ಮಲಪ್ಪುರಂ: ಅಸ್ತಿತ್ವದಲ್ಲಿರುವ ಇಸ್ಲಾಂ ಕಾನೂನುಗಳನ್ನು ಪ್ರಶ್ನಿಸಿ ವಿಶೇಷ ವಿವಾಹ ಕಾಯ್ದೆಯಡಿ ಎರಡನೇ ಬಾರಿ ವಿವಾಹಿತರಾದ ಶುಕೂರ್-ಶೀನಾ ದಂಪತಿ ವಿರುದ್ಧ ಸಮಸ್ತ ಕೇರಳ ಜಂ ಇಯತುಲ್ ಉಲಮಾ ಅಧ್ಯಕ್ಷ ಜೆಫ್ರಿ ಮುತ್ತುಕೋಯ ತಂಙಳ್ ಹರಿಹಾಯ್ದಿದ್ದಾರೆ.
'ಇದು ಮುಸ್ಲಿಂ ಉತ್ತರಾಧಿಕಾರವಲ್ಲ. ನೀವು ಹೆಣ್ಣುಮಕ್ಕಳಿಗೆ ಮಾತ್ರ ಆಸ್ತಿಯನ್ನು ನೀಡಬೇಕಾದರೆ, ನೀವು ಆಸ್ತಿಯನ್ನು ಉಯಿಲು ಅಥವಾ ಉಡುಗೊರೆಯಾಗಿ ನೀಡಬಹುದು. ಆಸ್ತಿ ಕೊಡುವ ಅಗತ್ಯವಿಲ್ಲ ಎಂಬುದು ಸಮಸ್ತದ ನಿಲುವಾಗಿದೆ' ಎಂದು ಜೆಫ್ರಿ ಮುತ್ತುಕೋಯ ತಂಙಳ್ ಹೇಳಿದರು.
ಹೆಣ್ಣು ಮಕ್ಕಳ ಸಮಾನತೆಯ ಹಕ್ಕನ್ನು ರಕ್ಷಿಸಲು ಶುಕೂರ್ ಮತ್ತು ಶೀನಾ ಮರುವಿವಾಹವಾದರು, ಆದ್ದರಿಂದ ತಮ್ಮ ಹೆಣ್ಣುಮಕ್ಕಳ ಆಸ್ತಿ ಪಾಲಾಗಬಾರದು ಎಂಬುದು ಲಕ್ಷ್ಯವಾಗಿತ್ತು. ಮೊದಲಿಗೆ ಇವರಿಬ್ಬರೂ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾಗಿದ್ದರು.
ಎರಡನೇ ವಿವಾಹದ ನಂತರ ವ್ಯಕ್ತಿಗಳು ಮತ್ತು ಸಂಘಟನೆಗಳು ಶುಕೂರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಕಿದ್ದವು. ಕೊನೆಗೂ ಮನೆ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ಗುಪ್ತಚರ ವರದಿ ಹಿನ್ನೆಲೆಯಲ್ಲಿ ಅಡ್ವ. ಶುಕೂರ್ ಅವರ ಮನೆಗೆ ಪೆÇಲೀಸ್ ಭದ್ರತೆ ಒದಗಿಸಲಾಗಿದೆ.
ಇದು ಮುಸ್ಲಿಂ ಉತ್ತರಾಧಿಕಾರವಲ್ಲ ಕಾಯ್ದೆಯಲ್ಲ: ಅಡ್ವ. ಶುಕೂರ್-ಶೀನಾ ಜೋಡಿಯ ಮರು ವಿವಾಹದ ವಿರುದ್ಧ ಜೆಫ್ರಿ ಮುತ್ತುಕೋಯ ತಂಙಳ್
0
ಮಾರ್ಚ್ 16, 2023


