ತಿರುವನಂತಪುರಂ: ರಾಜ್ಯದ ನಾಲ್ವರು ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಬ್ರಹ್ಮಪುರಂ ತ್ಯಾಜ್ಯ ನಿರ್ವಹಣಾ ಘಟಕದ ಅಗ್ನಿ ಅವಘಡ ಹೊಗೆ ಆರುವ ಮುನ್ನವೇ ಎರ್ನಾಕುಳಂ ಜಿಲ್ಲಾಧಿಕಾರಿ ರೇಣು ರಾಜ್ ಸೇರಿದಂತೆ ನಾಲ್ವರನ್ನು ವರ್ಗಾಯಿಸಲಾಗಿದೆ.
ರೇಣುರಾಜ್ ಅವರನ್ನು ವಯನಾಡಿಗೆ ವರ್ಗಾವಣೆ ಮಾಡಲಾಗಿದೆ. ಎರ್ನಾಕುಳಂ ಗೆ ನೂತನ ಕಲೆಕ್ಟರ್ ಆಗಿ ಎನ್ ಎಸ್ ಕೆ ಉಮೇಶ್ ನೇಮಕವಾಗಲಿದ್ದಾರೆ. ಉಮೇಶ್ ಅವರು ಪ್ರಸ್ತುತ ಮುಖ್ಯ ಕಾರ್ಯದರ್ಶಿಯ ಸಿಬ್ಬಂದಿ ಅಧಿಕಾರಿಯಾಗಿರುವರು.
ವಯನಾಡ್ ಜಿಲ್ಲಾಧಿಕಾರಿ ಎ.ಗೀತಾ ಅವರನ್ನು ಕೋಝಿಕ್ಕೋಡ್‍ಗೆ ವರ್ಗಾವಣೆ ಮಾಡಲಾಗಿದೆ. ತ್ರಿಶೂರ್ ಕಲೆಕ್ಟರ್ ಹರಿತಾ ವಿ.ಕುಮಾರ್ ಅವರನ್ನು ಅಲಪ್ಪುಳಕ್ಕೆ ಮತ್ತು ವಿಆರ್ ಕೃಷ್ಣ ತೇಜ ಅವರನ್ನು ತ್ರಿಶೂರ್‍ಗೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಆದೇಶದಲ್ಲಿ ಕೋಝಿಕ್ಕೋಡ್ ಕಲೆಕ್ಟರ್ ಎನ್ ತೇಜ್ ಲೋಹಿತ್ ರೆಡ್ಡಿ ಅವರ ಹೊಸ ನೇಮಕದ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಜಿಲ್ಲಾಧಿಕಾರಿಗಳಿಗೆ ವರ್ಗಾವಣೆ: ಬ್ರಹ್ಮಪುರಂ ಹೊಗೆಯಲ್ಲಿ ಮರೆಯಾದ ಎರ್ನಾಕುಳಂ ಜಿಲ್ಲಾಧಿಕಾರಿ
0
ಮಾರ್ಚ್ 08, 2023
Tags


