ತಿರುವನಂತಪುರಂ: ರಾಜ್ಯದಲ್ಲಿ ವಿಷು- ರಂಜಾನ್ ಮಾರುಕಟ್ಟೆಗಳು(ಸಂತೆ) ಇದೇ ತಿಂಗಳು ಆರಂಭವಾಗಲಿವೆ. ನಾಗರಿಕ ಸರಬರಾಜು ನಿಗಮದ ನೇತೃತ್ವದಲ್ಲಿ ಏಪ್ರಿಲ್ 12 ರಿಂದ ಮಾರುಕಟ್ಟೆಗಳು ಪ್ರಾರಂಭವಾಗಲಿವೆ.
10 ದಿನಗಳ ಸುದೀರ್ಘ ವಿಷು-ರಂಜಾನ್ ಮಾರುಕಟ್ಟೆಗಳು ಏಪ್ರಿಲ್ 21 ರವರೆಗೆ ನಡೆಯಲಿವೆ. ಈ ಬಾರಿ ಸಂತೆ ಮಾರುಕಟ್ಟೆ ಇರುವುದಿಲ್ಲ ಎಂಬ ಮಾತುಗಳು ವ್ಯಾಪಕವಾಗಿ ಹರಡಿದ್ದವು.
ಈ ಸಂದರ್ಭದಲ್ಲಿ ಸಚಿವ ಜಿ. ಆರ್.ಅನಿಲ್ ಅವರು ವಿಷು-ರಂಜಾನ್ ಮಾರುಕಟ್ಟೆಗಳ ಕುರಿತು ಘೋಷಣೆಗಳನ್ನು ಮಾಡಿದರು. ಇದೇ 12ರಂದು ತಂಬನೂರಿನಲ್ಲಿ ರಾಜ್ಯ ಮಟ್ಟದ ಉದ್ಘಾಟನೆ ನಡೆಯಲಿದೆ. ಕೆಎಸ್‍ಆರ್‍ಟಿಸಿ ಡಿಪೆÇೀ ಬಳಿಯ ಸಪ್ಲೈಕೋ ಮಾರುಕಟ್ಟೆಯ ಮುಂಭಾಗದಲ್ಲಿರುವ ವಿಶೇಷ ಸಿದ್ದಪಡಿಸಿದ ಸ್ಥಳದಲ್ಲಿ ಸಂತೆ ನಡೆಯಲಿದೆ.
ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಮಾರುಕಟ್ಟೆ ಆರಂಭಿಸಲಾಗುವುದು. ಸಪ್ಲೈಕೋ ಮಾರುಕಟ್ಟೆ ಕೇಂದ್ರಗಳ ಮುಂದೆ ಸ್ಥಳಾವಕಾಶವಿಲ್ಲದಿದ್ದರೆ, ಮಾರುಕಟ್ಟೆಗೆ ಬೇರೆ ಸ್ಥಳಗಳನ್ನು ಪರಿಗಣಿಸಲು ಸೂಚಿಸಲಾಗಿದೆ. ಗ್ರಾಹಕರು ಮಾರುಕಟ್ಟೆಯ ಮೂಲಕ ಕಡಿಮೆ ಬೆಲೆಯಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಬಹುದು.
ರಾಜ್ಯದಲ್ಲಿ ವಿಷು-ರಂಜಾನ್ ಮಾರುಕಟ್ಟೆಗಳು ಇದೇ ತಿಂಗಳ 12 ರಿಂದ ಪ್ರಾರಂಭ
0
April 08, 2023