ಕೋಝಿಕ್ಕೋಡ್: ಕೆಲಸ ಕೊಡಿಸುವುದಾಗಿ ವೈದ್ಯೆಯೊಬ್ಬರಿಗೆ ಕಿರುಕುಳ ನೀಡಿದ ಮೇಲ್ ನರ್ಸ್ ನನ್ನು ಬಂಧಿಸಲಾಗಿದೆ. ತ್ರಿಶೂರ್ ಮೂಲದ ಇಪ್ಪತ್ನಾಲ್ಕು ವರ್ಷದ ನಿಶಾಮ್ ಬಾಬು ಬಂಧಿತ ಆರೋಪಿ.
ಆರೋಪಿತನನ್ನು ಕೋಝಿಕ್ಕೋಡ್‍ನಲ್ಲಿ ಬಂಧಿಸಲಾಗಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನಿಶಾಮ್ ವೈದ್ಯೆ ಮೇಲೆ ಅತ್ಯಾಚಾರ ಎಸಗಿದ್ದ.
ಡಿಸೆಂಬರ್ 30 ರಂದು ಈ ಘಟನೆ ನಡೆದಿದೆ. ಆರೋಪಿ ಕೊಯಮತ್ತೂರಿನ ಆಸ್ಪತ್ರೆಯಲ್ಲಿ ಉತ್ತಮ ಕೆಲಸ ಸಿಗುತ್ತದೆ ಎಂದು ನಂಬಿಸಿ ವೈದ್ಯರನ್ನು ಕೊಯಮತ್ತೂರಿಗೆ ಕರೆದುಕೊಂಡು ಹೋಗಲು ಯತ್ನಿಸಿದ್ದಾರೆ. ಇದಕ್ಕಾಗಿ ಕೋಝಿಕ್ಕೋಡ್ ಗೆ ಕರೆತಂದು ಹೊಟೇಲ್ ನಲ್ಲಿ ರೂಂ ಬುಕ್ ಮಾಡಲಾಗಿತ್ತು. ಅಲ್ಲಿ ಕಿರುಕುಳ ಮುಂದುವರಿಸಿದ್ದ. ಬಳಿಕ ಹಲವು ಹೋಟೆಲ್‍ಗಳಿಗೆ ಕರೆದೊಯ್ದು ನಗ್ನ ದೃಶ್ಯಗಳನ್ನು ತೋರಿಸಿ ಬೆದರಿಸಿ ಕಿರುಕುಳ ನೀಡಿದ್ದ. ಐದು ಬಾರಿ ಕಿರುಕುಳ ನೀಡಿರುವುದಾಗಿ ವೈದ್ಯೆ ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
ವೈದ್ಯೆ ಬಳಿಕ ಆರೋಪಿಯ ಫೆÇೀನ್ ನಂಬರ್ ಬ್ಲಾಕ್ ಮಾಡಿ ಪರಾರಿಯಾಗಿದ್ದಾಳೆ. ಪ್ರತೀಕಾರವಾಗಿ, ಆರೋಪಿ ನಿಶಾಮ್ ಸಾಮಾಜಿಕ ಮಾಧ್ಯಮದಲ್ಲಿ ನಗ್ನ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾನೆ ಮತ್ತು ಮಹಿಳೆ ಕೋಝಿಕ್ಕೋಡ್‍ನ ಕಸಬಾ ಪೊಲೀಸರಿಗೆ ದೂರು ನೀಡಿದ್ದಾಳೆ. ನಂತರ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಮೈಸೂರಿನ ಮಹಿಳಾ ವೈದ್ಯೆಗೆ ಕಿರುಕುಳ ನೀಡಿದ ಮೇಲ್ ನರ್ಸ್ ಬಂಧನ: ಕೋಝಿಕ್ಕೋಡ್ ಲಾಡ್ಜ್‍ನಲ್ಲಿ ವಶಕ್ಕೆ
0
ಮಾರ್ಚ್ 02, 2023





