ಕಾಸರಗೋಡು: ರೈಲ್ವೆ ಇಲಾಖೆಯಲ್ಲಿ ಗುತ್ತಿಗೆಆಧಾರದಲ್ಲಿ ನೇಮಕಾತಿ ನಡೆಯಬೇಕಾಗಿದ್ದರೂ, ಇದುವರೆಗೆ ನೇಮಕಾತಿ ಪ್ರಕ್ರಿಯೆ ಆರಂಭಿಸದಿರುವ ಬಗ್ಗೆ ಡಿವೈಎಫ್‍ಐ ಕಾಸರಗೋಡು ಬ್ಲಾಕ್ ಸಮಿತಿ ವತಿಯಿಂದ ರೈಲ್ವೆ ನಿಲ್ದಾಣ ಎದುರು ಪ್ರತಿಭಟನೆ ನಡೆಯಿತು.
ರೈಲ್ವೆ ಗೇಟ್‍ಕೀಪರ್ ಸೇರಿದಂತೆ ವಿವಿಧ ಹುದ್ದೆಗಳಿಗೆ 2019ರ ಲೋಕಸಭಾ ಚುನಾವಣೆಗೆ ಮೊದಲು ಅರ್ಜಿ ಆಹ್ವಾನಿಸಲಾಗಿದ್ದರೂ, ಇನ್ನೂ ಯಾವುದೇ ನೇಮಕಾತಿಗಳನ್ನು ಮಾಡಲಾಗಿಲ್ಲ. ಎರಡೂವರೆ ಲಕ್ಷಕ್ಕೂ ಹೆಚ್ಚು ಹುದ್ದೆಗಳು ಇನ್ನೂ ಭರ್ತಿಯಾಗಿಲ್ಲ. ರೈಲ್ವೇಯಲ್ಲಿ ಯುವಜನ ವಿರೋಧಿ ನೀತಿ ಅನುಸರಿಸಲಾಗುತ್ತಿದೆ ಎಂದುಪ್ರತಿಭಟನಾಕಾರರು ದೂರಿದ್ದಾರೆ. ಡಿವೈಎಫ್‍ಐ ಕಾಸರಗೋಡು ಬ್ಲಾಕ್ ಸಮಿತಿಯ ನೇತೃತ್ವದಲ್ಲಿ ಕಾಸರಗೋಡು ರೈಲು ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಡಿವೈಎಫ್‍ಐ ರಾಜ್ಯ ಸಮಿತಿ ಸದಸ್ಯೆ ಕೆ.ಅನಿಶೇದ್ಯ ಧರಣಿ ಉದ್ಘಾಟಿಸಿದರು, ಬ್ಲಾಕ್ ಸಮಿತಿ ಅಧ್ಯಕ್ಷ ಸುನಿಲ್ ಕಡಪ್ಪುರಂ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾರ್ಯದರ್ಶಿ ಸುಭಾಷ್‍ಉಪಸ್ಥಿತರಿದ್ದರುಬ್ಲಾಕ್ ಸಮಿತಿ ಕಾರ್ಯದರ್ಶಿ ಸುಭಾಷ್ ಪಾಡಿ ಸ್ವಾಗತಿಸಿದರು.
ರೈಲ್ವೆ ಇಲಾಖೆಯಲ್ಲಿ ನೇಮಕಾತಿ ವಿಳಂಬ: ಡಿವೈಎಫ್‍ಐ ಪ್ರತಿಬಟನೆ
0
ಮಾರ್ಚ್ 17, 2023
Tags


