HEALTH TIPS

ONGC ಅನಿಲ ನಿಕ್ಷೇಪ ಪ್ರದೇಶದಿಂದ ಕೇರಳ ವ್ಯಕ್ತಿ ನಾಪತ್ತೆ: ದಾರಿ ತಪ್ಪಿಸಲಾಗುತ್ತಿದೆ ಎಂದು ಕುಟುಂಬದ ಸದಸ್ಯರ ಆರೋಪ

 

                 ತಿರುವನಂತಪುರಂ: ಮುಂಬೈ ಕರಾವಳಿಯಲ್ಲಿನ ONGC ಮಾಲಕತ್ವದ ಅನಿಲ ನಿಕ್ಷೇಪ ಪ್ರದೇಶದಿಂದ ಕೇರಳ ಮೂಲದ 26 ವರ್ಷದ ಎನೋಸ್ ವರ್ಗೀಸ್ ಕಾಣೆಯಾಗಿ ಒಂದು ವಾರ ಕಳೆದಿದ್ದು, ಸಮುದ್ರ ಹಾಗೂ ಕರಾವಳಿ ಸಂರಕ್ಷಣಾ ಪಡೆಯು ಆತನಿಗಾಗಿನ ಹುಡುಕಾಟವನ್ನು ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ.

                     ಆದರೆ, ಫೆಬ್ರವರಿ 24ರಂದು ಕಾಣೆಯಾದ ಎನೋಸ್ ಪ್ರಕರಣ ನಿಗೂಢ ಸ್ವರೂಪ ಪಡೆದಿದ್ದು, ಕೇರಳದ ಅಡೂರ್‌ನವರಾದ ಎನೋಸ್ ಕುಟುಂಬದ ಸದಸ್ಯರು ಆತನಿಗೆ ಅತನ ಸಹೋದ್ಯೋಗಿಯೊಬ್ಬ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿದ್ದಾರೆ. ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನಿಲ ನಿಕ್ಷೇಪ ಸಿಬ್ಬಂದಿಗಳ ಊಹೆಯನ್ನು ಅವರು ನಿರಾಕರಿಸಿದ್ದಾರೆ ಎಂದು thenewsminute.com ವರದಿ ಮಾಡಿದೆ.

                 ಎನೋಸ್ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿದ್ದು, ONGC ಸಂಸ್ಥೆಯಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ವಡೋದರದಿಂದ ಹೊರಗಿರುವ ಕಂಪನಿಯ ಘಟಕದಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದರು. ಪ್ರಾಥಮಿಕ ವರದಿಗಳ ಪ್ರಕಾರ, ಅನಿಲ ನಿಕ್ಷೇಪ ಕಟ್ಟೆಯಿಂದ ಕೆಳಗೆ ಬಿದ್ದ ಆತನೆಡೆಗೆ ಸುರಕ್ಷತಾ ಗಾಲಿಯನ್ನು ಎಸೆಯಲಾಯಿತಾದರೂ, ಆತನಿಗೆ ಈಜು ಬಾರದ ಕಾರಣ ಅದನ್ನು ಹಿಡಿದುಕೊಳ್ಳುವಲ್ಲಿ ವಿಫಲನಾದ ಎಂದು ಹೇಳಲಾಗಿದೆ.

                "ಆತ ಕಾಣೆಯಾಗುವ ಮುನ್ನ ಅನಿಲ ನಿಕ್ಷೇಪ ಕಟ್ಟೆಯ ಮೇಲೆ ಬೆತ್ತಲೆಯಾಗಿ ತಿರುಗುತ್ತಿದ್ದ ಎಂದು ಅಧಿಕಾರಿಗಳು ಮುಂಬೈ ಪೊಲೀಸರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಆದರೆ, ಈ ಆರೋಪಕ್ಕೆ ಪುಷ್ಟಿ ನೀಡುವಂತಹ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಅಧಿಕಾರಿಗಳು ಈವರೆಗೆ ಎನೋಸ್ ಮರಣದ ಕುರಿತು ಅಧಿಕೃತವಾಗಿ ಪ್ರಕಟಿಸಿಲ್ಲ.

                    ಎನೋಸ್ ಕಾಣೆಯಾದಾಗಿನಿಂದ ಮುಂಬೈನಲ್ಲಿ ಬೀಡು ಬಿಟ್ಟಿರುವ ಆತನ ತಂದೆ ಗೀವರ್ಗೀಸ್, "ಆತ ಕಾಣೆಯಾಗುವುದಕ್ಕೂ ಕೆಲವೇ ಗಂಟೆಗಳ ಮುನ್ನ ಆತನೊಂದಿಗೆ ಕುಟುಂಬದ ಸದಸ್ಯರು ಮಾತನಾಡಿದ್ದರು. ನಾನು ಅನಿಲ ನಿಕ್ಷೇಪ ಪ್ರದೇಶದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ. ನಾನು ಅಲ್ಲಿಗೆ ಬಂದ ಕೂಡಲೇ ಅದನ್ನು ವಿವರಿಸುತ್ತೇನೆ ಎಂದು ವಡೋದರದ ಸಹೋದ್ಯೋಗಿಯೊಬ್ಬರಿಗೆ ಆತ ಸ್ಕೈಪ್ ಸಂದೇಶ ಕಳಿಸಿದ್ದ. ಎನೋಸ್ ಫೆಬ್ರವರಿ 25ರಂದು ವಡೋದರಕ್ಕೆ ಮರಳಬೇಕಿತ್ತು. ಇದಕ್ಕೂ ಮುನ್ನ ನನ್ನ ಜೀವ ಅಪಾಯದಲ್ಲಿದೆ ಎಂದು ತನ್ನ ಗೆಳೆಯರಿಗೆ ಆತ ಸಂದೇಶಗಳನ್ನು ಕಳಿಸಿದ್ದ" ಎಂದು ಹಲವಾರು ಮಾಧ್ಯಮ ಸಂಸ್ಥೆಗಳಿಗೆ ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries