HEALTH TIPS

ಸ್ವರ್ಗ ಶಾಲೆಯಲ್ಲಿ ಕಲಿಕೋತ್ಸವ


                 ಪೆರ್ಲ: ಸ್ವರ್ಗ ಸ್ವಾಮೀ ವಿವೇಕಾನಂದ ಎಯುಪಿ ಶಾಲೆಯಲ್ಲಿ ಮಕ್ಕಳ ಕಲಿಕೋತ್ಸವ ಕಾರ್ಯಕ್ರಮ ನಡೆಯಿತು.ವಾರ್ಡ್ ಸದಸ್ಯ ರಾಮಚಂದ್ರ ಮೊಳಕ್ಕಾಲು ದೀಪ ಬೆಳಗಿಸಿ ಉದ್ಘಾಟಿಸಿದರು.ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಂಜುನಾಥ ಪಿ.ಕೆ.ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.
             ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಬಿ ಅಧ್ಯಕ್ಷತೆ ವಹಿಸಿದ್ದರು.ಶಿಕ್ಷಕ ವೆಂಕಟ ವಿದ್ಯಾಸಾಗರ, ಪದ್ಮನಾಭ ಆರ್. ಉಪಸ್ಥಿತರಿದ್ದರು.



          ತರಗತಿ ಮಟ್ಟದಿಂದ ಆಯ್ಕೆಯಾದ ವಿದ್ಯಾರ್ಥಿಗಳ ಚಟುವಟಿಕೆಗಳ ಪ್ರದರ್ಶನ ನಡೆಯಿತು.ಒಂದನೇ ತರಗತಿಯ ವಿದ್ಯಾರ್ಥಿಗಳಿಂದ ವಾಹನಗಳ ಪರಿಚಯ, ಎರಡು ಮತ್ತು ಮೂರನೇ ತರಗತಿ ಹಾಡು, ನಾಲ್ಕನೇ ತರಗತಿ ಸೌರಮಂಡಲದ ಪರಿಚಯ, ಐದನೇ ತರಗತಿ ಜಲವಿದ್ಯುತ್ ಯೋಜನೆಯ ಟರ್ಬೈನ್ ಮಾದರಿಯ ಪ್ರಾತ್ಯಕ್ಷಿಕೆ, ಆರನೇ ತರಗತಿ ಸ್ಟ್ಯಾಟಿಸ್ಟಿಕ್ ಪರಿಚಯ, ಏಳನೇ ತರಗತಿ ವಿದ್ಯಾರ್ಥಿಗಳಿಂದ ಜಲಿಯನ್ ವಾಲಾಬಾಗ್ ದುರಂತದ ಪ್ರಾತ್ಯಕ್ಷಿಕೆ ನಡೆಯಿತು.
          7ನೇ ತರಗತಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.ಏಳನೇ ತರಗತಿ ವಿದ್ಯಾರ್ಥಿ ದೀಪಕ್ ಪಿ.ಎಸ್. ಸ್ವಾಗತಿಸಿದರು. ಲಿಖಿನ್ ವಂದಿಸಿದರು.ಅಭಿμÉೀಕ್ ಸಿ.ಎಚ್. ಹಾಗೂ ರಚನಾ ಎಸ್. ಕರ್ಯಕ್ರಮ ನಿರ್ವಹಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries