HEALTH TIPS

ಭಾರತೀಯರಲ್ಲಿ ಹೆಚ್ಚಾಗುತ್ತಿದೆ ವಿಟಮಿನ್ ಡಿ ಕೊರತೆ, ಈ ಜೀವನಶೈಲಿ ಬೇಡ್ವೆ ಬೇಡ

ನಿಮಗೆ ಗೊತ್ತೆ? ಭಾರತದಲ್ಲಿ 490 ಮಿಲಿಯನ್‌ ಜನರಿಗೆ ವಿಟಮಿನ್ ಡಿ ಕೊರತೆಯಿದೆ. ಅದರಲ್ಲಿ ಶೆ. 31ರಷ್ಟು ಮಕ್ಕಳು ಹಾಗೂ ಹಸಿಹರೆಯದ ಪ್ರಾಯದವರಾಗಿದ್ದಾರೆ, ಇದು ನಿರ್ಲಕ್ಷ್ಯ ಮಾಡುವಂಥ ವಿಷಯ ಅಲ್ವೇ ಅಲ್ಲ.

ಭಾರತದಲ್ಲಿ ವಿಟಮಿನ್‌ ಡಿ ಕೊರತೆ ಹೆಚ್ಚಾಗುತ್ತಿರಲು ಕಾರಣವೇನು ಎಂದು ನೋಡುವುದಾದರೆ ಬದಲಾದ ನಮ್ಮ ಜೀವನಶೈಲಿ. ಬಹುತೇಕ ಜನರು ಸೂರ್ಯನ ಬೆಳಕಿಗೆ ಒಂದು 10 ನಿಮಿಷ ಕೂಡ ಮೈಯೊಡ್ಡಿ ನಿಲ್ಲುತ್ತಿಲ್ಲ. ಅದರಲ್ಲದೆ ನಾವು ಭಾರತೀಯರು ಸ್ವಲ್ಪ ಗೋಧಿ ಬಣ್ಣದವರು. ನಾವು ದಿನಾ ಬೆಳಗ್ಗೆ 15 ನಿಮಿಷ ಬಿಸಿಲಿನಲ್ಲಿ ನಿಲ್ಲಬೇಕಾಗುತ್ತದೆ. ಆದರೆ ಇದನ್ನು ಎಷ್ಟು ಜನ ಮಾಡುತ್ತಿದ್ದಾರೆ.

ನಗರ ಪ್ರದೇಶಗಳಲ್ಲಿ ಮಕ್ಕಳು ಕೂಡ ಹೊರಗಡೆ ಹೋಗಿ ಆಟ ಆಡುತ್ತಿಲ್ಲ, ಹೀಗಾಗಿ ಮಕ್ಕಳಲ್ಲಿಯೂ ವಿಟಮಿನ್‌ ಡಿ ಕೊರತೆ ಉಂಟಾಗುತ್ತಿದೆ.

ವಿಟಮಿನ್‌ ಡಿ ಕೊರತೆ ಉಂಟಾದರೆ ಉಂಟಾಗುವ ತೊಂದರೆಗಳೇನು? ನಮ್ಮ ದೇಹದಲ್ಲಾಗುವ ಲಕ್ಷಣಗಳೇನು, ಸಪ್ಲಿಮೆಂಟ್‌ ತೆಗೆದುಕೊಂಡರೆ ವಿಟಮಿನ್ ಡಿ ಸಮಸ್ಯೆ ತಡೆಗಟ್ಟಬಹುದೇ? ಈ ಎಲ್ಲಾ ಮಾಹಿತಿ ನೋಡೋಣ:

ವಿಟಮಿನ್‌ ಡಿ ಕೊರತೆ ಉಂಟಾದಾಗ ದೇಹದಲ್ಲಿ ಈ ಲಕ್ಷಣಗಳು ಕಂಡು ಬರುವುದು
* ಮೂಳೆ ಬಲಹೀನವಾಗುವುದು
* ಸ್ನಾಯುಗಳು ಬಲಹೀನವಾಗುವುದು
* ಮೈ ಕೈ ನೋವು ಕಂಡು ಬರುವುದು'
* ಸಂಧಿವಾತ
ಇವುಗಳ ಜೊತೆಗೆ
* ಸುಸ್ತು, ತಲೆಸುತ್ತು
* ಖಿನ್ನತೆ

ವಿಟಮಿನ್ ಡಿ ಕೊರತೆಯಿಂದ ಉಂಟಾಗುವ ಗಂಭೀರ ಸಮಸ್ಯೆಗಳೇನು?
* ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾಗುವುದು
* ದೇಹದಲ್ಲಿ ರಂಜಕದಂಶ ಕಡಿಮೆಯಾಗುವುದು
* ಮೂಳೆಗಳು ಮೃದುವಾಗಿ ಬಲಹೀನವಾಗುವುದು

ವಿಟಮಿನ್‌ ಡಿ ಕೊರತೆಗೆ ಕಾರಣವೇನು?
* ಸೂರ್ಯನ ಬೆಳಕು ಮೈ ಮೇಲೆ ಬೀಳದಿರುವುದು
* ನಮ್ಮ ದೇಹ ವಿಟಮಿನ್ ಡಿ ಸರಿಯಾಗಿ ಹೀರಿಕೊಳ್ಳದಿದ್ದರೆ
ಇನ್ನು ಕೆಲವೊಂದು ಆರೋಗ್ಯ ಸಮಸ್ಯೆಗಳಿಂದಲೂ ವಿಟಮಿನ್ ಡಿ ಕೊರತೆ ಉಂಟಾಗುವುದು
* ತೂಕ ಇಳಿಕೆಗೆ ಸರ್ಜರಿ
* ಕಿಡ್ನಿ ಡಯಾಲಿಸಿಸ್
* ಒಬೆಸಿಟಿ
* ಸಿಟ್ಇಕ್ ಫೈಪ್ರೋಸಿಸ್
* ಕೊಲೆಸ್ಟ್ರಾಲ್‌ ಕಡಿಮೆ ಮಾಡುವ ಔಷಧಗಳು
* ಸ್ಟಿರಾಯ್ಡ್‌ಗಳು

ಯಾರಿಗೆ ವಿಟಮಿನ್‌ ಡಿ ಹೆಚ್ಚಾಗಿ ಕಂಡು ಬರುವುದು
60 ವರ್ಷ ಮೇಲ್ಪಟ್ಟವರಿಗೆ: ವಯಸ್ಸಾಗುತ್ತಿದ್ದಂತೆ ವಿಟಮಿನ್ ಡಿ ಕೊರತೆ ಕೂಡ ಉಂಟಾಗುವುದು.
ನವಜಾತ ಶಿಶುಗಳಿಗೆ: ನವಜಾತ ಶಿಶುಗಳಿಗೆ ವಿಟಮಿನ್ ಡಿ ಕೊರತೆ ಉಂಟಾಗುವುದು
* ಕಪ್ಪು ತ್ವಚೆ ಬಣ್ಣದವರಿಗೆ: ಬಿಳಿ ಚರ್ಮದವರಿಗಿಂತ ಕಪ್ಪು ತ್ವಚೆ ಚರ್ಮದವರಿಗೆ ವಿಟಮಿನ್ ಡಿ ಕೊರತೆ ಕಂಡು ಬರುವುದು.
* ಮನೆಯೊಳಗಡೆ ಇರುವವರಿಗೆ: ಯಾರು ಅಧಿಕ ಸಮಯ ಮನೆಯ ಒಳಗಡೆಯೇ ಕಳೆಯುತ್ತಾರೋ ಅವರಲ್ಲಿಯೂ ವಿಟಮಿನ್‌ ಡಿ ಸಮಸ್ಯೆ ಕಂಡು ಬರುವುದು.

ವಿಟಮಿನ್‌ ಡಿ ಸಮಸ್ಯೆ ತಡೆಗಟ್ಟುವುದು ಹೇಗೆ?
* ನೀವು ಸ್ವಲ್ಪ ಸಮಯ ಬಿಸಿಲಿನಲ್ಲಿ ಕಳೆಯಿರಿ. ಬೆಳಗ್ಗೆ 9 ಗಂಟೆಯ ಒಳಗಡೆ ಸಂಜೆ 4 ಗಂಟೆಯ ಮೇಲೆ ಬಿಸಿಲಿನಲ್ಲಿ ಸ್ವಲ್ಪ ಹೊತ್ತು ಕಳೆಯಿರಿ.
ದಿನಾ ಒಂದು 15 ನಿಮಿಷ ಬಿಸಿಲಿನಲ್ಲಿ ನಿಲ್ಲಿ.

ಆಹಾರಗಳಲ್ಲಿ ವಿಟಮಿನ್ ಡಿ ಇರುತ್ತದೆಯೇ?
ಮೀನು
ಮೊಟ್ಟೆ
ಅಣಬೆ
ಮೊಟ್ಟೆಯ ಹಳದಿ
ಕಾಡ್‌ ಲಿವರ್‌
ಕಿತ್ತಳೆ ರಸ
ಹಾಲಿನ ಉತ್ಪತ್ತನ್ನಗಳು
ಧಾನ್ಯಗಳು
ಇವುಗಳಲ್ಲಿ ಅಲ್ಪ ಪ್ರಮಾಣದಲ್ಲಿರುತ್ತದೆ.

ವಿಟಮಿನ್ ಡಿ ಸಪ್ಲಿಮೆಂಟ್ಸ್ ತೆಗೆದುಕೊಳ್ಳಬಹುದೇ?
ವೈದ್ಯರ ಸಲಹೆಯಿಲ್ಲದೆ ನೀವು ವಿಟಮಿನ್ ಡಿ ಸಪ್ಲಿಮೆಂಟ್ಸ್ ತೆಗೆದುಕೊಳ್ಳಬಾರದು. ವೈದ್ಯರು ನಿಮ್ಮ ಆರೋಗ್ಯ ಸ್ಥಿತಿ ನೋಡಿ ಅದಕ್ಕೆ ತಕ್ಕ ಡೋಸ್‌ನ ವಿಟಮಿನ್‌ ಡಿ ತೆಗೆದುಕೊಳ್ಳಲು ಸೂಚಿಸುತ್ತಾರೆ. ಅಷ್ಟು ಮಾತ್ರ ತೆಗೆದುಕೊಳ್ಳಿ.

ವಿಟಮಿನ್ ಡಿ ಸಪ್ಲಿಮೆಂಟ್ಸ್ ಅಧಿಕ ತೆಗೆದುಕೊಂಡರೆ ಈ ಸಮಸ್ಯೆ ಉಂಟಾಗುವುದು?
* ವಾಂತಿ
* ಅತ್ಯಧಿಕ ಬಾಯಾರಿಕೆ
* ಆಗಾಗ ಮೂತ್ರವಿಸರ್ಜನೆಗೆ ಹೋಗುವುದು
* ಮಲಬದ್ಧತೆ
* ಗೊಂದಲ

ಕೊನೆಯದಾಗಿ: ನೀವು ವಿಟಮಿನ್ ಡಿ ಸಪ್ಲಿಮೆಂಟ್‌ ತೆಗೆದುಕೊಳ್ಳುವ ಬದಲಿಗೆ ಸೂರ್ಯನಿಂದ ಖರ್ಚಿಯಿಲ್ಲದೆ ಪಡೆಯಿರಿ. ಚಿಕ್ಕ ಮಗುವಿದ್ದರೆ ಬೆಳಗ್ಗಿನ ಬಿಸಿಲಿಗೆ ಸ್ವಲ್ಪ ಹೊತ್ತು ಹಿಡಿಯಿರಿ.


 

 

 

Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries