಮಹೋತ್ಸವವನ್ನು ಸಡಗರದಿಂದ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಲಿದೆ.
              ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಪ್ರಬಂಧಕಿ ಪ್ರೇಮಾ ಕೆ ಭಟ್ ತೊಟ್ಟೆತ್ತೋಡಿ ಧ್ಜಾರೋಹಣಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡುವರು.
             ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮೀಂಜ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಮೀನಾ ಟೀಚರ್ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಮೀಂಜ ಗ್ರಾಮ ಪಂಚಾಯತಿ ಸದಸ್ಯರಾದ ಸರಸ್ವತಿ ಕೆ, ಕುಸುಮ ಮೋಹನ್, ಚಂದ್ರಶೇಖರ ಕೋಡಿ, ಜನಾರ್ಧನ ಕುಳೂರು, ಹಾಗೂ ಮಜಿಬೈಲು ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಂಜೀವ ಶೆಟ್ಟಿ ಭಾಗವಹಿಸುವರು. ಬಳಿಕ ಹಳೆವಿದ್ಯಾರ್ಥಿಗಳಿಂದ ಛದ್ಮವೇಶ ಸ್ಪರ್ಧೆ ಹಾಗೂ ಸ್ಥಳೀಯ ಅಂಗನವಾಡಿ ಪುಟಾಣಿಗಳಿಂದ ನೃತ್ಯ ವೈವಿಧ್ಯ ಜರಗಲಿದೆ.
           ಅಪರಾಹ್ನ 2.30ಕ್ಕೆ ನಡೆಯುವ ಸಮಾರಂಭದಲ್ಲಿ ಹಳೆ ವಿದ್ಯಾರ್ಥಿಸಂಘದ ಅಧ್ಯಕ್ಷ ಉದಯಕುಮಾರ್ ಟಿ.ಆರ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ರಾಧಾಕೃಷ್ಣ ಕೆ.ವಿ., ಉದ್ಯಮಿಗಳಾದ ರಂಜಿತ್ ಹೊಸಕಟ್ಟೆ, ಮನೋಜ್ ಹೊಸಕಟ್ಟೆ, ಕೃಷ್ಣಪ್ಪ ಪೂಜಾರಿ ದೇರಂಬಳ ಉಪಸ್ಥಿತರಿರುವರು. ಹಳೆವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ವಸಂತ ಭಟ್ ತೊಟ್ಟೆತ್ತೋಡಿ, ಎಸ್ ಎಸ್ ಜಿ ಅಧ್ಯಕ್ಷ ಸದಾಶಿವ ರಾವ್ ಟಿ ಡಿ ಉಪಸ್ಥಿತರಿರುವರು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಶಾಲಾ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರಗಲಿದೆ.
          ರಾತ್ರಿ 7ರಿಂದ ಸಮಾರೋಪ ಸಮಾರಂಭ ಜರಗಲಿದ್ದು, ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ದೇವದಾಸ್ ಶೇನವ ದೇರಂಬಳ ಅಧ್ಯಕ್ಷತೆ ವಹಿಸುವರು. ಮಂಜೇಶ್ವರ ಶಾಸಕ ಎ.ಕೆ.ಎಂ .ಅಶ್ರಫ್ ಉದ್ಘಾಟಿಸುವರು. ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ನೂತನ ಭೋಜನ ಗೃಹಕ್ಕೆ ಶಿಲಾನ್ಯಾಸ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯೆ ಕಮಲಾಕ್ಷಿ ಕೆ, ಜಿಲ್ಲಾ ವಿದ್ಯಾಧಿಕಾರಿ ನಂದಿಕೇಶನ್, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ ವಿ, ಬಿ.ಪಿ.ಸಿ. ವಿಜಯಕುಮಾರ್, ಸಾಹಿತಿ ಆಯಿμÁ ಪೆರ್ಲ, ನಿವೃತ್ತ ಮುಖ್ಯೋಪಾಧ್ಯಾಯ  ಅಬ್ದುಲ್ ರಹಿಮಾನ್, ಉದ್ಯಮಿಗಳಾದ, ಮಾರ್ಸೆಲ್ ಮೊಂತೇರೋ, ದಿನೇಶ್ ರೈ ಕಳ್ಳಿಗೆ ಉಪಸ್ಥಿತರಿರುವರು.  
       ಸಂಸ್ಥೆಯ ಪೂರ್ವ ಸಂಚಾಲಕಿ ಪ್ರೇಮಾ ಕೆ ಭಟ್. ತೊಟ್ಟೆತ್ತೋಡಿ, ಅವರಿಗೆ ವಿಶೇಷ ಸನ್ಮಾನ ಜರಗಲಿದ್ದು, ನಿವೃತ್ತಿ ಹೊಂದಲಿರುವ ಶಿಕ್ಷಕಿ ಸಫಿಯಾ ಪಿ ಅವರಿಗೆ ಬೀಳ್ಕೊಡುಗೆ ಜರಗಲಿದೆ. ಶಾಲಾ ಸೇವೆಗೈದ ಅಧ್ಯಾಪಕ ಅಧ್ಯಾಪಿಕೆಯರಿಗೆ, ಶಾಲಾ ಹಳೆವಿದ್ಯಾರ್ಥಿ ಸಾಧಕರಿಗೆ ಗೌರವಾರ್ಪಣೆ ಜರಗಲಿದೆ.
            ಬಳಿಕ ಭ್ರಾಮರಿ ಕಲಾವಿದೆರ್ ಉಪ್ಪಳ ತಂಡದವರಿಂದ “ಬೊಕ್ಕ ತೂಕ” ತುಳು ನಾಟಕ ಜರಗಲಿದೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries