HEALTH TIPS

ಮಕ್ಕಳನ್ನು ಮೊಬೈಲ್‌ನ ಗುಂಗಿನಿಂದ ಹೊರತರಲು ಈ ಟ್ರಿಕ್ಸ್‌ ಫಾಲೋ ಮಾಡಿ

 

ಈ ಆಧುನಿಕ ಯುಗದಲ್ಲಿ ಮಕ್ಕಳು ಫೊನ್‌, ಲ್ಯಾಪ್‌ಟಾಪ್‌, ಟ್ಯಾಬ್‌ ಹೀಗೆ ಗೆಜೆಟ್‌ಗಳಿಗೆ ದಾಸರಾಗಿದ್ದಾರೆ. ಎಷ್ಟರ ಮಟ್ಟಿಗೆ ಈ ಗೆಜೆಟ್‌ಗಳು ಮಕ್ಕಳನ್ನು ಆವರಿಸಿಕೊಂಡು ಬಿಟ್ಟಿದೆ ಅಂದ್ರೆ ಮಕ್ಕಳು ಸ್ನೇಹಿತರೊಂದಿಗೆ ಆಟವಾಡೋದಕ್ಕೂ ಹೊರಗಡೆ ಹೋಗೋದಿಲ್ಲ. ಬದಲಾಗಿ ಸಮಯ ಸಿಕ್ಕಾಗಲೆಲ್ಲಾ ಮೊಬೈಲ್‌ ಅಥವಾ ಲ್ಯಾಪ್‌ಟಾಪ್‌ ಜೊತೆಗೆ ಕಾಲ ಕಳೆಯುತ್ತಿದ್ದಾರೆ.

ಇತ್ತೀಚಿಗಂತೂ ಮಕ್ಕಳು ಕುಟುಂಬದ ಮೌಲ್ಯಗಳನ್ನೇ ಅರಿಯದ ಪರಿಸ್ಥಿತಿಗೆ ತಲುಪಿ ಬಿಟ್ಟಿದ್ದಾರೆ. ಮನೆಯಲ್ಲಿ ಅಷ್ಟೇ ಯಾಕೆ ಹೊರಗಡೆ ಎಲ್ಲಾದರೂ ಪ್ರವಾಸಕ್ಕೆ ಹೊರಟಾಗಲು ಮಕ್ಕಳು ಪ್ರವಾಸದ ಸುಂದರ ಕ್ಷಣಗಳನ್ನು ಎಂಜಾಯ್‌ ಮಾಡೋದನ್ನು ಬಿಟ್ಟು ಅಲ್ಲೂ ಕೂಡ ಗೆಜೆಟ್‌ ಹಿಡಿದುಕೊಂಡೆ ತಮ್ಮ ಸಮಯ ಕಳೆಯುತ್ತಾರೆ.

ಅಷ್ಟಕ್ಕು ಪ್ರವಾಸದ ಸಮಯದಲ್ಲಿ ಮಕ್ಕಳನ್ನು ಗೆಜೆಟ್‌ನಿಂದ ದೂರವಿಡಲು ಏನು ಮಾಡಬೇಕು? ಪೋಷಕರೇ ಈ ಟ್ರಿಕ್ಸ್‌ ಫಾಲೋ ಮಾಡಿದ್ರೆ ಖಂಡಿತ ನಿಮ್ಮ ಮಕ್ಕಳು ಗೆಜೆಟ್‌ ಗುಂಗಿನಿಂದ ಹೊರ ಬಂದು ಎಲ್ಲರ ಜೊತೆಗೆ ಸೇರುತ್ತಾರೆ.

1. ಮಕ್ಕಳಿಗೆ ಆಸಕ್ತಿಕರ ಆಟಗಳನ್ನು ಆಡಿಸಿ

ಪ್ರಯಾಣದ ಸಮಯದಲ್ಲಿ ಮಕ್ಕಳು ಗೆಜೆಟ್‌ ಮುಟ್ಟೋದನ್ನು ತಪ್ಪಿಸಲು ಅವರಿಗೆ ಆಸಕ್ತಿಕರ ಆಟಗಳನ್ನು ಆಡಲು ಅವಕಾಶ ಕೊಡಿ. ಒಂದು ವೇಳೆ ಅವರಿಗೆ ಆ ಆಟ ಆಸಕ್ತಿಕರ ಅನ್ನಿಸಿದರೆ ತುಂಬಾನೇ ಇಷ್ಟಪಡುತ್ತಾರೆ. ಹಾಗೂ ಗೆಜೆಟ್‌ ಕಡೆಗೆ ಅವರ ಗಮನ ಕಡಿಮೆ ಆಗುತ್ತದೆ.

2. ಕಥೆ ಪುಸ್ತಕಗಳು ಪ್ರಯಣದ ಸಮಯದಲ್ಲಿ ಜೊತೆಗೆ ಇರಲಿ

ಮಕ್ಕಳಿಗೆ ಕಥೆ ಪುಸ್ತಕಗಳೆಂದರೆ ತುಂಬಾನೇ ಇಷ್ಟ. ಆದ್ರೆ ಈ ಗೆಜೆಟ್‌ಗಳಿಂದಾಗಿ ಮಕ್ಕಳು ಅದೆಲ್ಲದರಿಂದ ದೂರವಾಗಿದ್ದಾರೆ. ನೀವು ಪ್ರಯಾಣ ಮಾಡುವ ಸಂದರ್ಭದಲ್ಲಿ ಕಥೆ ಪುಸ್ತಕಗಳನ್ನು ಇಟ್ಟುಕೊಳ್ಳಿ ಮಕ್ಕಳಿಗೆ ಅದನ್ನು ಓದಲು ಕೊಡಿ ಒಂದೆರಡು ಪುಸ್ತಕ ಇದ್ದರೆ ಸಾಕು. ಅವರನ್ನು ಮೊಬೈಲ್‌, ಟ್ಯಾಪ್‌ನಿಂದ ದೂರ ಇಡೋದಕ್ಕೆ ಇದು ಸಹಕರಿಸುತ್ತದೆ.

3. ಆಡಿಯೋ ಬುಕ್‌ ಅಥವಾ ಮ್ಯೂಸಿಕ್‌ ಪ್ಲೇ ಮಾಡಿ

ಪ್ರಯಣದ ಸಮಯದಲ್ಲಿ ಮಕ್ಕಳನ್ನು ಗೆಜೆಟ್‌ನಿಂದ ದೂರ ಇಡಲು ಮತ್ತೊಂದು ಒಳ್ಳೆಯ ಉಪಾಯ ಅಂದ್ರೆ ಆಡಿಯೋ ಬುಕ್‌ಗಳನ್ನು ಪ್ಲೇ ಮಾಡೋದು. ನೀವು ಕಾರಿನಲ್ಲಿ ಹೋಗೋವಾಗ ಅವರಿಗಿಷ್ಟವಾದ ಹಾಡು ಪ್ಲೇ ಮಾಡಿದ್ರೆ ಖಂಡಿತ ಅವರು ಅದನ್ನು ಎಂಜಾಯ್‌ ಮಾಡ್ತಾರೆ ಹಾಗೂ ಅದಕ್ಕೆ ತಕ್ಕ ಹಾಗೇ ಡಾನ್ಸ್‌ ಕೂಡ ಮಾಡ್ತಾರೆ. ಇಲ್ಲದಿದ್ದರೆ ಆಡಿಯೋ ಬುಕ್‌ ಕೂಡ ಉತ್ತಮ ಆಯ್ಕೆ. ಇತ್ತೀಚಿಗೆ ಆಡಿಯೋ ಬುಕ್‌ಗಳ ಚಾನೆಲ್‌ಗಳು ತಲೆ ಎತ್ತಿವೆ. ಅವುಗಳಲ್ಲಿ ರಾಮಾಯಣ, ಮಹಾಭಾರತದಿಂದ ಹಿಡಿದು ಎಲ್ಲಾ ರೀತಿಯ ಕಥೆಗಳಿದೆ. ಅವುಗಳನ್ನು ಮಕ್ಕಳಿಗೆ ಕೇಳಿಸಬಹುದು.

3. ಆಡಿಯೋ ಬುಕ್‌ ಅಥವಾ ಮ್ಯೂಸಿಕ್‌ ಪ್ಲೇ ಮಾಡಿ

ಪ್ರಯಣದ ಸಮಯದಲ್ಲಿ ಮಕ್ಕಳನ್ನು ಗೆಜೆಟ್‌ನಿಂದ ದೂರ ಇಡಲು ಮತ್ತೊಂದು ಒಳ್ಳೆಯ ಉಪಾಯ ಅಂದ್ರೆ ಆಡಿಯೋ ಬುಕ್‌ಗಳನ್ನು ಪ್ಲೇ ಮಾಡೋದು. ನೀವು ಕಾರಿನಲ್ಲಿ ಹೋಗೋವಾಗ ಅವರಿಗಿಷ್ಟವಾದ ಹಾಡು ಪ್ಲೇ ಮಾಡಿದ್ರೆ ಖಂಡಿತ ಅವರು ಅದನ್ನು ಎಂಜಾಯ್‌ ಮಾಡ್ತಾರೆ ಹಾಗೂ ಅದಕ್ಕೆ ತಕ್ಕ ಹಾಗೇ ಡಾನ್ಸ್‌ ಕೂಡ ಮಾಡ್ತಾರೆ. ಇಲ್ಲದಿದ್ದರೆ ಆಡಿಯೋ ಬುಕ್‌ ಕೂಡ ಉತ್ತಮ ಆಯ್ಕೆ. ಇತ್ತೀಚಿಗೆ ಆಡಿಯೋ ಬುಕ್‌ಗಳ ಚಾನೆಲ್‌ಗಳು ತಲೆ ಎತ್ತಿವೆ. ಅವುಗಳಲ್ಲಿ ರಾಮಾಯಣ, ಮಹಾಭಾರತದಿಂದ ಹಿಡಿದು ಎಲ್ಲಾ ರೀತಿಯ ಕಥೆಗಳಿದೆ. ಅವುಗಳನ್ನು ಮಕ್ಕಳಿಗೆ ಕೇಳಿಸಬಹುದು.

6. ಪೋಷಕರು ಕೂಡ ಮೊಬೈಲ್‌ ಗುಂಗಿನಿಂದ ಹೊರಬರಬೇಕು 
ಮಕ್ಕಳು ಚಿಕ್ಕದಿರಬೇಕಾದರೆ ಏನೇ ಕಲಿತರೂ ಕೂಡ ಅದು ಪೋಷಕರಿಂದ. ಅದು ಒಳ್ಳೆಯದಾಗಲಿ ಅಥವಾ ಕೆಟ್ಟದಾಗಲಿ ಎಲ್ಲವೂ ಪೋಷಕರಿಂದಲೇ ಬಳುವಳಿಯಾಗಿ ಬಂದಿರುತ್ತದೆ. ಹೀಗಾಗಿ ಮೊದಲು ಪೋಷಕರು ಗೆಜೆಟ್‌ಗಳನ್ನು ಹಿಡಿಯುವ ಅಭ್ಯಾಸವನ್ನು ಕಡಿಮೆ ಮಾಡಬೇಕು. ಅಗತ್ಯವಿದ್ದಾಗ ಮಾತ್ರ ಗೆಜೆಟ್‌ ಬಳಕೆ ಮಾಡಿದರೆ ಸಾಕು. ಸಾಧ್ಯವಾದಷ್ಟು ಮಕ್ಕಳ ಜೊತೆಗೆ ಬೆರೆಯಿರಿ. ಅವರ ಚಟುವಟಿಕೆಯ ಬಗ್ಗೆ ತಿಳಿದುಕೊಳ್ಳಿ. ನೀವು ಹೇಗೆ ಇರುತ್ತಿರೋ ಮಕ್ಕಳು ಕೂಡ ಅದನ್ನೇ ಕಲಿಯುತ್ತಾರೆ. ಮಕ್ಕಳಲ್ಲಿ ಉತ್ತಮ ಜೀವನ ಮೌಲ್ಯಗಳನ್ನು ನೀಡುವುದು ಪೋಷಕರಾದವರ ಕರ್ತವ್ಯ. ಚಿಕ್ಕಂದಿನಿಂದಲೇ ಒಳ್ಳೆಯ ಅಭ್ಯಾಸಗಳನ್ನು ರೂಡಿಸಿದರೇ ಮುಂದೆ ದೊಡ್ಡವರಾದ ಮೇಲೆ ಅವರು ಅಂತಹ ವಿಚಾರಧಾರೆಗಳನ್ನೇ ಮೈಗೂಡಿಸಿಕೊಳ್ಳುತ್ತಾರೆ.



 

 

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries