HEALTH TIPS

ದೇಶದ ಪ್ರಪ್ರಥಮ ಎಲೆಕ್ಟ್ರಿಕ್ ಟಿಪ್ಪರ್ 'ಒಲೆಕ್ಟ್ರಾ' ರಸ್ತೆಗಿಳಿಯಲು ಸಿದ್ಧ; ವಿವಿಧ ಪರೀಕ್ಷೆಗಳಲ್ಲಿ ಯಶಸ್ಸು

 

            ಬೆಂಗಳೂರು: ಮೇಘಾ ಎಂಜಿನಿಯರಿಂಗ್ ಮತ್ತು ಇನ್​ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ (ಎಂಇಐಎಲ್) ಸಮೂಹ ಕಂಪನಿಯಾದ ಒಲೆಕ್ಟ್ರಾ ಗ್ರೀನ್‍ಟೆಕ್ ಲಿಮಿಟೆಡ್ (ಒಜಿಎಲ್) ದೇಶೀಯ ಆಟೋಮೋಬೈಲ್ ನಿಯಂತ್ರಣ ಸಂಸ್ಥೆ (ಆಟೋಮೊಬೈಲ್ ರೆಗ್ಯುಲೇಟರಿ ಆರ್ಗನೈಸೇಷನ್ ಆಫ್ ಇಂಡಿಯಾ) ತನ್ನ 6×4 ಹೆವಿ ಡ್ಯೂಟಿ ಎಲೆಕ್ಟ್ರಿಕ್ ಟಿಪ್ಪರ್​ಗಳನ್ನು ರಸ್ತೆಗಿಳಿಸಲು ಸಜ್ಜಾಗಿದೆ.

                  ಟಿಪ್ಪರ್​ಗೆ ಹೋಮೊಲೊಗೇಷನ್ ಪ್ರಮಾಣಪತ್ರ ಪಡೆದುಕೊಂಡಿದ್ದು, ಕೇಂದ್ರ ಮೋಟಾರು ವಾಹನ ಕಾಯ್ದೆ ನಿಯಮಗಳಿಗೆ ಅನುಸಾರವಾಗಿ, ಒಲೆಕ್ಟ್ರಾ ಹೆವಿ ಡ್ಯೂಟಿ ಎಲೆಕ್ಟ್ರಿಕ್ ಟಿಪ್ಪರ್ ರಸ್ತೆಗಿಳಿಯಲು ಅಗತ್ಯವಿರುವ ಎಲ್ಲ ಅನುಮೋದನೆಗಳನ್ನು ಪಡೆದಿದೆ.

                   ಒಲೆಕ್ಟ್ರಾ ತಯಾರಿಸಿದ ದೇಶದ ಮೊದಲ ಇ-ಟಿಪ್ಪರ್ ಪರ್ವತ ಪ್ರದೇಶ, ಬೆಟ್ಟ-ಗುಡ್ಡ, ಗಣಿಗಾರಿಕೆ ಮತ್ತು ಕಲ್ಲು ಗಣಿಗಾರಿಕೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಪರೀಕ್ಷಿಸಲಾಗಿದೆ. ಅದರ ನಂತರ, ದೇಶದ ಆಟೋಮೋಬೈಲ್ ನಿಯಂತ್ರಣ ಸಂಸ್ಥೆ ಒಲೆಕ್ಟ್ರಾ ಭಾರತೀಯ ರಸ್ತೆಗಳಿಗೆ ಅನುಗುಣವಾಗಿದೆ ಎಂದು ದೃಢಪಡಿಸಿ ಹೋಮೊಲೈಸೇಷನ್ ಪ್ರಮಾಣಪತ್ರ ನೀಡಿದೆ. ಈ ಪ್ರಮಾಣಪತ್ರ ನೆದರ್ಲೆಂಡ್, ಸಿಂಗಾಪುರ, ಆಸ್ಟ್ರೇಲಿಯಾ ಮತ್ತು ಇತರ ದೇಶಗಳಿಂದ ಪುರಸ್ಕೃತವಾಗಿದೆ.

                   ಭಾರತದ ಎಲೆಕ್ಟ್ರಿಕ್ ಹೆವಿ ವೆಹಿಕಲ್ ಕ್ಷೇತ್ರದಲ್ಲಿ ಒಲೆಕ್ಟ್ರಾ ಪ್ರಮುಖ ಪಾತ್ರ ವಹಿಸುತ್ತಿದೆ ಮತ್ತು ಒಲೆಕ್ಟ್ರಾದ ಅತ್ಯಾಧುನಿಕ ಇ-ಟಿಪ್ಪರ್ ದೇಶದ ಮೊದಲ ಪ್ರಮಾಣೀಕೃತ ಹೆವಿ ಡ್ಯೂಟಿ ಎಲೆಕ್ಟ್ರಿಕ್ ಟಿಪ್ಪರ್ ಆಗಿದೆ ಎಂದು ಒಲೆಕ್ಟ್ರಾ ಗ್ರೀನ್ ಟೆಕ್ ಲಿಮಿಟೆಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ.ವಿ.ಪ್ರದೀಪ್ ಹರ್ಷ ವ್ಯಕ್ತಪಡಿಸಿದ್ದಾರೆ.

                ಒಲೆಕ್ಟ್ರಾ ಭಾರತದಲ್ಲಿ ಎಲೆಕ್ಟ್ರಿಕ್ ಹೆವಿ ವೆಹಿಕಲ್ ವಿಭಾಗದಲ್ಲಿ ಪ್ರಮುಖ ಪಾತ್ರ ವಹಿಸಲು ಉತ್ಸುಕವಾಗಿದೆ. ಒಲೆಕ್ಟ್ರಾ ಇ-ಟಿಪ್ಪರ್ ಭಾರತದ ಮೊದಲ ಪ್ರಮಾಣೀಕೃತ ಹೆವಿ-ಡ್ಯೂಟಿ ಎಲೆಕ್ಟ್ರಿಕ್ ಟಿಪ್ಪರ್ ಆಗಿದೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಪ್ರದರ್ಶನಗಳಲ್ಲಿ ಇ-ಟಿಪ್ಪರ್​​ನ ಮೂಲ ಮಾದರಿ ಪ್ರದರ್ಶಿಸಿದ್ದೇವೆ, ಇದು ಹೆಚ್ಚಿನ ಕುತೂಹಲ ಮತ್ತು ಉತ್ಸಾಹ ಸೃಷ್ಟಿಸಿತು. 20 ಇ-ಟಿಪ್ಪರ್​ಗಳ ಮೊದಲ ಆರ್ಡರ್ ಅಂತಿಮ ಹಂತದಲ್ಲಿದೆ. ಶೀಘ್ರದಲ್ಲೇ ಇ-ಟಿಪ್ಪರ್ ಮತ್ತು ಎಲೆಕ್ಟ್ರಿಕ್ ಟ್ರಕ್​​ನ ರೂಪಾಂತರಗಳನ್ನು ಬಿಡುಗಡೆ ಮಾಡಲಿದ್ದೇವೆ. ಇದು ನಮ್ಮ ಪ್ರಯಾಣದ ಆರಂಭವಷ್ಟೇ ಎಂದು ಪ್ರದೀಪ್ ಸಂತಸ ಹಂಚಿಕೊಂಡಿದ್ದಾರೆ.

                 ಒಲೆಕ್ಟ್ರಾ ಎಲೆಕ್ಟ್ರಿಕ್ ಟಿಪ್ಪರ್​ನೊಂದಿಗೆ ನಾವು ನಿರ್ಮಾಣ, ಮೂಲಸೌಕರ್ಯ, ಗಣಿಗಾರಿಕೆ ಮತ್ತು ಕಲ್ಲುಗಣಿಗಾರಿಕೆ ಕ್ಷೇತ್ರಗಳಲ್ಲಿ ಗಮನಾರ್ಹ ಬದಲಾವಣೆ ತರುತ್ತಿದ್ದೇವೆ. ಕೆಲಸದ ಸ್ಥಳಗಳಿಗೆ ಸಾಗಿಸಬೇಕಾದ ವಸ್ತುಗಳ ಪ್ರಮಾಣದಿಂದಾಗಿ ಈ ಕ್ಷೇತ್ರಗಳು ಹೆಚ್ಚು ಬೇಡಿಕೆ ಹೊಂದಿವೆ. ಒಲೆಕ್ಟ್ರಾ ಎಲೆಕ್ಟ್ರಿಕ್ ಟಿಪ್ಪರ್ ಟೋಟಲ್ ಕಾಸ್ಟ್ ಆಫ್ ಓನರ್​ಷಿಪ್ (ಟಿಸಿಒ) ವಿಷಯದಲ್ಲಿ ವೆಚ್ಚ- ಪರಿಣಾಮಕಾರಿ ಆಗಿದ್ದು, ಮಾಲೀಕರು ತಮ್ಮ ಕಾರ್ಯಾಚರಣೆಯ ಲಾಭ ಸುಧಾರಿಸಲು ಅನುವು ಮಾಡಿಕೊಡುತ್ತದೆ ಎಂದಿದ್ದಾರೆ.

               ಕೆಲಸದ ಸ್ಥಳಗಳಲ್ಲಿ ಹಗಲು-ರಾತ್ರಿ ಒಲೆಕ್ಟ್ರಾದ ಇ-ಟಿಪ್ಪರ್​ಬಳಸಬಹುದು, ಏಕೆಂದರೆ ಅದು ಶಬ್ದಮಾಲಿನ್ಯವಿಲ್ಲದೆ ಚಲಿಸಲಿದೆ ಮತ್ತು ಶೂನ್ಯ ಇಂಗಾಲದ ಹೊರಸೂಸುವಿಕೆ ಹೊಂದಿದೆ. 2000ರಲ್ಲಿ ಸ್ಥಾಪನೆಯಾದ ಒಲೆಕ್ಟ್ರಾ ಗ್ರೀನ್‍ ಟೆಕ್ ಲಿಮಿಟೆಡ್ (ಸಾರ್ವಜನಿಕವಾಗಿ ಪಟ್ಟಿ ಮಾಡಲಾದ ಕಂಪನಿ)- ಎಂಇಐಎಲ್ ಸಮೂಹದ ಭಾಗವಾಗಿದೆ. ಭಾರತದಲ್ಲಿ ಎಲೆಕ್ಟ್ರಿಕ್ ಬಸ್​ಗಳನ್ನು ತಯಾರಿಸುವಲ್ಲಿ ಪ್ರವರ್ತಕವಾಗಿದೆ. ಇದು ವಿದ್ಯುತ್ ಪ್ರಸರಣ ಮತ್ತು ವಿತರಣಾ ಜಾಲಗಳಿಗಾಗಿ ಭಾರತದ ಅತಿದೊಡ್ಡ ಸಿಲಿಕಾನ್ ರಬ್ಬರ್/ ಕಾಂಪೋಸಿಟ್ ಇನ್ಸುಲೇಟರ್ ತಯಾರಕ ಕಂಪನಿಯಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries