ಕಾಸರಗೋಡು: ಅಜ್ಜರಕಾನ ಉಂಡೆಮನೆ ರಕ್ತೇಶ್ವರೀ ಸೇವಾ ಟ್ರಸ್ಟ್ ಆಶ್ರಯದಲ್ಲಿ ಉಂಡೆಮನೆ ಕುಳ್ಳಂಬೆಟ್ಟು ತರವಾಡಿನ ವಾರ್ಷಿಕೋತ್ಸವ, ದೈವಕೋಲ ಅಂಗವಾಗಿ ವಿಶೇಷ ತಾಳಮದ್ದಳೆ ಕೂಟ 'ವಾಲಿ ಮೋಕ್ಷ' ಮಾ. 28ರಂದು ರಾತ್ರಿ 10ಕ್ಕೆ ಕುಳ್ಳಂಬೆಟ್ಟು ತರವಾಡುಮನೆಯಲ್ಲಿ ಜರುಗಲಿದೆ. ಶೇಣಿ ರಂಗಜಂಗಮ ಟ್ರಸ್ಟ್ ಕಾಸರಗೋಡು ಹಾಗೂ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕøತಿಕ ಪ್ರತಿಷ್ಠಾನ ಉಜಿರೆ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯುವುದು. ಭಾಗವತರಾಗಿ ಡಾ. ಸತೀಶ ಪುಣಿಂಚಿತ್ತಾಯ ಪೆರ್ಲ, ಸುಧೀಶ್ ಪಾಣಾಜೆ, ಚೆಂಡೆ-ಮದ್ದಳೆಯಲ್ಲಿ ಶಿವಶಂಕರ ಭಟ್ ಅಂಬೆಮೂಲೆ, ಟಿ.ಡಿ ಗೋಪಾಲಕೃಷ್ಣ ಭಟ್, ಅರ್ಥಧಾರಿಗಳಾಗಿ ಉಜಿರೆ ಅಶೋಕ ಭಟ್, ಸರ್ಪಂಗಳ ಈಶ್ವರ ಭಟ್, ನಾ.ಕಾರಂತ ಪೆರಾಜೆ, ಶೇಣಿ ವೇಣುಗೋಪಾಲಕೃಷ್ಣ ಭಟ್ ಸಹಕರಿಸುವರು.
ಕುಳ್ಳಂಬೆಟ್ಟು ತರವಾಡು ವಾರ್ಷಿಕೋತ್ಸವ-28ಕ್ಕೆ ವಿಶೇಷ ತಾಳಮದ್ದಳೆ
0
ಮಾರ್ಚ್ 26, 2023




