HEALTH TIPS

ಈ ರೀತಿಯ ಅಭ್ಯಾಸಗಳಿದ್ದರೆ ಇಂದೇ ಬಿಟ್ಟು ಬಿಡಿ, ಇಲ್ಲದಿದ್ದರೆ ಕಿಡ್ನಿಗೆ ಹಾನಿ ತಪ್ಪಿದ್ದಲ್ಲ!

 

ನಾವು ಹೆಲ್ದೀಯಾಗಿರಬೇಕಂದ್ರೆ ನಮ್ಮ ದೇಹದ ಪ್ರಮುಖ ಅಂಗಾಂಶ ಕಿಡ್ನಿ ಅಂದರೆ ಮೂತ್ರಪಿಂಡದ ಆರೋಗ್ಯವೂ ಬಹಳ ಮುಖ್ಯ. ನಮ್ಮ ದೇಹದಲ್ಲಿರುವ ರಕ್ತವನ್ನು ಶುದ್ಧೀಕರಿಸುವ ಈ ಅಂಗವೇನಾದರೂ ಹಾನಿಗೊಳಗಾದರೆ ಗೊತ್ತಿಲ್ಲದ ಹಾಗೆಯೇ ಸಮಸ್ಯೆಗಳು ಉಲ್ಬಣವಾಗುತ್ತದೆ.

ತಿಳಿದೋ ತಿಳಿಯದೆಯೋ ದಿನನಿತ್ಯದ ಜೀವನದಲ್ಲಿ ಕೆಲವೊಂದು ಅಭ್ಯಾಸಗಳನ್ನು ಬೆಳೆಸಿಕೊಂಡಿರುತ್ತೇವೆ. ಅದೂ ಕೂಡಾ ಕಿಡ್ನಿಗೆ ಹಾನಿಯುಂಟು ಮಾಡುತ್ತೆ. ಆ ಕೆಲವೊಂದು ಸಾಮಾನ್ಯ ಹವ್ಯಾಸಗಳು ನಿಮ್ಮನ್ನು ಅಪಾಯದ ಅಂಚಿಗೆ ಕರೆದೊಯ್ಯಬಹುದು. ಮೂತ್ರಪಿಂಡಕ್ಕೆ ಸಮಸ್ಯೆಯುಂಟು ಮಾಡುವ ಆ ಅಭ್ಯಾಸಗಳು ಯಾವುವೆಂದರೆ,

1. ಅತಿಯಾಗಿ ನೋವುನಿವಾರಕಗಳನ್ನು ಬಳಸುವುದು

ಕೆಲವರು ಸಣ್ಣ ತಲೆನೋವು ಅಥವಾ ಕೈಕಾಲು ನೋವು ಕಾಣಿಸಿಕೊಂಡರೂ ಒಂದು ನೋವಿನ ಮಾತ್ರೆ ನುಂಗಿಬಿಡುತ್ತಾರೆ. ಇದು ನೀವು ಮಾಡುವ ದೊಡ್ಡ ತಪ್ಪು ಎನ್‌ಎಸ್ಎಐಡಿ ಮತ್ತು ನೋವು ನಿವಾರಕಗಳಂತಹ ಔಷಧಿಗಳು ಕ್ಷಣದಲ್ಲಿ ನಿಮ್ಮ ನೋವನ್ನು ಕಡಿಮೆ ಮಾಡಿದರೂ ನಿಮ್ಮ ಮೂತ್ರಪಿಂಡಗಳಿಗೆ ಹೆಚ್ಚಿನ ಹಾನಿಯುಂಟುಮಾಡುತ್ತದೆ. ವಿಶೇಷವಾಗಿ ನೀವು ಈಗಾಗಲೇ ಮೂತ್ರಪಿಂಡ ಕಾಯಿಲೆ ಹೊಂದಿದ್ದರೆ. NSAID ಗಳ ನಿಮ್ಮ ನಿಯಮಿತ ಬಳಕೆಯನ್ನು ಕಡಿಮೆ ಮಾಡಿ ಮತ್ತು ವೈದ್ಉರು ಹೇಳಿದ ಡೋಸೇಜ್ ಅನ್ನು ಎಂದಿಗೂ ಮೀರಬೇಡಿ.

2. ಹೆಚ್ಚು ಉಪ್ಪಿನ ಬಳಕೆ

ಉಪ್ಪು ಅಧಿಕವಾಗಿರುವ ಆಹಾರಗಳಲ್ಲಿ ಸೋಡಿಯಂ ಅಧಿಕವಾಗಿರುತ್ತವೆ, ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಮೂತ್ರಪಿಂಡಗಳಿಗೂ ಹಾನಿ ಮಾಡುತ್ತದೆ. ನಿಮ್ಮ ಆಹಾರಕ್ಕೆ ಉಪ್ಪಿನ ಬದಲು ಹರ್ಬ್ಸ್‌ ಮತ್ತು ಮಸಾಲೆಗಳನ್ನು ಸೇರಿಸುತ್ತಾ ಬನ್ನಿ. ಕ್ರಮೇಣ ನಿಮ್ಮ ಆಹಾರದಲ್ಲಿ ಸೇರಿಸಿದ ಬಳಸುವುದನ್ನು ತಪ್ಪಿಸಲು ನಿಮಗೆ ಸುಲಭವಾಗಬಹುದು.

3. ಸಂಸ್ಕರಿಸಿದ ಆಹಾರವನ್ನು ತಿನ್ನುವುದು

ಸಂಸ್ಕರಿಸಿದ ಆಹಾರಗಳಲ್ಲಿ ಸೋಡಿಯಂ ಮತ್ತು ರಂಜಕ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಮೂತ್ರಪಿಂಡದ ಕಾಯಿಲೆ ಇರುವವರು ತಮ್ಮ ಆಹಾರದಲ್ಲಿ ರಂಜಕವನ್ನು ಮಿತಿಗೊಳಿಸಬೇಕಾಗುತ್ತದೆ. ಮೂತ್ರಪಿಂಡದ ಕಾಯಿಲೆಯಿಲ್ಲದ ಜನರಲ್ಲಿ ಸಂಸ್ಕರಿಸಿದ ಆಹಾರದಿಂದ ಹೆಚ್ಚಿನ ರಂಜಕ ಸೇವನೆಯು ಅವರ ಮೂತ್ರಪಿಂಡಗಳು ಮತ್ತು ಮೂಳೆಗಳಿಗೆ ಹಾನಿಕಾರಕ ಎನ್ನುವುದನ್ನು ಕೆಲವು ಅಧ್ಯಯನಗಳು ತೋರಿಸಿವೆ. ಹಾಗಾಗಿ ಸಂಸ್ಕರಿಸಿದ ಆಹಾರವನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ತಾಜಾ ಹಣ್ಣು, ತರಕಾರಿ, ಧಾನ್ಯ, ಬೇಳೆಗಳಿಂದ ಮಾಡಿದ ಆಹಾರವನ್ನು ಸೇವಿಸಿ.

4. ಸಾಕಷ್ಟು ನೀರು ಕುಡಿಯದಿರುವುದು

ಹೆಚ್ಚು ನೀರು ಕುಡಿಯುವುದು ನಿಮ್ಮ ಮೂತ್ರಪಿಂಡಗಳು ದೇಹದಿಂದ ಸೋಡಿಯಂ ಮತ್ತು ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಸಾಕಷ್ಟು ನೀರು ಕುಡಿಯುವುದರಿಂದ ಮೂತ್ರಪಿಂಡದಲ್ಲಿ ಕಲ್ಲುಗಳಾಗದಂತೆಯೂ ನೋಡಿಕೊಳ್ಳಬಹುದು. ಮೂತ್ರಪಿಂಡದ ತೊಂದರೆಗಳು ಅಥವಾ ಮೂತ್ರಪಿಂಡದ ವೈಫಲ್ಯ ಹೊಂದಿರುವವರು ತಮ್ಮ ದ್ರವ ಸೇವನೆಯನ್ನು ನಿರ್ಬಂಧಿಸಬೇಕಾಗಬಹುದು, ಆದರೆ ಹೆಚ್ಚಿನ ಜನರಿಗೆ ದಿನಕ್ಕೆ 1.5 ರಿಂದ 2 ಲೀಟರ್ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು.

5. ನಿದ್ರೆ ಕೆಡುವುದು

ರಾತ್ರಿಯ ವಿಶ್ರಾಂತಿಯು ನಿಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ಮತ್ತು ನಿಮ್ಮ ಮೂತ್ರಪಿಂಡಗಳಿಗೆ ಬಹಳ ಮುಖ್ಯವಾಗಿದೆ. ಮೂತ್ರಪಿಂಡದ ಕಾರ್ಯವು ನಿದ್ರೆ-ಎಚ್ಚರ ಚಕ್ರದಿಂದ ನಿಯಂತ್ರಿಸಲ್ಪಡುತ್ತದೆ. ನಾವು ನಿದ್ದೆ ಮಾಡುವಾಗ ದೇಹದ ಅಂಗಾಂಗಳಿಗೂ ಕಡಿಮೆ ಒತ್ತಡ ಬೀಳುತ್ತದೆ. ಆದರೆ ಅತೀ ಹೆಚ್ಚು ನಿದ್ದೆ ಕೆಡುವುದರಿಂದ ಮೂತ್ರಪಿಂಡದ ಮೇಲೆಯೂ ಒತ್ತಡ ಬಿದ್ದು, ಮೂತ್ರಪಿಂಡಗಳ ಕಾರ್ಯಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.

6. ಅತಿ ಹೆಚ್ಚು ಮಾಂಸವನ್ನು ತಿನ್ನುವುದು

ಮಾಂಸಾಹಾರದಲ್ಲಿನ ಪ್ರೋಟೀನ್ ರಕ್ತದಲ್ಲಿ ಹೆಚ್ಚಿನ ಪ್ರಮಾಣದ ಆಮ್ಲವನ್ನು ಉತ್ಪಾದಿಸುತ್ತದೆ, ಅದು ಮೂತ್ರಪಿಂಡಗಳಿಗೆ ಹಾನಿಕಾರಕವಾಗಿದೆ ಮತ್ತು ಆಮ್ಲವ್ಯಾಧಿಗೆ ಕಾರಣವಾಗಬಹುದು. ಮೂತ್ರಪಿಂಡಗಳು ಆಮ್ಲವನ್ನು ಸಾಕಷ್ಟು ವೇಗವಾಗಿ ತೊಡೆದು ಹಾಕಲು ಸಾಧ್ಯವಾಗುವುದಿಲ್ಲ. ದೇಹದ ಎಲ್ಲಾ ಭಾಗಗಳ ಬೆಳವಣಿಗೆ, ನಿರ್ವಹಣೆ ಮತ್ತು ಮರುಚೇತರಿಕೆಗೆ ಪ್ರೋಟೀನ್ ಅಗತ್ಯವಿದೆ ಆದರೆ ನಿಮ್ಮ ಆಹಾರವು ಹಣ್ಣುಗಳು ಮತ್ತು ತರಕಾರಿಗಳೊಂದಿಗೆ ಸಮತೋಲಿತವಾಗಿರಬೇಕು.

7. ಸಕ್ಕರೆ ಹೆಚ್ಚಿರುವ ಹಲವಾರು ಆಹಾರಗಳನ್ನು ತಿನ್ನುವುದು

ಹೆಚ್ಚು ಸಕ್ಕರೆಯಂಶ ತಿನ್ನುವುವರಿಗೆ ಬೊಜ್ಜು ಬರುವುದು ಖಂಡಿತಾ ಮಾತ್ರವಲ್ಲ, ಇದು ಮೂತ್ರಪಿಂಡದ ಕಾಯಿಲೆಯ ಪ್ರಮುಖ ಕಾರಣವಾದ ಅಧಿಕ ರಕ್ತದೊತ್ತಡ ಮತ್ತು ಮಧುಮೇಹವನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಹೆಚ್ಚಿಸುತ್ತದೆ. ಸಿಹಿತಿಂಡಿ, ಸಿಹಿ ಪಾನೀಯಗಳಿಗೆ ಸಕ್ಕರೆಯನ್ನು ಹೆಚ್ಚಾಗಿ ಸೇರಿಸಲಾಗುತ್ತದೆ. ಆದ್ದರಿಂದ ಇದರ ಸೇವನೆ ಆದಷ್ಟು ತಪ್ಪಿಸಿ. ಸಂಸ್ಕರಿತ ಸಕ್ಕರೆಯನ್ನು ಬಳಸಿರುವಂತಹ ಕಾಂಡಿಮೆಂಟ್ಸ್, ಉಪಹಾರ ಧಾನ್ಯಗಳು ಮತ್ತು ಬಿಳಿ ಬ್ರೆಡ್ ಅನ್ನು ಸೇವಿಸಬೇಡಿ.

8. ಧೂಮಪಾನ

ಧೂಮಪಾನ ಕ್ಯಾನ್ಸರ್‌ಗೆ, ಶ್ವಾಸಕೋಶ ಹಾಗೂ ಹೃದಯದ ಸಮಸ್ಯೆಗೆ ಕಾರಣವಾಗುತ್ತೆ ಎನ್ನುವುದನ್ನು ನೀವು ಕೇಳಿರಬಹುದು. ಮೂತ್ರಪಿಂಡಕ್ಕೂ ಇದರಿಂದ ಸಮಸ್ಯೆಯಾಗುತ್ತಾ ಅಂತ ಆಶ್ಚರ್ಯವಾಗಬಹುದು. ಆದರೆ ಇದು ಸತ್ಯ. ಧೂಮಪಾನ ಮಾಡುವ ಜನರು ಮೂತ್ರದಲ್ಲಿ ಪ್ರೋಟೀನ್ ಅನ್ನು ಹೊಂದಿರುತ್ತಾರೆ. ಇದು ಮೂತ್ರಪಿಂಡದ ಹಾನಿಯ ಸಂಕೇತವಾಗಿದೆ.

9. ಅತಿಯಾಗಿ ಮದ್ಯಪಾನ ಮಾಡುವುದು

ಪ್ರತಿದಿನ ಮದ್ಯಸೇವನೆ, ದಿನಕ್ಕೆ ನಾಲ್ಕಕ್ಕಿಂತ ಹೆಚ್ಚು ಪಾನೀಯಗಳು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯ ಅಪಾಯವನ್ನು ದ್ವಿಗುಣಗೊಳಿಸುತ್ತದೆ. ಧೂಮಪಾನ ಮಾಡುವವರ ಜೊತೆಗೆ ಅತಿಯಾದ ಕುಡಿಯುವವರು ಕೂಡಾ ಮೂತ್ರಪಿಂಡದ ಸಮಸ್ಯೆಗಳ ಅಪಾಯವನ್ನು ಹೊಂದಿರುತ್ತಾರೆ. ಅತಿಯಾಗಿ ಮದ್ಯಪಾನ ಮಾಡುವ ಧೂಮಪಾನಿಗಳು ಧೂಮಪಾನ ಮಾಡದ ಅಥವಾ ಮದ್ಯಪಾನ ಮಾಡದ ಜನರಿಗಿಂತ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯನ್ನು ಹೊಂದುವ ಸಾಧ್ಯತೆಯನ್ನು ಐದು ಪಟ್ಟು ಹೆಚ್ಚು ಹೊಂದಿರುತ್ತಾರೆ.

10. ಒಂದೇ ಸ್ಥಿತಿಯಲ್ಲಿ ಕುಳಿತುಕೊಳ್ಳುವುದು

ದೀರ್ಘಕಾಲ ಒಂದೇ ಕಡೆ ಕುಳಿತುಕೊಳ್ಳುವುದು ಕೂಡಾ ಮೂತ್ರಪಿಂಡದ ಕಾಯಿಲೆಯನ್ನುಂಟು ಮಾಡಬಹುದು ಎನ್ನಲಾಗುತ್ತೆ. ಜಡತ್ವ ಅಥವಾ ದೈಹಿಕ ಚಟುವಟಿಕೆಯು ಮೂತ್ರಪಿಂಡದ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುವುದು ಏಕೆ ಅಥವಾ ಹೇಗೆ ಎಂದು ಸಂಶೋಧಕರಿಗೆ ಇನ್ನೂ ತಿಳಿದಿಲ್ಲವಾದರೂ, ಹೆಚ್ಚಿನ ದೈಹಿಕ ಚಟುವಟಿಕೆಯು ರಕ್ತದೊತ್ತಡ ಮತ್ತು ಗ್ಲೂಕೋಸ್ ಚಯಾಪಚಯವನ್ನು ನಿಯಂತ್ರಿಸುವುದರಿಂದ, ದೈಹಿಕ ಚಟುವಟಿಕೆ ಮಾಡದಿರುವುದು ಈ ಎರಡು ಸಮಸ್ಯೆಗೆ ಕಾರಣವಾಗಿ ಮುಂದೆ ಮೂತ್ರಪಿಂಡದ ಕಾರ್ಯಚಟುವಟಿಕೆಯ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಒಟ್ಟಿನಲ್ಲಿ ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಿಕೊಳ್ಳಲು ಕಡಿಮೆ ಉಪ್ಪು ಬಳಸಿದ ತಾಜಾ ಆಹಾರಗಳೊಂದಿಗೆ, ಹೆಚ್ಚು ಕುಡಿಯುವುದನ್ನು ಮರೆಯಬೇಡಿ, ಜೊತೆಗೆ ದೈಹಿಕ ಚಟುವಟಿಕೆಯನ್ನು ನಿಮ್ಮ ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳಿ.


 

 

 

Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries