HEALTH TIPS

ಲಕ್ಷುರಿ ವಾಹನ, ಒಯೊ ರೂಮ್​ನಲ್ಲೇ ವಾಸ! ಬಂಧನದಿಂದ ತಪ್ಪಿಸಿಕೊಳ್ಳಲು ಈಕೆ ಮಾಡಿದ ತಂತ್ರ ಒಂದೆರಡಲ್ಲ​​

                    ಕೊಚ್ಚಿ: ನಗರದಲ್ಲಿ ನಡೆಯುತ್ತಿದ್ದ ಡಿಜೆ ಪಾರ್ಟಿಗಳಿಗೆ ಡ್ರಗ್ಸ್​ ಕಳ್ಳಸಾಗಾಣೆ ಮಾಡುತ್ತಿದ್ದ ಗ್ಯಾಂಗ್​ನ ಪ್ರಮುಖ ಸೂತ್ರಧಾರಿಯನ್ನು ಕೇರಳದ ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

               ಬಂಧಿತಳನ್ನು 29 ವರ್ಷದ ರೋಸ್​ ಹೆಮ್ಮಾ (ಶೆರಿನ್​ ಚಾರು) ಎಂದು ಗುರುತಿಸಲಾಗಿದೆ.

ಈಕೆ ಕೇರಳದ ಚೇರ್ತಲಾ ಮೂಲದವಳು. 1.90 ಗ್ರಾಂ ಎಂಡಿಎಂಎ ಡ್ರಗ್ಸ್​ ಅನ್ನು ಆಕೆಯಿಂದ ವಶಕ್ಕೆ ಪಡೆಯಲಾಗಿದೆ. ಸ್ಲೋಬಾಲ್​ ಎಂಬ ಕೋಡ್ ಬಳಸಿ ಡ್ರಗ್ಸ್​ ಮಾರಾಟ ಮಾಡುತ್ತಿದ್ದಳು.

                ಎರ್ನಾಕುಲಂ ಎನ್‌ಫೋರ್ಸ್‌ಮೆಂಟ್ ಅಸಿಸ್ಟೆಂಟ್ ಕಮಿಷನರ್ ಬಿ.ಟೆನಿಮೋನ್ ನೇತೃತ್ವದ ವಿಶೇಷ ಕ್ರಿಯಾ ತಂಡವು ಕೊಚ್ಚಿಯಲ್ಲಿ ಆನ್‌ಲೈನ್‌ನಲ್ಲಿ ಬುಕ್ ಮಾಡಲಾದ ಕೊಠಡಿಯಿಂದ (ಓಯೋ ರೂಂ) ಹೆಮ್ಮಾಳ ಪ್ರಮುಖ ಮಧ್ಯವರ್ತಿಯನ್ನು ಬಂಧಿಸಿದ್ದು, ಆತನ ಹೆಚ್ಚಿನ ತನಿಖೆ ವೇಳೆ ಸೂತ್ರಧಾರಿ ಹೆಮ್ಮಾಳ ಬಗ್ಗೆ ಮಾಹಿತಿ ಸಿಕ್ಕಿತು.

            ಹೆಮ್ಮಾ ಡ್ರಗ್ಸ್‌ನೊಂದಿಗೆ ಹಾಲ್‌ಗೆ ಬರುತ್ತಾಳೆ ಎಂದು ಮಧ್ಯವರ್ತಿ ಬಹಿರಂಗಪಡಿಸಿದ್ದರಿಂದ ತನಿಖಾ ತಂಡ ಆಕೆಗಾಗಿ ಕಾದು ಕುಳಿತಿತ್ತು. ರಾತ್ರಿ ಪಾಡಿವಟ್ಟಂಗೆ ಬಂದ ಹೆಮ್ಮಾ ಡ್ರಗ್ಸ್​ನೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ. ಆರೋಪಿ ಹೆಮ್ಮಾ ಐಷಾರಾಮಿ ವಾಹನಗಳಲ್ಲಿ ಬರುತ್ತಾಳೆ ಎಂಬ ಸುಳಿವನ್ನು ಇತ್ತೀಚೆಗೆ ಡ್ರಗ್ಸ್‌ನೊಂದಿಗೆ ಸಿಕ್ಕಿಬಿದ್ದ ಯುವಕರು ಮತ್ತು ಯುವತಿಯರು ನೀಡಿದ್ದರು. ಆದರೆ, ಹೆಮ್ಮಾಗಿ ಗ್ಯಾಂಗ್‌ಗಳೊಂದಿಗೆ ಸಂಪರ್ಕ ಹೊಂದಿದ್ದು, ಅದರ ಭಯದಿಂದಾಗಿ ಆಕೆಯ ಬಗ್ಗೆ ಅವರು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿರಲಿಲ್ಲ.

                       ಆರೋಪಿ ಹೆಮ್ಮಾ ಮಾದಕ ವಸ್ತುಗಳೊಂದಿಗೆ ಹೊರಗೆ ಹೋಗುವಾಗ ಗ್ರಾಹಕರ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದರು. ಡ್ರಗ್ಸ್​ ವಹಿವಾಟನ್ನು ಬೇರೊಬ್ಬರ ಫೋನ್‌ನಲ್ಲಿ ಮಾಡುತ್ತಿದ್ದಳು ಮತ್ತು ಸಿಕ್ಕಿಬೀಳುವುದನ್ನು ತಪ್ಪಿಸಲು ಹೆಚ್ಚಾಗಿ OYO (ಒಯೊ) ಕೊಠಡಿಗಳನ್ನು ಬುಕ್ ಮಾಡುತ್ತಿದ್ದಳು. ಆಕೆ ಕೊಚ್ಚಿಯಲ್ಲಿರುವ ಗ್ಯಾಂಗ್‌ಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾಳೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries