HEALTH TIPS

ವಿರೋಧ ಪಕ್ಷವೇ ಇಲ್ಲದ ವಿಧಾನಸಭೆಯತ್ತ ನಾಗಾಲ್ಯಾಂಡ್‌

 

              ಕೊಹಿಮಾ: ನಾಗಾಲ್ಯಾಂಡ್‌ನ ವಿಧಾನಸಭೆಯಲ್ಲಿ ವಿರೋಧ ಪಕ್ಷವೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. 2015 ಹಾಗೂ 2021ರಲ್ಲಿ ಸರ್ಕಾರ ರಚನೆ ಆದ ಬಳಿಕ ವಿರೋಧ ಪಕ್ಷಗಳು ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದವು. ಆದರೆ, ಈ ಬಾರಿ ಬಹುಮತ ಪಡೆದ ಎನ್‌ಡಿಪಿಪಿ-ಬಿಜೆಪಿ ಮೈತ್ರಿಗೆ ಸರ್ಕಾರ ರಚನೆಗೂ ಮೊದಲೇ ಇತರ ಪಕ್ಷಗಳು ಬೆಂಬಲ ಘೋಷಿಸಿವೆ.

                  ಇದೇ 2ರಂದು ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿತ್ತು. ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಎನ್‌ಡಿಪಿಪಿ, ಬಿಜೆಪಿ 60 ಸ್ಥಾನಗಳಲ್ಲಿ ಒಟ್ಟು 37 ಸ್ಥಾನಗಳಲ್ಲಿ ಜಯಗಳಿಸಿದ್ದವು. ಇತರ ಪಕ್ಷಗಳಾದ ಎನ್‌ಪಿಪಿ 5 ಸ್ಥಾನಗಳಲ್ಲಿ, ಎಲ್‌ಜಿಪಿ (ರಾಮ್‌ ವಿಲಾಸ್‌), ನಾಗಾ ಪೀಪಲ್ಸ್‌ ಫ್ರಂಟ್‌ (ಎನ್‌ಪಿಎಫ್‌) ಹಾಗೂ ಆರ್‌ಪಿಐ (ಅಠಾವಳೆ) ತಲಾ ಎರಡು ಸ್ಥಾನ, ಜೆಡಿಯು ಒಂದು ಸ್ಥಾನ ಹಾಗೂ 4 ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದರು.

                     ಇದೇ ಮೊದಲ ಬಾರಿಗೆ ನಾಗಾಲ್ಯಾಂಡ್‌ನಲ್ಲಿ ಹೆಚ್ಚು ಪಕ್ಷಗಳು ಚುನಾವಣೆಯಲ್ಲಿ ಜಯಗಳಿಸಿವೆ. ಎನ್‌ಡಿಪಿಪಿ-ಬಿಜೆಪಿ ಮೈತ್ರಿಯು ಇದುವರೆಗೂ ಸರ್ಕಾರ ರಚನೆಗೆ ಹಕ್ಕು ಮಂಡಿಸಿಲ್ಲ. ಎನ್‌ಸಿಪಿ ಪಕ್ಷವು ಎನ್‌ಡಿಪಿಪಿ-ಬಿಜೆಪಿ ಮೈತ್ರಿಗೆ ಶನಿವಾರವೇ ಬೆಂಬಲ ಘೋಷಿಸಿ ಪತ್ರ ಬರೆದಿದೆ. ಎಲ್‌ಜಿಪಿ (ರಾಮ್‌ ವಿಲಾಸ್‌) ಹಾಗೂ ಆರ್‌ಪಿಐ (ಅಠವಳೆ) ಪಕ್ಷಗಳು ಬೆಂಬಲ ನೀಡುವುದಾಗಿ ಪತ್ರ ಬರೆದಿವೆ.

                 'ಪಕ್ಷವು ಅಂತಿಮ ನಿರ್ಧಾರವನ್ನು ಇದುವರೆಗೂ ಕೈಗೊಂಡಿಲ್ಲ. ಆದರೆ, ಎನ್‌ಡಿಪಿಪಿ-ಬಿಜೆಪಿ ಮೈತ್ರಿಗೆ ಬೆಂಬಲ ಘೋಷಿಸುವ ಸಾಧ್ಯತೆ ಇದೆ' ಎಂದು ಎನ್‌ಪಿಎಫ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಅಚುಂಬೆಮೊ ಕೀಕೊನ್‌ ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries