HEALTH TIPS

ಕೇಂದ್ರದಿಂದ ನರೇಗಾ ವೇತನ ಹೆಚ್ಚಳ

 

                ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ (2023-24) ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎಂ-ನರೇಗಾ)ಅಡಿಯಲ್ಲಿನ ಕಾರ್ಮಿಕರಿಗೆ ವೇತನ ಹೆಚ್ಚಳ ಮಾಡಿ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿದೆ.

                     ನೂತನ ವೇತನ ದರವು ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.

ಅಧಿಸೂಚನೆಯ ಪ್ರಕಾರ ಹರಿಯಾಣದಲ್ಲಿ ಗರಿಷ್ಠ ವೇತನ ಅಂದರೆ ದಿನಕ್ಕೆ ₹357, ಮಧ್ಯಪ್ರದೇಶ ಮತ್ತು ಛತ್ತೀಸಗಢದಲ್ಲಿ ಕನಿಷ್ಠ ಅಂದರೆ ದಿನಕ್ಕೆ ₹221 ವೇತನ ನಿಗದಿಪಡಿಸಲಾಗಿದೆ.

                       ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಇದೇ 24ರಂದು ನರೇಗಾ ಯೋಜನೆಯಡಿಯಲ್ಲಿನ ಕೂಲಿಯ ದರವನ್ನು ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸಿದೆ. ₹ 7ರಿಂದ ₹ 26ರ ತನಕ ವೇತನ ಹೆಚ್ಚಳವಾಗಿದೆ.

                      ಕಳೆದ ವರ್ಷದ ದರಗಳಿಗೆ ಹೋಲಿಸಿದರೆ, ರಾಜಸ್ಥಾನವು ಹೆಚ್ಚಿನ ಶೇಕಡಾವಾರು ವೇತನ ಹೆಚ್ಚಳ ದಾಖಲಿಸಿದೆ. ರಾಜಸ್ಥಾನದಲ್ಲಿ 2022-23ರಲ್ಲಿ ವೇತನವು ₹ 231 ಇತ್ತು. ನೂತನ ಪರಿಷ್ಕೃತ ವೇತನವು ದಿನಕ್ಕೆ ₹ 255 ಆಗಿದೆ. ಅಂತೆಯೇ ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಲ್ಲೂ ವೇತನ ದರವು ಕಳೆದವರ್ಷಕ್ಕಿಂತ ಶೇಕಡ 8ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಈ ರಾಜ್ಯಗಳಲ್ಲಿ ದಿನಕ್ಕೆ ₹ 210 ವೇತನವಿತ್ತು. ಇದೀಗ ₹ 228ಕ್ಕೆ ವೇತನ ಹೆಚ್ಚಳವಾಗಿದೆ.

                    ಛತ್ತೀಸಗಢ ಮತ್ತು ಮಧ್ಯಪ್ರದೇಶದಲ್ಲಿ ಕಳೆದ ವರ್ಷ ₹ 204 ವೇತನವಿತ್ತು. ಈ ವರ್ಷ ಶೇ 17ರಷ್ಟು ಪ್ರಮಾಣದಲ್ಲಿ ವೇತನ ಹೆಚ್ಚಳವಾಗಿದ್ದು ವೇತನದರವು ₹221 ಆಗಿದೆ.

                      ಕರ್ನಾಟಕ, ಗೋವಾ, ಮೇಘಾಲಯ ಮತ್ತು ಮಣಿಪುರ ರಾಜ್ಯಗಳಲ್ಲಿ ಕಡಿಮೆ ಪ್ರಮಾಣದಲ್ಲಿ ವೇತನ ಹೆಚ್ಚಳವಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries