HEALTH TIPS

ಟಾಟಾ ಆಸ್ಪತ್ರೆ ಕೆಡವಲು ಮುಂದಾದ ಸರ್ಕಾರದ ಧೋರಣೆ ಖಂಡನೀಯ: ಕೆ. ಸುರೇಂದ್ರನ್




                ಕಾಸರಗೋಡು: ಮೂವತ್ತು ವರ್ಷಗಳ ಕಾಲ ಬಳಸಬಹುದಾದ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಲಾದ ಚಟ್ಟಂಚಾಲ್ ಟಾಟಾ ಕೋವಿಡ್ ಆಸ್ಪತ್ರೆಯನ್ನು ಒಡೆದು ತೆಗೆಯುವ ತೀರ್ಮಾನ ಕೈಗೊಂಡಿರುವುದು ಸರ್ಕಾರ ಜಿಲ್ಲೆಯಲ್ಲಿ ತೊರುವ ಅವಗಣನೆ ಹಾಗೂ ಆರೋಗ್ಯವಲಯದ ನಿರ್ಲಕ್ಷ್ಯಕ್ಕೆ ಕಾರಣವಾಗಿರುವುದಾಗಿ ಬಿಜೆಪಿ ರಾಜ್ಯ ಸಮಿತಿ ಅಧ್ಯಕ್ಷ ಕೆ. ಸುರೇಂದ್ರನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.   
         60 ಕೋಟಿ ವೆಚ್ಚದಲ್ಲಿ ಟಾಟಾ ಸಂಸ್ಥೆಯ ಸಿಎಸ್‍ಆರ್ ನಿಧಿಯಿಂದ ನಿರ್ಮಿಸಲಾದ ಆಸ್ಪತ್ರೆಯನ್ನು ಸರ್ಕಾರ ಸಕಾಲದಲ್ಲಿ ನವೀಕರಣ ಮಾಡದಿರುವುದರಿಂದ ಇಂದು ಪಾಳು ಬೀಳುವ ಸ್ಥಿತಿ ನಿರ್ಮಾಣವಾಗಿದೆ.  ಆಸ್ಪತ್ರೆಯಲ್ಲಿನ ಎಲ್ಲ ಕಂಟೈನರ್‍ಗಳಲ್ಲಿ ವ್ಯಾಪಕ ಸೋರಿಕೆಗೆ ಕಾರಣವಾಗಿದೆ. ಟಾಟಾ ಸಂಸ್ಥೆ ಕೋವಿಡ್ ಸಂದಿದ್ಘ ಕಾಲಾವಸ್ಥೆಯಲ್ಲಿ ಕೊಡಲಾಡಲಾದ ಸುಸಜ್ಜಿತ ಆಸ್ಪತ್ರೆಯನ್ನು ಉಳಿಸಿಕೊಳ್ಳಲಾಗದ ಸರ್ಕಾರ ಜಿಲ್ಲೆಯ ಜನತೆಯ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದೆ.
          ಆರೋಗ್ಯ ರಂಗದಲ್ಲಿ ನಂಬರ್ ಒನ್ ಎಂದು ಹೇಳಿಕೊಳ್ಳುವ ಸರ್ಕಾರಕ್ಕೆ ಕಾಸರಗೋಡು ಜಿಲ್ಲೆಯಲ್ಲಿ ಉತ್ತಮ ಆಸ್ಪತ್ರೆ ನಿರ್ಮಿಸಿಕೊಡಲಾಗಿಲ್ಲ. ರಾಜ್ಯದ ಯಾವ ಜಿಲ್ಲೆಯಲ್ಲಿಯೂ ಸುಸಜ್ಜಿತ ಆಸ್ಪತ್ರೆ ಇಂದಿಗೂ ನಿರ್ಮಿಸಲಾಗಿಲ್ಲ. ಟಾಟಾ ಸಂಸ್ಥೆ ಕೊಡುಗೆಯಾಗಿ ನೀಡಿದ ಪ್ರಸಕ್ತ ಆಸ್ಪತ್ರೆಯನ್ನು ರಕ್ಷಿಸುವ ಬದಲು ನಿರ್ನಾಮ ಮಾಡಲು ಸರ್ಕಾರ ಮುಂದಾಗಿರುವುದು ಖಂಡನೀಯ. ಕೋವಿಡ್ ಸಮಯದಲ್ಲಿ ಜಿಲ್ಲೆಯಲ್ಲಿ ಉತ್ತಮ ಆಸ್ಪತ್ರೆಯ ಕೊರತೆ ಎದುರಾದಾಗ ಟಾಟಾ ಸಂಸ್ಥೆ ನಿರ್ಮಿಸಿಕೊಟ್ಟ ಆಸ್ಪತ್ರೆ ಇಲ್ಲಿನ ಜನತೆಗೆ ವರದಾನವಾಗಿ ಪರಿಣಮಿಸಿದ್ದರೂ, ಸರ್ಕಾರ ಮಾತ್ರ ಇದನ್ನು ಉಳಿಸಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ.
            ಕೋವಿಡ್ ಸಂತ್ರಸ್ತರಿಗಾಗಿ ನಿರ್ಮಿಸಿಕೊಟ್ಟಿದ್ದ ಆಸ್ಪತ್ರೆಯನ್ನು ಇತರೆ ರೋಗಿಗಳಿಗೂ ಬಳಸಿಕೊಳ್ಳುವ ರೀತಿಯಲ್ಲಿ ಅಭಿವೃದ್ಧಿಪಡಿಸುವುದಾಗಿ ರಾಜ್ಯ ಸರ್ಕಾರ ನೀಡಿದ್ದ ಭರವಸೆಯೂ ಸುಳ್ಳಾಗಿದೆ. ಕಾಸರಗೋಡು ಜಿಲ್ಲೆಯ ಜನರನ್ನು ಎರಡನೇ ದರ್ಜೆಯ ನಾಗರಿಕರಂತೆ ನೋಡುತ್ತಿರುವ ರಾಜ್ಯ ಸರ್ಕಾರದ ಧೋರಣೆಗೆ ಇದು ಪ್ರತ್ಯಕ್ಷ ನಿದರ್ಶನವಾಗಿದೆ ಎಂದು ಸುರೇಂದ್ರನ್ ಆರೋಪಿಸಿದ್ದಾರೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries