HEALTH TIPS

ಸಂಸಾರದ ಗುಟ್ಟು ಸೋಷಿಯಲ್‌ ಮೀಡಿಯಾದಲ್ಲಿ ಯಾವುದೇ ಕಾರಣಕ್ಕೆ ರಟ್ಟಾಗಲೇ ಬಾರದು ನೋಡಿ

 ಸಂಸಾರದ ಗುಟ್ಟು ರಟ್ಟಾಗಬಾರದು ಎಂದು ಹೇಳುತ್ತಾರೆ, ಆದರೆ ಈಗ ಸೋಷಿಯಲ್‌ ಮೀಡಿಯಾ ಬಂದ ನಮ್ಮ ಸಂಸಾರದೊಳಗಡೆ ನಡುವೆ ವಿಷಯವನ್ನು ಸಾಮಾಜಿಕ ತಾಣದಲ್ಲಿ ಹಾಕಲಾರಂಭಿಸಿದ್ದಾರೆ.

ಗಂಡ- ಹೆಂಡತಿ ತಬ್ಬಿಕೊಂಡು ಮುದ್ದಾಡುವುದು ಅವರ ಖಾಸಗಿ ವಿಷಯ, ಆದರೆ ನಾವೆಷ್ಟು ಪ್ರೀತಿ ಮಾಡುತ್ತೇವೆ ಎಂಬುವುದನ್ನು ತೋರಿಸಿಕೊಳ್ಳಲು ಸಾಮಾಜಿಕ ತಾಣಗಳಲ್ಲಿ, ವಾಟ್ಸಾಪ್‌ ಸ್ಟೇಟಸ್‌ಗಳಲ್ಲಿ ಫೋಟೋಗಳನ್ನು ಅಪ್‌ಲೋಡ್‌ ಮಾಡುವವರಿಗೇನೂ ಕಡಿಮೆಯಿಲ್ಲ.

ಇತ್ತೀಚೆಗೆ ನಟಿ ಸ್ವರ ಭಾಸ್ಕರ್‌ ಮೊದಲ ರಾತ್ರಿ ತಮ್ಮ ಕೋಣೆ ಅಲಂಕಾರಗೊಂಡಿರುವ ಫೋಟೋವನ್ನು ಹಾಕುವ ಮೂಲಕ ಸಕತ್‌ ಟ್ರೋಲ್‌ಗೊಳಗಾಗಿದ್ದರು. ಸಾಮಾಜಿಕ ತಾಣದಲ್ಲಿ ನಮ್ಮ ಸಂಬಂಧದ ಕುರಿತು ಫೋಟೋಗಳನ್ನು ಹಾಕುವ ಮೂಲಕ ನಿಜವಾಗಲೂ ನಮಗೆ ನಾವು ಸಮಸ್ಯೆಗಳನ್ನು ತಂದೊಡ್ಡುವ ಕೆಲಸ ಮಾಡುತ್ತಿದ್ದೇವೆ ಎಂಬುವುದು ಬಹುತೇಕ ಜನರಿಗೆ ಗೊತ್ತೇ ಇರುವುದಿಲ್ಲ.

ಸಾಮಾಜಿಕ ತಾಣಗಳಲ್ಲಿ ಫೋಟೋಗಳನ್ನು ಹಾಕುವ ಮೂಲಕ ಬೇರೆಯವರ ಬಾಯಿಗೆ ಆಹಾರವಾಗುತ್ತೇವೆ

ನಾವು ಒಂದು ಫೋಟೋ ಅಪ್‌ಲೋಡ್‌ ಮಾಡಿದಾಗ ಅದಕ್ಕೆ ಪಾಸಿಟಿವ್‌, ನೆಗೆಟಿವ್ ಕಮೆಂಟ್ ಎರಡೂ ಬರಬಹುದು, ಆದ್ದರಿಂದ ನಮ್ಮ ಫೋಟೋಗಳನ್ನು ಹಾಕುವಾಗ ತುಂಬಾನೇ ಎಚ್ಚರವಹಿಸಬೇಕು. ಯಾವ ಫೋಟೋ ಹಾಕಬೇಕು, ಯಾವುದು ಹಾಕಬಾರದು ಎಂದು ಫಿಲ್ಟರ್ ಮಾಡಿ ಹಾಕಿದರೆ ಒಳ್ಳೆಯದು. ಫಿಲ್ಟರ್ ಅಂದ್ರೆ ಫೋಟೋ ಫಿಲ್ಟರ್ ಅಲ್ಲ, ತುಂಬಾ ರೊಮ್ಯಾಂಟಿಕ್ ಅನಿಸುವ ಫೋಟೋಗಳನ್ನು ಶೇರ್ ಮಾಡದಿದ್ದರೆ ಒಳ್ಳೆಯದು.

ಮಾನಸಿಕ ಒತ್ತಡ ಅಧಿಕವಾಗುವುದು

ನೀವು ಒಂದು ಫೋಟೋ ಅಪ್ಲೋಡ್‌ ಮಾಡಿದಾಗ ಅದಕ್ಕೆ ಕಮೆಂಟ್‌, ಲೈಕ್‌ ಬಂದಾಗ ಖುಷಿಯಾಗುವುದು, ನಂತರ ಎಲ್ಲಿ ಹೋದರು ಫೋಟೋ ತೆಗೆಯುವುದರಲ್ಲಿಯೇ ಬ್ಯುಸಿಯಾಗುತ್ತೇವೆ. ಒಂದು ರೆಸ್ಟೋರೆಂಟ್‌ಗೆ ಹೋದರೆ ಅಲ್ಲಿ ತಿಂಡಿ ಸವಿಯುವ ಬದಲಿಗೆ ಫೋಟೋಗೆ ಪೋಸ್‌ ಕೊಡುವುದೇ ಮುಖ್ಯವಾಗುತ್ತದೆ. ಹೀಗಾಗಿ ಆ ಕ್ಷಣವನ್ನು ಅನುಭವಿಸಲು ಸಾಧ್ಯವಾಗಲು.

ನಿಮ್ಮ ಸಂಸಾರದ ಗುಟ್ಟು ರಟ್ಟಾಗಿಸುವ ವಾಟ್ಸಾಪ್‌ ಸ್ಟೇಟಸ್‌ಗಳು

ಕೆಲವರು ತಮ್ಮ ಸಂಸಾರದಲ್ಲಿ ಒಂದು ಚಿಕ್ಕ ಸಮಸ್ಯೆಯಾದರೆ ಸಾಕು ಅದಕ್ಕೆ ರಿಲೇಟ್‌ ಆಗುವಂಥ ಫೋಟೋ, ಹಾಡುಗಳನ್ನು ಸ್ಟೇಟಸ್‌ ಆಗಿ ಅಪ್ಲೋಡ್ ಮಾಡುತ್ತಾರೆ. ಅದು ನೋಡುವಾಗಲೇ ಇವರ ಸಂಸಾರದಲ್ಲಿ ಏನೋ ಸಮಸ್ಯೆ ಇದೆ ಎಂಬುವುದು ಗೊತ್ತಾಗುತ್ತದೆ. ಈ ಮೂಲಕ ನಿಮ್ಮ ಸಂಸಾರ ಗುಟ್ಟನ್ನು ನೀವೇ ರಟ್ಟು ಮಾಡಿ ಬೇರೆಯವರಿಗೆ ಬಿಟ್ಟಿ ಮನರಂಜನೆ ನೀಡುತ್ತಿದ್ದೀರಿ ಎಂಬುವುದು ನೆನಪಿರಲಿ.

ಸೋಷಿಯಲ್‌ ಮೀಡಿಯಾದಲ್ಲಿ ಹ್ಯಾಪಿ ಕಪಲ್‌ ಪೋಸ್ ಅದು ರಿಯಲ್ ಅಲ್ಲ

ಎಷ್ಟೋ ಜನರು ಸೋಷಿಯಲ್‌ ಮೀಡಿಯಾದಲ್ಲಿ ಹ್ಯಾಪಿ ಕಪಲ್‌ ಪೋಸ್‌ ಹಾಕುತ್ತಾರೆ, ಆದರೆ ಆ ರೀತಿ ಫೋಟೋ ಹಾಕಿದ ಮಾತ್ರಕ್ಕೆ ಅವರಿಬ್ಬರ ದಾಂಪತ್ಯ ತುಂಬಾನೇ ಚೆನ್ನಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ನಾವು ನಿಜವಾಗಿಯೂ ಖುಷಿಯಾಗಿರದೆ ಫೋಟೋವನ್ನು ಹಾಕಿ ನಾವು ಸೂಪರ್ ಎಂದು ತೋರಿಸಿಕೊಳ್ಳವುದರಿಂದ ಏನು ಪ್ರಯೋಜನ, ಅದರ ಬದಲಿಗೆ ಸಂಬಂಧವನ್ನು ಗಟ್ಟಿಯಾಗಿಸಲು ನೋಡುವುದು ಒಳ್ಳೆಯದು.

ಪ್ರೇಮಿಗಳಾಗಿದ್ದರೆ

ನೀವು ಪ್ರೇಮಿಗಳಾಗಿದ್ದರೆ ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚಾಗಿ ಜೋಡಿ ಫೋಟೋಗಳನ್ನು ಶೇರ್‌ ಮಾಡಲು ಹೋಗಬೇಡಿ, ನಿಮ್ಮ ಸಂಬಂಧದ ಬಗ್ಗೆ ಭರವಸೆ ಇರಲಿ, ಆದರೆ ಸೋಷಿಯಲ್‌ ಮೀಡಿಯಾ ಮೂಲಕ ಗಮನ ಸೆಳೆಯಲು ಹೋಗಬೇಡಿ.

ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಹಾಕಬೇಡಿ ಅಂತ ಹೇಳ್ತಾ ಇಲ್ಲ, ನಿಮ್ಮ ಖುಷಿಗೆ ಹಾಕಿ. ಆದರೆ ನಿಮ್ಮ ಸಂಬಂಧವನ್ನು ಬೇರೆಯವರ ಮುಂದೆ ಪ್ರದರ್ಶನ ಮಾಡಲು ಹಾಕಬೇಡಿ.

ಇನ್ನು ಕೆಲವರು ಸೋಷಿಯಲ್‌ ಮೀಡಿಯಾ ಫೋಟೋಗಳನ್ನು ನೋಡಿ ಹೋಲಿಕೆ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಇರುವ ಖುಷಿಯನ್ನು ಕಳೆದುಕೊಳ್ಳುತ್ತೀರಿ. ನಮ್ಮ ಖಾಸಗಿ ವಿಷಯಗಳನ್ನು ಸೋಷಿಯಲ್ ಮೀಡಿಯಾದಿಂದ ದೂರವಿಡುವುದು ಒಳ್ಳೆಯದು.

ಎಲ್ಲಿಗಾದರೂ ಹೋದರೆ ನಿಮ್ಮ ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆಯಿರಿ, ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಹಾಕುವ ಸಲುವಾಗಿ ಫೋಟೋ ತೆಗಿಸಿಕೊಳ್ಳುವುದರಲ್ಲಿಯೇ ಬ್ಯುಸಿಯಾಗಬಾರದು ಅಲ್ವಾ? ಈ ಕುರಿತು ನಿಮ್ಮ ಅಭಿಪ್ರಾಯವೇನು?


 

 

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries