ಕೊಚ್ಚಿ: ಅಗ್ನಿ ಅವಘಡದಿಂದ ವಿಷಕಾರಿ ಹೊಗೆ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಬ್ರಹ್ಮಪುರಂಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಸಂಸದ ಹಾಗೂ ಬಿಜೆಪಿಯ ಹಿರಿಯ ನಾಯಕ ಪ್ರಕಾಶ್ ಜಾವಡೇಕರ್ ಇದನ್ನು ಖಚಿತಪಡಿಸಿದ್ದಾರೆ. ಕೊಚ್ಚಿಯಲ್ಲಿ ಮಾನವ ನಿರ್ಮಿತ ಅನಾಹುತಕ್ಕೆ ಭ್ರಷ್ಟಾಚಾರವೇ ಕಾರಣ ಎಂದು ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯನ್ನು ಸರಕಾರವೇ ಹುಸಿಗೊಳಿಸಿದೆ ಎಂದು ಗಮನ ಸೆಳೆದರು. ರಾಜ್ಯ ಮಾಲಿನ್ಯ ಮಂಡಳಿಯ ವರದಿ ಪ್ರಕಾರ, ಆವರಣದಲ್ಲಿ ಮಾರಣಾಂತಿಕ ವಿಷಕಾರಿ ಅನಿಲಗಳ ಉಪಸ್ಥಿತಿ ಇದೆ. ಇದನ್ನು ಸರ್ಕಾರ ಮರೆಮಾಚುವ ಯತ್ನದಲ್ಲಿ ರಾಜ್ಯ ಸರ್ಕಾರ ಹವಣಿಸುವ ಮಧ್ಯೆ ಕೇಂದ್ರ ತಂಡ ಆಗಮಿಸಿತು.
ಬ್ರಹ್ಮಪುರಂನಲ್ಲಿ ಭ್ರಷ್ಟಾಚಾರ ನಡೆದಿದೆ, ಬಯೋಮೈನಿಂಗ್ ಮತ್ತು ತ್ಯಾಜ್ಯ ಸಂಸ್ಕರಣಾ ಘಟಕವನ್ನು ಈ ಪ್ರದೇಶದಲ್ಲಿ ಅಳವಡಿಸಲಾಗಿಲ್ಲ. ಆದರೆ ಇದೆಲ್ಲದರ ಹೆಸರಲ್ಲಿ ಬಿಲ್ ಪಾಸ್ ಆಗುತ್ತಿದೆ. ಇದು ಮಾನವ ಸಮಾಜ ಮತ್ತು ಪ್ರಕೃತಿಗೆಸೆದ ಭ್ರಷ್ಟಾಚಾರ ಎಂದು ಜಾವಡೇಕರ್ ಪ್ರತಿಕ್ರಿಯಿಸಿರುವರು.
ಈ ಪ್ರದೇಶದಲ್ಲಿನ ನದಿ ನೀರು ಮತ್ತು ಅಂತರ್ಜಲವನ್ನು ಪರೀಕ್ಷಿಸಬೇಕು. ಪ್ರಸ್ತುತ ಅವು ಕಲುಷಿತ ಸ್ಥಿತಿಯಲ್ಲಿವೆ. ಈ ನೀರನ್ನು ಕಾಕ್ಕನಾಡು ಸ್ಮಾರ್ಟ್ ಸಿಟಿಯಲ್ಲಿ ವಿತರಿಸಲಾಗುತ್ತದೆ. ಈ ಪ್ರದೇಶದಲ್ಲಿ ಆರೋಗ್ಯ ಸಮಸ್ಯೆಗಳಿವೆ ಎಂಬ ದೂರುಗಳೂ ಕೇಳಿ ಬರುತ್ತಿವೆ. ಆದರೂ ಸರಕಾರದಿಂದ ಯಾವುದೇ ಕ್ರಮವಾಗಿಲ್ಲ. ಇದನ್ನು ಸಹಜ ಬೆಂಕಿ ಎಂದು ಬಿಂಬಿಸಲು ಪಿಣರಾಯಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಪ್ರಕಾಶ್ ಜಾವಡೇಕರ್ ಆರೋಪಿಸಿದ್ದಾರೆ.
ಬ್ರಹ್ಮಪುರಂ ಸುತ್ತಮುತ್ತಲ ಪ್ರದೇಶದಲ್ಲಿ ಮಾರಕ ವಿಷಕಾರಿ ಅನಿಲ: ಪರಿಶೀಲನೆಗೆ ಆಗಮಿಸಿದ ಕೇಂದ್ರ ತಂಡ: ರಾಜ್ಯ ಮಾಲಿನ್ಯ ಮಂಡಳಿಯ ವರದಿ ಮರೆಮಾಚುವ ಯತ್ನ ನಡೆದಿದೆ: ಜಾವಡೇಕರ್
0
ಮಾರ್ಚ್ 11, 2023





