HEALTH TIPS

ಬಸ್​ ನಿಲ್ದಾಣದಲ್ಲಿ ನಿಂತಿದ್ದ ಯುವತಿ ಕೆನ್ನೆಗೆ ಬಾರಿಸಿದ ಯುವಕ! ನಂತರ ನಡೆದಿದ್ದು ಮತ್ತೊಂದು ಎಡವಟ್ಟು

 

            ತಿರುವನಂತಪುರಂ: ಯುವಕನೊಬ್ಬ ಬಸ್​ ನಿಲ್ದಾಣದಲ್ಲಿ ನಿಂತಿದ್ದ ಯುವತಿಯ ಕಪಾಳಕ್ಕೆ ಬಾರಿಸಿ ಎಸ್ಕೇಪ್​ ಆಗುವಾಗ ಸರಣಿ ಅಪಘಾತ ಸಂಭವಿಸಿರುವ ಘಟನೆ ಸೋಮವಾರ ಸಂಜೆ ನೆಯ್ಯಟ್ಟಿಂಕರದ ಕೆಎಸ್​​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ನಡೆದಿದೆ.

         ಯುವತಿಯ ಕೆನ್ನೆಗೆ ಬಾರಿಸಿದ ಯುವಕನನ್ನು ಅನವೂರ್​ ಮೂಲದ ಶಿನೋಜ್ ಎಂದು ಗುರುತಿಸಲಾಗಿದೆ.

                 ಕಪಾಳಕ್ಕೆ ಬಾರಿಸಿ ಓಡಿ ಹೋಗುವಾಗ ಶಿನೋಜ್​ನನ್ನು ನೋಡಿದ ಸ್ಥಳೀಯರು ಆತನನ್ನು ಹಿಡಿಯಲು ಪ್ರಯತ್ನಿಸಿದರು. ಈ ವೇಳೆ ಶಿನೋಜ್​ ತನ್ನ ಸ್ನೇಹಿತನ ಜೊತೆ ಕಾರಿನಲ್ಲಿ ಎಸ್ಕೇಪ್​ ಆಗುವ ಭರದಲ್ಲಿ ಸರಣಿ ಅಪಘಾತ ಮಾಡಿದ್ದಾರೆ. ಎರಡು ಆಟೋ ಮತ್ತು ನಾಲ್ಕು ಬೈಕ್​ಗಳಿಗೆ ಕಾರು ಡಿಕ್ಕಿ ಹೊಡೆದಿದೆ. ಓರ್ವ ಬೈಕ್​ ಸವಾರನಿಗೆ ಗಾಯವಾಗಿದೆ.

                   ಸರಣಿ ಅಪಘಾತದ ಬಳಿಕ ಕಾರು ರಸ್ತೆಯಲ್ಲಿ ಎದುರಿಗೆ ಸಿಕ್ಕ ಪೊಲೀಸ್​ ಜೀಪ್​ಗೂ ಡಿಕ್ಕಿ ಹೊಡೆದಿದೆ. ಕಪಾಳಕ್ಕೆ ಹೊಡೆತ ತಿಂದ ಯುವತಿ ಶಿನೋಜ್​ನ ಗರ್ಲ್​ಫ್ರೆಂಡ್​ ಎಂದು ಹೇಳಲಾಗಿದೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿರುವ ದೃಶ್ಯ ಬಸ್​ ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲೂ ಸೆರೆಯಾಗಿದೆ. ಯುವತಿಯ ಫೋನ್​ ಕಸಿದುಕೊಂಡು ಆಕೆಯ ಕಪಾಳಕ್ಕೆ ಬಾರಿಸಿ ಶಿನೋಜ್​ ಎಸ್ಕೇಪ್​ ಆಗುವಾಗ ಸರಣಿ ಅಪಘಾತ ನಡೆದಿದೆ.

                ಶಿನೋಜ್​ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದಾರೆ.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries