HEALTH TIPS

ಭಕ್ತಿಸಾಂದ್ರತೆಯಲ್ಲಿ ಲಕ್ಷಗಟ್ಟಲೆ ಭಕ್ತರಿಂದ ಅಟ್ಟುಕಾಲ್ ಅಮ್ಮನವರಿಗೆ ಪೊಂಗಾಲ ಸಮರ್ಪಣೆ: ಕೆಎಸ್‍ಆರ್‍ಟಿಸಿ ಮತ್ತು ರೈಲ್ವೆಯಿಂದ ವಿಶೇಷ ಸೇವೆ


             ತಿರುವನಂತಪುರ: ಇತಿಹಾಸ ಪ್ರಸಿದ್ದ, ಮಹಿಳೆಯರ ಶಬರಿಮಲೆ ಎಂಬ ಖ್ಯಾತಿಯ ಅಟ್ಟುಕ್ಕಾಲ್ ಭಗವತಿ ಅಮ್ಮನವರಿಗೆ ಭಕ್ತಿಸಾಂದ್ರತೆಯೊಂದಿಗೆ ಲಕ್ಷಗಟ್ಟಲೆ ಪೊಂಗಾಲ ಸಮರ್ಪಣೆ ಮಂಗಳವಾರ ನಡೆಯಿತು. ಮಧ್ಯಾಹ್ನ 2.30ರ ವೇಳೆಗೆ ಭಕ್ತರು ಪೊಂಕಾಲ ಅರ್ಪಿಸಿ, ತೀರ್ಥ ಸ್ವೀಕರಿಸಿದರು.
         ಬೆಳಗ್ಗೆ 10 ಕ್ಕೆ ತಂತ್ರಿ ಶ್ರೀಸನ್ನಿಧಿಯಲ್ಲಿ ದೀಪ ಬೆಳಗಿ, ಮೇಲ್ಶಾಂತಿಗೆ ನೀಡಿದರು. ಮೇಲ್ಶಾಂತಿ ದೇವಸ್ಥಾನ ಮುಂಭಾಗ ಪೊಂಗಾಲ ಕುಂಡದಲ್ಲಿ ಅಗ್ನಿಸ್ಪರ್ಶಗೈದರು. ದೇವಸ್ಥಾನದ ಮುಂಭಾಗದ ದೊಡ್ಡ ಅಗ್ನಿಕುಂಡದಲ್ಲಿ ಅಗ್ನಿಸ್ಪರ್ಶ ನಡೆಸುತ್ತಿರುವಂತೆ ನಗರದಲ್ಲಿ ಎಲ್ಲೆಡೆ ತಯಾರಿಸಲಾಗುವ ಪೊಂಗಾಲ್ ಕುಂಡಗಳಲ್ಲಿ ಅಗ್ನಿಸ್ಪರ್ಶ ನಡೆಯಿತು.
            ಕೋವಿಡ್‍ನಿಂದಾಗಿ ಕಳೆದ ಎರಡು ವರ್ಷಗಳ ನಂತರ ನಡೆಯುತ್ತಿರುವ ಪೊಂಗಾಲ್ ಗೆ ಈ ಬಾರಿ ಅಭೂತಪೂರ್ವ ಜನಸ್ತೋಮ ಕಂಡು ಬಂದಿದೆ. ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ನಗರದ ವಿವಿಧೆಡೆ ಪೆÇಂಗಾಲ್ ಅರ್ಪಿಸಿದರು. ದೇವಸ್ಥಾನದ ಆವರಣ ಹಾಗೂ ನಗರದ ಬೀದಿಗಳಲ್ಲಿ ಪೆÇಂಗಾಲ್ ಅರ್ಪಿಸಲು ಆಗಮಿಸಿದ್ದ ಜನರಿಂದ ತುಂಬಿ ತುಳುಕುತ್ತಿತ್ತು.
            ದೇವಸ್ಥಾನದ ಟ್ರಸ್ಟ್ ಮತ್ತು ಸ್ಥಳೀಯ ಸಮಿತಿಗಳು ಪೊಂಗಾಲ್ ಅರ್ಪಿಸಲು ಬಂದ ಭಕ್ತರಿಗೆ ವಿಸ್ತಾರವಾದ ಸೌಕರ್ಯಗಳನ್ನು ಸಿದ್ಧಪಡಿಸಿದ್ದವು. ಭದ್ರತೆಗಾಗಿ 3300 ಪೊಲೀಸರನ್ನು ನಿಯೋಜಿಸಲಾಗಿತ್ತು. ಜಿಲ್ಲಾಡಳಿತದ ವತಿಯಿಂದ 150 ಸ್ವಯಂಸೇವಕರು ಹಾಗೂ ಅಗ್ನಿ ಶಾಮಕದಳದ 250 ಸಿಬ್ಬಂದಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.



           ದೇವಾಲಯದ ಗೋಪುರದಲ್ಲಿ ಪಾಂಡ್ಯ ರಾಜನ ಹತ್ಯೆಯನ್ನು ವಿವರಿಸುವ ಭಾಗವನ್ನು ಗಾಯಕರು ಹಾಡಿದರು.  ರೌದ್ರಭಾವದ ದೇವಿಯ ವಿಜಯವನ್ನು ಭಕ್ತರು ಪೊಂಗಾಲದ ಮೂಲಕ ಆಚರಿಸುತ್ತಾರೆ ಎಂಬ ನಂಬಿಕೆ ಇದೆ. ನಗರದಲ್ಲಿ ಸೇವಾಭಾರತಿ 73 ಸೇವಾ ಕೇಂದ್ರಗಳನ್ನು ಸ್ಥಾಪಿಸಿತ್ತು. ಸೇವಾ ಕೇಂದ್ರದ ಮೂಲಕ ವೈದ್ಯಕೀಯ ಮತ್ತು ಆಂಬ್ಯುಲೆನ್ಸ್ ಸೇವೆಗಳು ಮತ್ತು ಆಹಾರವನ್ನು ನೀಡಲಾಯಿತು.  ಸೇವಾ ಭಾರತಿ ಕೇಂದ್ರಗಳಲ್ಲಿ 3000 ಕ್ಕೂ ಹೆಚ್ಚು ಸ್ವಯಂಸೇವಕರನ್ನು ನೇಮಿಸಲಾಗಿತ್ತು. ನಗರದ ಪ್ರಮುಖ ಆಸ್ಪತ್ರೆಗಳ ವೈದ್ಯರು ಸೇವಾ ಕೇಂದ್ರಗಳಲ್ಲಿ ವೈದ್ಯಕೀಯ ನೆರವು ನೀಡಿದ್ದರು. ಅತ್ಯಾಧುನಿಕ ಸೌಲಭ್ಯಗಳೊಂದಿಗೆ 35 ಆಂಬ್ಯುಲೆನ್ಸ್‍ಗಳನ್ನು ನಿಯೋಜಿಸಲಾಗಿತ್ತು.
       ಪೊಂಗಾಲ ಸಂದರ್ಭದಲ್ಲಿ ಕೆಎಸ್‍ಆರ್‍ಟಿಸಿ 400 ವಿಶೇಷ ಸೇವೆಗಳನ್ನು ನಡೆಸಿತು. ಅಟ್ಟುಕಲ್ ದೇವಸ್ಥಾನದಿಂದ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣಕ್ಕೆ ಸೇವೆಗಳಿದ್ದವು. ಭಾರತೀಯ ರೈಲ್ವೇಯು ವಿಶೇಷ ರೈಲು ಸೇವೆಗಳು ಮತ್ತು ಹೆಚ್ಚುವರಿ ನಿಲುಗಡೆಗಳನ್ನು  ಅನುಮತಿಸಿತ್ತು. 1270 ಸಾರ್ವಜನಿಕ ನಲ್ಲಿಗಳನ್ನು ಸ್ಥಾಪಿಸಲಾಗಿತ್ತು. ಪೊಂಗಾಲ ನಂತರ 3000 ಮಂದಿಯನ್ನು ಸ್ವಚ್ಛಗೊಳಿಸಲು ಪಾಲಿಕೆ ವ್ಯವಸ್ಥೆ ಮಾಡಿದೆ ಎಂದು ಟ್ರಸ್ಟ್ ಅಧಿಕಾರಿಗಳು ಮಾಹಿತಿ ನೀಡಿರುವರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries