HEALTH TIPS

ದೇಶವ್ಯಾಪಿ ಮುಸ್ಲಿಮರನ್ನು ತಲುಪಿಸುವ ಕಾರ್ಯಕ್ರಮಕ್ಕೆ ಜಮ್ಮು-ಕಾಶ್ಮೀರದಲ್ಲಿ ಮಿಶ್ರ ಪ್ರತಿಕ್ರಿಯೆ

 

          ನವದೆಹಲಿ: ದೇಶವ್ಯಾಪಿ ಮುಸ್ಲಿಮರನ್ನು ತಲುಪುವುದಕ್ಕಾಗಿ ಬಿಜೆಪಿಯ ಕಾರ್ಯಕ್ರಮ ಮಾ.09 ರಿಂದ ಆರಂಭವಾಗಿದ್ದು, ಮುಸ್ಲಿಮ್ ಬಾಹುಳ್ಯವಿರುವ ಕಾಶ್ಮೀರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಕಣಿವೆ ಹಾಗೂ ದೇಶದ ಉಳಿದ ಭಾಗಗಳ ನಡುವೆ ಉಂಟಾಗಿರುವ ಅಂತರವನ್ನು ನಿವಾರಿಸಬೇಕೆಂಬ ವಿಷಯದಲ್ಲಿ ಒಮ್ಮತ ವ್ಯಕ್ತವಾಗಿದೆ. 

            ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ, ಮಾ.10 ರಂದು ದೇಶಾದ್ಯಂತ ಮುಸ್ಲಿಮರನ್ನು ತಲುಪುವ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದೆ. ಮೊದಲ ಹಂತದಲ್ಲಿ ಜಮ್ಮು-ಕಾಶ್ಮೀರ ಸೇರಿ ದೇಶದ 64 ಜಿಲ್ಲೆಗಳಲ್ಲಿ ಈ ಕಾರ್ಯಕ್ರಮವನ್ನು ನಡೆಸಲಿದೆ.

            ಜಮ್ಮು-ಕಾಶ್ಮೀರದ ಮುಸ್ಲಿಮರು ಹಲವು ಸಮಸ್ಯೆಗಳನ್ನು ಹೊಂದಿದ್ದು, ಅವುಗಳನ್ನು ಬಗೆಹರಿಸಿಕೊಳ್ಳಲು ಬಯಸುತ್ತಿದ್ದಾರೆ ಅಂತೆಯೇ ದೇಶದ ವಿವಿಧ ಭಾಗಗಳಲ್ಲಿರುವ ಮುಸ್ಲಿಮರು ಭದ್ರತೆಯ ಭಾವವನ್ನು ಎದುರುನೋಡುತ್ತಿದ್ದಾರೆ.  ಸರ್ಕಾರದಲ್ಲಿ ಯಾರೇ ಇರಲಿ, ಪರಿಹಾರಗಳನ್ನು ಅವರು ಎದುರು ನೋಡುತ್ತಿದ್ದರೆ, ಅದು ಸ್ವಾಗತಾರ್ಹ ಕ್ರಮ ಎಂದು ಜಮ್ಮು-ಕಾಶ್ಮೀರದ್ ಅಗ್ರಾಂಡ್ ಮುಫ್ತಿ  ಮುಫ್ತಿ ನಾಸಿರ್ ಉಲ್ ಇಸ್ಲಾಮ್ ಪಿಟಿಐ ಗೆ ಹೇಳಿದ್ದಾರೆ.
 
             ಹರ್ಯಾಣದಲ್ಲಿ ಇತ್ತೀಚೆಗೆ ವರದಿಯಾದ ಇಬ್ಬರು ಮುಸ್ಲಿಮರ ಮೇಲಿನ ಗುಂಪು ಥಳಿತ ಪ್ರಕರಣಗಳು ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ನಾಸಿರ್ ಉಲ್ ಇಸ್ಲಾಮ್ ಹೇಳಿದ್ದಾರೆ.

           ಕೇಂದ್ರ ಸರ್ಕಾರ ಹಾಗೂ ಕಾಶ್ಮೀರ ಕಣಿವೆಯ ಮುಸ್ಲಿಮರ ನಡುವೆ ಅಂತರವಿದೆ. ಆರ್ಟಿಕಲ್ 370 ರದ್ದತಿ ಬಳಿಕ ಹಲವು ಭರವಸೆಗಳನ್ನು ನೀಡಲಾಗಿತ್ತು, ಆದರೆ ಅದ್ಯಾವುದೂ ನಿಜವಾಗಿಲ್ಲ. ನೆಲಸಮಗೊಳಿಸುವ ಅಭಿಯಾನದ ಮೂಲಕ ಜನರ ಹೃದಯ ಗೆಲ್ಲುವುದಕ್ಕೆ ಸಾಧ್ಯವೇ?, ಅವರು ಜನರನ್ನು ಮೂರ್ಖರನ್ನಾಗಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries