ಕೊಚ್ಚಿ: ಕೇರಳದ ಮೂಲದ ಯುವತಿಯೊಬ್ಬಳು ಮೈಸೂರಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಆಕೆಯ ಸ್ನೇಹಿತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
0
samarasasudhi
ಮಾರ್ಚ್ 25, 2023
ಕೊಚ್ಚಿ: ಕೇರಳದ ಮೂಲದ ಯುವತಿಯೊಬ್ಬಳು ಮೈಸೂರಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಆಕೆಯ ಸ್ನೇಹಿತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮೃತ ಯುವತಿಯನ್ನು ಸಬಿನಾ (30) ಎಂದು ಗುರುತಿಸಲಾಗಿದೆ. ಈಕೆ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದಳು.
ಸುಹಾಸ್ ಜತೆ ನಡೆದ ಜಗಳದ ಸಮಯದಲ್ಲಿ ಸಬಿನಾ ಸಾವು ಸಂಭವಿಸಿರಬಹುದು ಎಂದು ಸಬಿನಾ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಕಳೆದ ಒಂದು ವರ್ಷದಿಂದ ಮೈಸೂರಿನಲ್ಲಿ ಖಾಸಗಿ ಮೊಬೈಲ್ ಕಂಪನಿಯಲ್ಲಿ ಸಬಿನಾ ಕೆಲಸ ಮಾಡುತ್ತಿದ್ದಳು. ನಮಗೆ ಪ್ರತಿದಿನ ಕರೆ ಮಾಡುತ್ತಿರಲಿಲ್ಲ, ಅಪರೂಪಕ್ಕೆ ಒಮ್ಮೆ ಕರೆ ಮಾಡುತ್ತಿದ್ದಳು ಎಂದು ಪಾಲಕರು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಸಬಿನಾ ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ. ಪ್ರಕರಣ ಸಂಬಂಧ ಪೊಲೀಸ್ ತನಿಖೆ ಮುಂದುವರಿದಿದೆ.