ಮುಳ್ಳೇರಿಯ: ಮೇಲ್ನೋಟಕ್ಕೆ ಅವರು ನಿರ್ಮಿಸಿದ್ದು ತೆಪ್ಪವಾದರೂ ಐಷಾರಾಮಿ ದೋಣಿಯ ಎಲ್ಲಾ ಸೌಕರ್ಯಗಳನ್ನು ಹೊಂದಿದೆ. ಐದು ಮೀಟರ್ ಉದ್ದ, ಎರಡು ಮೀಟರ್ ಎತ್ತರ ಹಾಗೂ ಅಗಲದಲ್ಲಿ ನಿರ್ಮಿಸಿರುವ ಈ ತೆಪ್ಪದ ಮನೆ ಈಗ ಮಧುವಾಹಿನಿ ನದಿಯಲ್ಲಿ ಕುತೂಹಲ ಮೂಡಿಸಿದೆ. ಬೋವಿಕ್ಕಾನ ಸಮೀಪದ ಮಲ್ಲ ಮುಂಡಪಳ್ಳದ ಅವಳಿಗಳಾದ ಆದರ್ಶ ಮತ್ತು ಆಕಾಶ್ ಇಂತಹ ತೆಪ್ಪದ ಅಪೂರ್ವ ಸಾಧನೆಗೈದ ನಿರ್ಮಾತೃಗಳು.
ಇವರು ಪ್ಲಸ್ ಒನ್ ವಿದ್ಯಾರ್ಥಿಗಳಾಗಿದ್ದು, ಪ್ರತಿ ವರ್ಷ ಬಾಳೆ ದಂಡಿನಿಂದ ತೆಪ್ಪ ತಯಾರಿಸುವುದು ಈ ಪರಿಸರದ ವಾಡಿಕೆ ಕ್ರಮ. ನದಿಯ ಎರಡೂ ಬದಿ ಕೃತಿ ಭೂಮಿಯ ಇರುವ ಇವರ ಪೋಷಕರು ಒಂದುಬದಿಯ ತೋಟದಿಂದ ತೆಂಗಿನಕಾಯಿ ಮತ್ತು ಮತ್ತೊಂದು ಬದಿಯಿಂದ ಭತ್ತವನ್ನು ಸಂಗ್ರಹಿಸಲು ಅವರು ತೆಪ್ಪಗಳನ್ನು ಅವಲಂಬಿಸಿದ್ದಾರೆ. ಈ ಬಾರಿ ವೆರೈಟಿ ಆಗಬೇಕು ಎಂದು ಯೋಚಿಸಿ ತೆಪ್ಪದ ಮನೆ ನಿರ್ಮಿಸುವ ಮೂಲಕ ಈ ವಿದ್ಯಾರ್ಥಿ ಅವಳಿ ಸಹೋದರರು ಹಿರಿಯರಿಗೆ ನೆರವಾಗುವ ಕ್ರಿಯಾತ್ಮಕತೆಯಿಂದ ಗಮನ ಸೆಳೆದಿದ್ದಾರೆ.
ಬಾಳೆದಿಂಡಿನ ತಾತ್ಕಾಲಿಕ ತೆಪ್ಪ ಅಸುರಕ್ಷಿತ ಮತ್ತು ಕಡಿಮೆ ಬಾಳಿಕೆಯದ್ದು. ಈ ಹಿನ್ನೆಲೆಯಲ್ಲಿ ಬಿದಿರಿನ ತೆಪ್ಪ ನಿರ್ಮಿಸಲು ನಿರ್ಧರಿಸಲಾಯಿತು. ಸ್ನೇಹಿತರಾದ ಅಮಿತ್ ಮತ್ತು ಅಭಿಲಾಷ್ ಇವರಿಗೆ ಸಹಾಯ ಮಾಡಿದರು.
ಹಳದಿ ಬಿದಿರು ಮತ್ತು ಕಾಡಿನ ಇತರ ವಸ್ತುಗಳನ್ನು ಬಳಸಿ, ಅವರ ಕಲ್ಪನೆಯ ಆಧಾರದ ಮೇಲೆ ತೆಪ್ಪವನ್ನು ನಿರ್ಮಿಸಲಾಗಿದೆ. 20 ಲೀಟರ್ ನೀರು ತುಂಬಿರುವ ಇರುವ 20 ಪ್ಲಾಸ್ಟಿಕ್ ಬಾಟಲಿಗಳನ್ನು ತೆಪ್ಪದ ಕೆಳ ಭಾಗಕ್ಕೆ ನಿಯಂತ್ರಣಕ್ಕಾಗಿ ಕಟ್ಟಲಾಗಿದೆ. ತೆಪ್ಪದಲ್ಲಿ ಒಂದು ಬಾರಿಗೆ 10 ಮಂದಿ ಪ್ರಯಾಣಿಸಬಹುದು. ಪೋಷಕರಾದ ಬಾಲಕೃಷ್ಣನ್ ಮತ್ತು ಗೀತಾ ಸಹಿತ ಸ್ಥಳೀಯರು ಅವಳಿ ಸಹೋದರರ ಈ ಪ್ರಯತ್ನಕ್ಕೆ ಎಲ್ಲ ಪ್ರೋತ್ಸಾಹ ನೀಡಿದ್ದಾರೆ. ಆದರ್ಶ್ ಚೆರ್ಕಳ ಜಿ.ಎಚ್.ಎಸ್.ಎಸ್ ಶಾಲೆಯಲ್ಲಿ ಮತ್ತು ಆಕಾಶ್ ಎಡನೀರು ಜಿ.ಎಚ್.ಎಸ್.ಎಸ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಅವಳಿ ಸಹೋದರರ ತೆಪ್ಪದ ಮನೆ: ಹೀಗೊಂದು ಸಾಧನೆಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳು
0
ಮಾರ್ಚ್ 02, 2023




.jpg)
