HEALTH TIPS

ಹೆರಿಗೆ ರಜೆಯಲ್ಲಿಯೇ ಪರೀಕ್ಷೆ ತಯಾರಿ ನಡೆಸಿ IPS ಅಧಿಕಾರಿಯಾದ ಐಟಿ ಉದ್ಯೋಗಿ!

 

           ನವದೆಹಲಿ: ಕೇಂದ್ರ ಲೋಕ ಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಪಾಸಾಗಲು ದೇಶದ ಯುವ ಜನತೆ ಎಲ್ಲಿಲ್ಲದ ಕಸರತ್ತು ನಡೆಸುತ್ತಾರೆ. ಆದರೆ ಇಲ್ಲೊಬ್ಬರು ಐಟಿ ಉದ್ಯೋಗಿ ತಮಗೆ ನೀಡಿರುವ ಹೆರಿಗೆ ರಜೆಯಲ್ಲಿಯೇ ಪರೀಕ್ಷೆ ತಯಾರಿ ನಡೆಸಿ ಯಶಸ್ಸು ಕಾಣುವ ಮೂಲಕವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

               ಐಪಿಎಸ್ ಅಧಿಕಾರಿ ಶಹನಾಜ಼್ ಇಲಿಯಾಸ್‌ ಸಹ ಐಟಿ ಕ್ಷೇತ್ರದಲ್ಲಿ ಐದು ವರ್ಷಗಳ ಕಾಲ ದುಡಿದವರು. ತಮ್ಮ ಎಂದಿನ ಕೆಲಸವನ್ನು ಅಷ್ಟಾಗಿ ಇಷ್ಟ ಪಡದ ಶಹನಾಜ಼್‌, ಸಮಾಜದಲ್ಲಿ ಇನ್ನಷ್ಟು ಪ್ರತಿಷ್ಠಿತ ಸ್ಥಾನಮಾನ ಅರಸಿ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಂಡು ಅದರಲ್ಲಿ ಸಫಲರಾಗಿದ್ದಾರೆ.

                   ಹೆರಿಗೆ ರಜೆ ಮೇಲಿದ್ದ ಶಹನಾಜ಼್‌, ತಮ್ಮ ಈ ರಜಾ ಅವಧಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಉದ್ದೇಶದಿಂದ ಸರ್ಕಾರೀ ಕೆಲಸ ಸೇರುವತ್ತ ಪ್ರಯತ್ನ ಆರಂಭಿಸಿದರು. ಇದೇ ಹುಮ್ಮಸ್ಸಿನಲ್ಲಿ ಲೋಕಸೇವಾ ಆಯೋಗದ ಪರೀಕ್ಷೆಗಳಿಗೆ ತಯಾರಿ ಆರಂಭಿಸಿದರು ಶಹನಾಜ಼್. ತಯಾರಿ ನಡೆಸಲು ಕೇವಲ ಎರಡು ತಿಂಗಳು ವ್ಯಯಿಸಿದ ಶಹನಾಜ಼್‌, ಒಂಬತ್ತು ತಿಂಗಳ ತುಂಬು ಗರ್ಭಿಣಿಯಾದ ವೇಳೆಯಲ್ಲೇ ಪರೀಕ್ಷೆ ತೆಗೆದುಕೊಂಡಿದ್ದಾರೆ.

                 2020ರ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾದ ಶಹನಾಜ಼್‌, ತಮ್ಮ ಕುಟುಂಬಸ್ಥರ ನೆರವಿನಿಂದ ಪುಟ್ಟ ಮಗುವಿನ ಆರೈಕೆಯ ಹೊರೆ ಬಿಳಲಿಲ್ಲ. ಓದಿನತ್ತ ಇನ್ನಷ್ಟು ಗಮನ ಹರಿಸಿ ಅಖಿಲ ಭಾರತ ಮಟ್ಟದಲ್ಲಿ 217ನೇ ರ‍್ಯಾಂಕ್ ಪಡೆಯಲು ಸಫಲರಾದರು. ಉನ್ನತವಾದ ಹುದ್ದೆಯನ್ನು ಪಡೆಯುವ ಮೂಲಕವಾಗಿ ಸ್ವಯಂ ನಿಯಂತ್ರಣ ಹಾಗೂ ಬದ್ಧತೆಗಳ ಯಾವುದೇ ಪರೀಕ್ಷೆಯಲ್ಲೂ ಸಫಲತೆ ಸಾಧಿಸಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries