ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ 19ನೇ ವಾರ್ಡ್ ಅರಿಕ್ಕಳ್ ಚೌಕಾರು ಕಾಂಕ್ರೀಟು ರಸ್ತೆಯನ್ನು ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾಂತಾ ಬಾರಡ್ಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಅಧಿಕಾರಿಗಳು, ಗುತ್ತಿಗೆದಾರರು, ಊರವರು ಉಪಸ್ಥಿತರಿದ್ದರು. ರಸ್ತೆ ಗುತ್ತಿಗೆದಾರ ವಾಸುದೇವ ಹೊಳ್ಳ ಮಧೂರು ಇವರನ್ನು ಗ್ರಾಮಪಂಚಾಯಿತಿ ಸದಸ್ಯ ಡಿ.ಶಂಕರ ಶಾಲು ಹೊದೆಸಿ ಗೌರವಿಸಿದರು. ಡಿ. ಶಂಕರ ಅವರಿಗೆ ಗ್ರಾಮಸ್ಥರ ಪರವಾಗಿ ಶಾಲು ಹೊದೆಸಿ ಗೌರವಿಸಲಾಯಿತು. ಮೋಹನ್‍ದಾಸ ರೈ ಸ್ವಾಗತಿಸಿ, ಬೇಬಿ ಚೌಕಾರು ವಂದಿಸಿದರು.
ಅರಿಕ್ಕಳ ಚೌಕಾರು ಕಾಂಕ್ರೀಟು ರಸ್ತೆ ಉದ್ಘಾಟನೆ
0
ಮಾರ್ಚ್ 08, 2023
Tags



.jpg)
