ತಿರುವನಂತಪುರ: ಕೇರಳಕ್ಕೆ ಕಲಬೆರಕೆ ಮೇವು ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಸಚಿವೆ ಜೆ.ಚಿಂಚುರಾಣಿ ಹೇಳಿದ್ದಾರೆ.
ಮೇವಿನ ಕಲಬೆರಕೆ ತಡೆಯಲು ಮಸೂದೆ ಮಂಡಿಸಲಾಗಿದೆ ಎಂದು ಸಚಿವರು ವಿಧಾನಸಭೆಗೆ ತಿಳಿಸಿದರು. ಕೂಡಲೇ ಕಾನೂನು ಜಾರಿಗೆ ತರಲಾಗುವುದು ಎಂದು ಸಚಿವರು ತಿಳಿಸಿದರು. ಕಲಬೆರಕೆ ಮೇವಿನಿಂದ ಹಸುಗಳು ಸಾಯುತ್ತಿರುವ ಪ್ರಕರಣದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಜಾನುವಾರುಗಳ ಚರ್ಮದ ಗಂಟುರೋಗಕ್ಕೆ ಔಷಧಿ ವಿತರಿಸಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ಸಾವನ್ನಪ್ಪಿದ ಹಸುಗಳ ಮಾಲೀಕರಿಗೆ 30,000 ಪರಿಹಾರ ನೀಡಲಾಗುವುದು. ಸಣ್ಣ ಹಸುವಿಗೆ 16,000 ಮತ್ತು ಕರುವಿಗೆ 5,000 ನೀಡಲಾಗುವುದು.
ಶಾಲೆಗಳಲ್ಲಿ ಮಿಲ್ಮಾ ಪಾರ್ಲರ್‍ಗಳನ್ನು ಆರಂಭಿಸಲಾಗುವುದು ಎಂದು ಸಚಿವರು ತಿಳಿಸಿದರು. ಪಿಟಿಎ ಸಹಕಾರದೊಂದಿಗೆ ಯೋಜನೆ ಅನುಷ್ಠಾನಗೊಳಿಸಲಾಗುವುದು. ಶಾಲೆಗಳಲ್ಲಿ ಡ್ರಗ್ಸ್ ತಡೆಗಟ್ಟುವ ಯೋಜನೆಯ ಭಾಗವಾಗಿ ಇಂತಹ ಅಂಗಡಿಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿರುವರು.
ಮೇವಿನ ಕಲಬೆರಕೆ ತಡೆಯಲು ಕಾನೂನು: ಶಾಲೆಗಳಲ್ಲಿ ಮಿಲ್ಮಾ ಪಾರ್ಲರ್‍ಗಳ ಆರಂಭ: ಸಚಿವೆ ಚಿಂಚು ರಾಣಿ
0
ಮಾರ್ಚ್ 16, 2023


