ಕಾಸರಗೊಡು: ಬೆದ್ರಡ್ಕ ಶ್ರೀಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ವಾರ್ಷಿಕ ಜಾತ್ರೋತ್ಸವವು ಮಾರ್ಚ್ 30 ರಿಂದ ಎಪ್ರಿಲ್ 3 ರ ತನಕ ನಡೆಯಲಿದ್ದು, ಕಾರ್ಯಕ್ರಮದ ಯಶಸ್ವಿಗಾಗಿ ಸಿದ್ಧತಾ ಅವಲೋಕನ ಸಭೆ ದೈವಸ್ಥಾನದಲ್ಲಿ ಜರುಗಿತು.
ವೈದಿಕ ಮತ್ತು ಧ್ವಜಾರೋಹಣ, ಸಾಂಪ್ರದಾಯಿಕ ಆಚರಣೆಯ ಬಗ್ಗೆ ,ಮೊಕ್ತೇಸರರಾರ ಅನಂತ ವಿಷ್ಣು ಉಡುವಣ್ಣಾಯ, ಮಾಜಿ ಆಡಳಿತ ಮೊಕ್ತೇಸರ್ ಎ. ಮಂಜುನಾಥ ರೈ ಕೋಟೆಕುಂಜ ಮಾಹಿತಿ ನೀಡಿದರು. ಉಪಹಾರ, ಪಾನೀಯಗಳ ಬಗ್ಗೆ ಪ್ರಭಾಕರ ಕಾರಂತ ದೇಶಮಂಗಲ, ಸೇವಾ ಕಚೇರಿ ನಿರ್ವಹಣೆ ಬಗ್ಗೆ ಡಾ. ಕರುಣಾಕರ ಆಳ್ವ ಕೋಟೆಕುಂಜ, ಸಂತೆಯ ನಿರ್ವಹಣಾ ವ್ಯವಸ್ಥೆ ಯ ಬಗ್ಗೆ ದೇರಣ್ಣ ಶೆಟ್ಟಿ ಕಂಬಾರು, ಹರಿಪ್ರಸಾದ್ ಶೆಟ್ಟಿ ಕಂಬಾರು, ಉದಯ ದೇವಾಡಿಗ ಉಜಿರೆಕೆರೆ, ಹೂ ಅಲಂಕಾರ ಮತ್ತು ಭಗವಾದ್ವಜ ಸಹಿತ ತೋರಣಗಳ ಅಲಂಕಾರದ ಬಗ್ಗೆ ರವಿ ಬಿ.ಪಿ., ಸುಭಾಷ್ ಚಂದ್ರ ಆಳ್ವ, ಕೋಟೆಕುಂಜ ಶಿವಶಂಕರ ಆಳ್ವ ಕೋಟೆಕುಂಜ, ವಾಡಿಕೆಯ ಆಚರಣೆಯ ಬಗ್ಗೆ ಗಣೇಶ ನಂದು ರೈ,ರತೀಶ್ ಶೆಟ್ಟಿ ಬಳ್ಳೂರು, ವೇದಿಕೆಯ ಸಾಂಸ್ಕøತಿಕ ಕಾರ್ಯಕ್ರಮಗಳ ಬಗ್ಗೆ ಕೆ. ಜಗದೀಶ ಆಚಾರ್ಯ ಕಂಬಾರು , ಕಾಣಿಕೆ ಡಬ್ಬಿ ವ್ಯವಸ್ಥೆಯ ಬಗ್ಗೆ ಭೋಜರಾಜ ಆಚಾರ್ಯ ದೇಶಮಂಗಲ ಮಾಹಿತಿ ನೀಡಿದರು.
ಆಡಳಿತ ಮೊಕ್ತೇಸರ ಎ. ರಮೇಶ್ ರೈ ಕೋಟೆಕುಂಜ ಅಧ್ಯಕ್ಷತೆ ವಹಿಸಿದ್ದರು. ಮೊಕ್ತೇಸರರಾದ ಕೋಟೆಕುಂಜ ರವೀಂದ್ರ ಆಳ್ವ ಕಂಬಾರು ಶೀನ ಶೆಟ್ಟಿ ಬಳ್ಳೂರು, ಆಡಳಿತ ಮಂಡಳಿ ಪ್ರತಿನಿಧಿ ಲಕ್ಷ್ಮಣ ನೋಂಡ ಕೋಟೆಕುಂಜ, ವಿಶೇಷ ಆಹ್ವಾನಿತರಾದ ಚಂದ್ರಹಾಸ ಶೆಟ್ಟಿ ಮಜಲು, ಜಯರಾಮ ರೈ ಸಿರಿಬಾಗಿಲು ಪರಮೇಶ್ವರ ದೇವಾಡಿಗ, ರಾಜೇಶ್ ಶೆಟ್ಟಿ ಬಳ್ಳೂರು, ರಾಜೇಶ್ ಶೆಟ್ಟಿ ಮಂಟಮೆ, ಸುಂದರ ದೇವಾಡಿಗ ಬೆದ್ರಡ್ಕ , ಡಿ.ವಿ ದೇವದಾಸ ಆಚಾರ್ಯ ದೇಶಮಂಗಲ,ಅನೀಶ್ ಬೆದ್ರಡ್ಕ , ರವೀಂದ್ರ ಆಳ್ವ,ರಮೇಶ ಶೆಟ್ಟಿ ಮಾಳ್ಯ,ಯಶೋಧರ ರೈ ಕಜೆ, ಶ್ರೀನಿವಾಸ ದೇವಾಡಿಗ ಉಪಸ್ಥಿತರಿದ್ದರು. ಮೋಹನ್ ಕುಮಾರ್ ಶೆಟ್ಟಿ ಅಡ್ಕ ಸಿರಿಬಾಗಿಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಲೋಕೇಶ್ ಎಂ.ಬಿ ಆಚಾರ್ ಕಂಬಾರ್ ವಂದಿಸಿದರು.
ಬೆದ್ರಡ್ಕ ದೈವಸ್ಥಾನ ಜಾತ್ರೋತ್ಸವದ ಯಶಸ್ಸಿಗಾಗಿ ಅವಲೋಕನದ ಸಭೆ
0
ಮಾರ್ಚ್ 26, 2023




