HEALTH TIPS

ಏಲತ್ತೂರ್ ರೈಲು ದಾಳಿ: ಕಣ್ಣೂರಿಗೆ ಬಂದ ಎನ್‍ಐಎ ತಂಡ: ಉಗ್ರರ ನಂಟು ಶಂಕೆ: ತನಿಖೆಗಾಗಿ 18 ಸದಸ್ಯರ ವಿಶೇಷ ಪೊಲೀಸ್ ತಂಡ ರಚನೆ


          ಕಣ್ಣೂರು: ಏಲತ್ತೂರಿನಲ್ಲಿ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಐಎ ತಂಡ ಕಣ್ಣೂರಿಗೆ ಆಗಮಿಸಿ ಶೋಧ ನಡೆಸಿದೆ.
            ಸದ್ಯ ಪ್ರಕರಣದ ಪ್ರಾಥಮಿಕ ತನಿಖೆ ನಡೆಯುತ್ತಿದೆ. ದಾಳಿಯ ಹಿಂದೆ ಉಗ್ರರ ನಂಟು ಇರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಎನ್‍ಐಎ ತನಿಖೆ ನಡೆಸುತ್ತಿದೆ.
        ಏಲತ್ತೂರ್ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಶಂಕಿತನ ವಿಳಾಸದ ಹುಡುಕಾಟದಲ್ಲಿ ರೈಲ್ವೆ ಪೆÇಲೀಸರು ಉತ್ತರಪ್ರದೇಶಕ್ಕೆ ತೆರಳಿದ್ದಾರೆ. ಈ ನಿಟ್ಟಿನಲ್ಲಿ ನೋಯ್ಡಾ ಮತ್ತು ಗಾಜಿಯಾಬಾದ್‍ನಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಕೇರಳ ಪೊಲೀಸರು ಕೂಡ ತೆರಳಿದ್ದಾರೆ. ಲಾಡ್ಜ್‍ಗಳು ಮತ್ತು ಅನ್ಯರಾಜ್ಯ ಕಾರ್ಮಿಕರು ತಂಗಿರುವ ಸ್ಥಳಗಳ ಮೇಲೆ ಪೊಲೀಸರು ದಾಳಿ ನಡೆಸಿದರು. ಆರೋಪಿಯದ್ದು ಎಂಬ ಶಂಕೆಯ ಮೇರೆಗೆ ವಶಕ್ಕೆ ಪಡೆದ ಬ್ಯಾಗ್‍ನಲ್ಲಿದ್ದ ನೋಟ್ ಪ್ಯಾಡ್‍ನಲ್ಲಿಯೂ ನೋಯ್ಡಾಕ್ಕೆ ಸಂಬಂಧಿಸಿದ ಉಲ್ಲೇಖಗಳಿವೆ. ಇದರ ಬೆನ್ನಲ್ಲೇ ತನಿಖಾ ತಂಡ ಇತರ ರಾಜ್ಯಗಳಿಗೂ ತನಿಖೆಯನ್ನು ವಿಸ್ತರಿಸಿದೆ.
            ತನಿಖೆ ಆರಂಭಿಕ ಹಂತದಲ್ಲಿದೆ. ತನಿಖೆ ಮುಂದುವರೆದಂತೆ ಮಾತ್ರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ತನಿಖೆಗಾಗಿ 18 ಸದಸ್ಯರ ವಿಶೇಷ ತಂಡವನ್ನೂ ರಚಿಸಲಾಗಿದೆ. ಆರೋಪಿ ಎಂದು ಶಂಕಿಸಲಾಗಿರುವ ಶಾರುಖ್ ಸೈಫೀ ಬಗ್ಗೆ ಪೊಲೀಸರು ಗರಿಷ್ಠ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಉಸ್ತುವಾರಿ ಎಡಿಜಿಪಿ ಅಜಿತ್ ಕುಮಾರ್ ತಿಳಿಸಿದ್ದಾರೆ.
           ಮಲಪ್ಪುರಂ ಅಪರಾಧ ವಿಭಾಗದ ಎಸ್ಪಿ ವಿಕ್ರಮನ್ ತನಿಖಾಧಿಕಾರಿಯಾಗಿದ್ದಾರೆ. ಇದಲ್ಲದೆ, ತನಿಖಾ ತಂಡದಲ್ಲಿ ಅಪರಾಧ ವಿಭಾಗ, ಸ್ಥಳೀಯ ಪೊಲೀಸ್ ಮತ್ತು ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಇದ್ದಾರೆ. ಡಿವೈಎಸ್ಪಿ ಬೈಜು ಪೌಲಸ್, ಕೋಝಿಕ್ಕೋಡ್ ಟೌನ್ ಸಹಾಯಕ ಕಮಿಷನರ್ ಬಿಜುರಾಜ್, ತಾನೂರ್ ಡಿವೈಎಸ್ಪಿ ಬೆನ್ನಿ, ರೈಲ್ವೆ ಇನ್ಸ್‍ಪೆಕ್ಟರ್‍ಗಳು ಮತ್ತು ಸ್ಥಳೀಯ ಸಬ್‍ಇನ್‍ಸ್ಪೆಕ್ಟರ್‍ಗಳನ್ನು ಈ ತಂಡದಲ್ಲಿ ಸೇರಿಸಲಾಗಿದೆ.
           ಘಟನೆಯ ಹಿಂದೆ ಭಯೋತ್ಪಾದಕ ಸಂಪರ್ಕವಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಏಲತ್ತೂರು ಹಿಂದೂಸ್ತಾನ್ ಪೆಟ್ರೋಲಿಯಂ ಡಿಪೋಗೆ ಬೆಂಕಿ ಹಚ್ಚಲು ಯತ್ನಿಸಿರುವುದು ಗಂಭೀರತೆಯನ್ನು ಹೆಚ್ಚಿಸಿದೆ. ಮೊದಲಿನಿಂದಲೂ, ಹಿಂಸಾಚಾರವು ನಿರ್ದಿಷ್ಟವಾಗಿ ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಪೆÇಲೀಸರು ತೀರ್ಮಾನಿಸಿದರು. ಇದು ಭಯೋತ್ಪಾದಕ ಸಂಬಂಧವನ್ನು ಸೂಚಿಸುತ್ತದೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries