ಕಾಸರಗೋಡು : ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಮಾ 19ರಿಂದ 23ರ ವರೆಗೆ ಜರುಗಲಿದೆ. ಬ್ರಹ್ಮಶ್ರೀ ಉಚ್ಚಿಲ ಪದ್ಮನಾಭ ತಂತ್ರಿ ಅವರ ನೇತ್ರತ್ವದಲ್ಲಿ ಕಾರ್ಯಕ್ರಮ ಜರುಗಲಿದೆ. 19ರಂದು ಬೆಳಗ್ಗೆ 7ಕ್ಕೆ ಉಷ:ಪೂಜೆ, ಗಣಪತಿ ಹೋಮ, 10.58ರಿಂದ 11.38ರೊಳಗಿನ ಮುಹೂರ್ತದಲ್ಲಿ ಜಾತ್ರಾಮಹೋತ್ಸವಕ್ಕೆ ಧ್ವಜಾರೋಹಣ ನಡೆಯುವುದು. ಪ್ರತಿ ದಿನ ಉತ್ಸವ ಬಲಿ, ವಿವಿಧ ತಡಗಳಿಂದ ಭಜನೆ, ತಾಯಂಬಕ ನಡೆಯುವುದು.
21ರಂದು ರಾತ್ರಿ 7ಕ್ಕೆ ರಾತ್ರಿಪೂಜೆ, ಉತ್ಸವಬಲಿ, ನಡುದೀಪೋತ್ಸವ ನಡೆಯುವುದು. 22ರಂದು ಸಂಜೆ 7ರಿಂದ ಉತ್ಸವಬಲಿ, ಕಟ್ಟೆಪೂಜೆ, ಕರಂದಕ್ಕಾಡು ಬೆಡಿಕಟ್ಟೆಯಲ್ಲಿ ವಿಶೇಷ ಪೂಜೆ, ಉತ್ಸವ, ಶ್ರೀದೇವರ ಶಯನ ನಡೆಯುವುದು.
23ರಂದು ಬೆಳಗ್ಗೆ 9ಕ್ಕೆ ಶ್ರೀದೇವರ ಸನ್ನಿಧಿಯಲ್ಲಿ ಪ್ರಾರ್ಥನೆ, ಶಯನೋದ್ಘಾಟನೆ, ಮಹಾಭಿಷೇಕ, 10ಕ್ಕೆ ಸಂಗೀತ ಕಛೇರಿ, ತುಲಾಭಾರ ಸೇವೆ, ರಾತ್ರಿ ಉತ್ಸವ ಬಲಿ, ಕಟ್ಟೆಪೂಜೆ, ಅವ¨ಭೃತ ಸ್ನಾನ, ದರ್ಶನಬಲಿ, ರಾಜಾಂಗಣ ಪ್ರವೇಶ, ಧ್ವಜಾವರೋಹಣ ನಡೆಯುವುದು.
ನಾಳೆಯಿಂದ ಕಾಸರಗೋಡು ಶ್ರೀ ಮPಲ್ಲಿಕಾರ್ಜುನ ದೇವಸ್ಥಾನ ವಾರ್ಷಿಕ ಜಾತ್ರಾಮಹೋತ್ಸವ
0
ಮಾರ್ಚ್ 17, 2023

