HEALTH TIPS

ಈ ವರ್ಷ ಕೇರಳ ರಾಜ್ಯೋತ್ಸವದಂದು ರಾಜ್ಯದ ಕಂದಾಯ ಕಚೇರಿಗಳು ಸಂಪೂರ್ಣವಾಗಿ ಡಿಜಿಟಲ್ ಆಗಲಿವೆ: ಸಚಿವ ಕೆ.ರಾಜನ್

 



                      ಕಾಸರಗೋಡು :‘ಎಲ್ಲರಿಗೂ ಭೂಮಿ, ಎಲ್ಲ ಭೂಮಿಗೆ ದಾಖಲೆ, ಪ್ರತಿ ಕಚೇರಿಯೂ ಸ್ಮಾರ್ಟ್’ ಎಂಬ ಘೋಷವಾಕ್ಯದೊಂದಿಗೆ ಕೇರಳದ ಕಂದಾಯ ಇಲಾಖೆಯ ಕಾರ್ಯನಿರ್ವಹಣೆಯನ್ನು ಸಂಪೂರ್ಣ ಡಿಜಿಟಲ್ ಮಾಡುವ ಗುರಿ ಹೊಂದಲಾಗಿದೆ ಎಂದು ಕಂದಾಯ ವಸತಿ ಇಲಾಖೆ ಸಚಿವ ಕೆ.ರಾಜನ್ ಹೇಳಿದರು.  
                    ಕೂಡ್ಲು ಡಿಜಿಟಲ್ ವಿಲೇಜ್ ಕಚೇರಿ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಈ ವರ್ಷದ ನವೆಂಬರ್ 1 ಕೇರಳ ರಾಜ್ಯೋತ್ಸವ ದಿನದಂದು ಇಲಾಖೆಯು ಗ್ರಾಮ ಕಚೇರಿಗಳಿಂದ ಪ್ರಾರಂಭಿಸಿ ಸಚಿವಾಲಯದ ಕಂದಾಯ ಕೇಂದ್ರದವರೆಗೆ ಏಕಕಾಲದಲ್ಲಿ ಇಲಾಖೆಯ ಎಲ್ಲಾ ಕಚೇರಿಗಳನ್ನು ಡಿಜಿಟಲೀಕರಣಗೊಳಿಸುವ ಗುರಿಯನ್ನು ಅನುಸರಿಸುತ್ತಿದ್ದು, ಇದು ಕಾರ್ಯರೂಪಕ್ಕೆ ಬಂದರೆ ಎಲ್ಲಾ ಕಚೇರಿಗಳು ಡಿಜಿಟಲ್ ಆಗಿರುವ ರಾಜ್ಯದ ಮೊದಲ ಇಲಾಖೆಯಾಗಲಿದೆ ರೆವೆನ್ಯೂ. ಸರಕಾರದ ಎರಡನೇ ವರ್ಷಾಚರಣೆ ನಿಮಿತ್ತ ರಾಜ್ಯದಲ್ಲಿ ಇನ್ನು 136 ಗ್ರಾಮ ಕಚೇರಿಗಳನ್ನು ಉದ್ಘಾಟಿಸಿ ರಾಷ್ಟ್ರಕ್ಕೆ ಸಮರ್ಪಿಸಲಾಗುವುದುಎಂದರು.

          
             ಉಳಿಯತಡ್ಕದಲ್ಲಿ ನಿರ್ಮಿಸಲಾದ ಕೂಡ್ಲು ಡಿಜಿಟಲ್ ವಿಲೇಜ್ ಕಚೇರಿ ಕಟ್ಟಡದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎನ್.ಎ.ನೆಲ್ಲಿಕ್ಕುನ್ನು ಅವರು ವಹಿಸಿದ್ದರು. ಮಧೂರು ಪಂಚಾಯತ್ ಅಧ್ಯಕ್ಷ ಕೆ.ಗೋಪಾಲಕೃಷ್ಣ, ಎಡಿಎಂ ಎ.ಕೆ.ರಾಮೇಂದ್ರನ್, ಬ್ಲಾಕ್ ಪಂಚಾಯತ್ ಸದಸ್ಯೆ ಜಮೀಲಾ ಅಹಮದ್, ಪಂಚಾಯತ್ ಸದಸ್ಯ ಸಿ.ಎಂ.ಬಶೀರ್ ಪುಳ್ಕೂರು, ರಾಷ್ಟ್ರೀಯ ಪಕ್ಷದ ಪ್ರತಿನಿಧಿಗಳಾದ ಎ.ರವೀಂದ್ರನ್, ಕೆ.ಸುನೀಲಕುಮಾರ್, ಪ್ರಮೀಳಾ ಮಜಲ್, ಸಿದ್ದಿಕ್ ಚೇರಂಕೈ, ಅನಂತನ್ ನಂಬಿಯಾರ್, ಉಬೈದುಲ್ಲಾ ಕಡವತ್, ತಂಬಾನ್ ನಾಯರ್, ನೇಶನಲ್ ಅಬ್ದುಲ್ಲಾ ಮತ್ತಿತರರು ಮಾತನಾಡಿದರು. ಈ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಸ್ವಾಗತಿಸಿ, ಅಪರ ಜಿಲ್ಲಾಧಿಕಾರಿ ಜಗಿ ಪಾಲ್ (ಎಲ್ ಆರ್) ವಂದಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries