ಮಂಜೇಶ್ವರ: ಶ್ರೀ. ಧ. ಗ್ರಾ. ಯೋಜನಾ ವ್ಯಾಪ್ತಿಯ ಸುಂಕದಕಟ್ಟೆ ವಲಯದ ವರ್ಕಾಡಿ ಕಳಿಯೂರು ಸೈಂಟ್ ಜೊಸೆಫ್ ಎ. ಯು. ಪಿ. ಶಾಲೆಗೆ ಶೌಚಗೃಹ ನಿರ್ಮಾಣಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯ ಡಾಕ್ಟರ್. ಡಿ.ವೀರೇಂದ್ರ ಹೆಗ್ಗಡೆ ಅವರು ಪ್ರಸಾದ ರೂಪವಾಗಿ ಮಂಜೂರು ಮಾಡಿದ 50ಸಾವಿರ ರೂ. ಮೊತ್ತದ ಮಂಜೂರಾತಿ ಪತ್ರವನ್ನು ಶಾಲಾ ಸಮಿತಿಗೆ ಹಸ್ತಾಂತರಿಸಲಾಯಿತು. ಜ್ಞಾನದೀಪ ಸಾಲ ಶಿಕ್ಷಣ ಕಾರ್ಯಕ್ರಮದನ್ವಯ ಮೊತ್ತ ಮಂಜೂರುಗೊಳಿಸಲಾಗಿದೆ. ಸುಂಕದಕಟ್ಟೆ ವಲಯ ಮೇಲ್ವಿಚಾರಕ ಕೃಷ್ಣಪ್ಪ ಅವರು ಶಾಲೆಯ ಆಡಳಿತ ಸಮಿತಿಗೆ ಮೊತ್ತದ ಮಂಜೂರಾತಿ ಪತ್ರ ಹಸ್ತಾಂತರಿಸಿದರು ಈ ಸಂದರ್ಭ ಸುಂಕದಕಟ್ಟೆ ಒಕ್ಕೂಟದ ಅಧ್ಯಕ್ಷರಾದ ದಿನೇಶ್, ಕಾರ್ಯದರ್ಶಿ ಸುಧಾಕರ್, ಸೇವಾ ಪ್ರತಿನಿಧಿ ಅಶ್ವಿನಿ ಉಪಸ್ಥಿತರಿದ್ದರು
ವರ್ಕಾಡಿ ಕಳಿಯೂರು ಶಾಲೆಗೆ ಶೌಚಗೃಹ ನಿರ್ಮಾಣಕ್ಕಾಗಿ ನೆರವು
0
ಮಾರ್ಚ್ 17, 2023


