HEALTH TIPS

ಬಾಲಕಿಗೆ ಲೈಂಗಿಕ ಕಿರುಕುಳ-ಆರೋಪಿಗೆ 88 ವರ್ಷಗಳ ಕಠಿಣ ಜೈಲು ಶಿಕ್ಷೆ, ಏಳು ಲಕ್ಷ ರೂ. ದಂಡ



                ಕಾಸರಗೋಡು: ಒಂಬತ್ತರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ದೇಲಂಪಾಡಿ ಚಾಮೆತ್ತಡ್ಕ ನಿವಾಸಿ ಮಹಮ್ಮದ್ ಅಲಿಯಾಸ್ ಎಸಲ್ಲೂರ್ ಮಹಮ್ಮದ್(60) ಎಂಬಾತನಿಗೆ ನ್ಯಾಯಾಲಯ ವಿವಿಧ ಕಾಯ್ದೆಗಳನ್ವಯ 88ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಏಳು ಲಕ್ಷ ರೂ.. ದಂಡ ವಿಧಿಸಿದೆ.
           ದಂಡ ಪಾವತಿಸದಿದ್ದಲ್ಲಿ ಆರೋಪಿ ಏಳು ವರ್ಷಗಳ ಹೆಚ್ಚಿನ ಜೈಲು ಶಿಕ್ಷೆ ಅನುಭವಿಸುವಂತೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ(ಪ್ರಥಮ)ದ  ನ್ಯಾಯಾಲಯದ ನ್ಯಾಯಾಧೀಶ ಮನೋಜ್ ಅವರು ಪೋಕ್ಸೋ ಕಾನೂನಿನ ವಿವಿಧ ಸೆಕ್ಷನ್‍ಗಳನ್ವಯ ಈ ತೀರ್ಪು ನೀಡಿದ್ದಾರೆ. ಶಿಕ್ಷೆಯನ್ನು ಒಟ್ಟಾಗಿ 40ವರ್ಷಗಳ ಕಾಲ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ. 2019 ಆಗಸ್ಟ್ ತಿಂಗಳಲ್ಲಿ ಬಾಲಕಿಯೊಬ್ಬಳನ್ನು ಆಮಿಷವೊಡ್ಡಿ ಮನೆ ಸನಿಹದ ನಿರ್ಜನ ಪ್ರದೇಶಕ್ಕೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಆದೂರು ಠಾಣೆ ಪೊಲೀಸರು ಕೇಸು ದಆಖಲಿಸಿಕೊಂಡಿದ್ದರು.ದಂಡವಾಗಿ ಪಾವತಿಸುವ ಮೊತ್ತವನ್ನು ಸಂತ್ರಸ್ತ ಬಾಲಕಿಗೆ ನಷ್ಟಪರಿಹಾರ ರಊಪದಲ್ಲಿ ನೀಡುವಂತೆ ಸೂಚಿಸಲಾಗಿದೆ.ಪ್ರೋಸಿಕ್ಯೂಶನ್ ಪರವಾಗಿ ಪಬ್ಲಿಕ್ ಪ್ರೋಸಿಕ್ಯೂಟರ್ ಪ್ರಕಾಶ್ ಅಮ್ಮಣ್ಣಾಯ ನ್ಯಾಐಆಲಯದಲ್ಲಿ ವಾದಿಸಿದ್ದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries