HEALTH TIPS

2022-23ರಲ್ಲಿ ₹15,920 ಕೋಟಿ ಮೌಲ್ಯದ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡಿದ ಭಾರತ

 

              ನವದೆಹಲಿ: 2022-23ನೇ ಹಣಕಾಸು ವರ್ಷದಲ್ಲಿ ಭಾರತವು ₹ 15,920 ಕೋಟಿ ಮೌಲ್ಯದ ರಕ್ಷಣಾ ಪರಿಕರಗಳನ್ನು ರಫ್ತು ಮಾಡಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ.

                  '2022-2023ನೇ ಹಣಕಾಸು ವರ್ಷದಲ್ಲಿ ಭಾರತದ ರಕ್ಷಣಾ ರಫ್ತು ಸಾರ್ವಕಾಲಿಕ ದಾಖಲೆಯಾದ ₹ 15,920 ಕೋಟಿಗೆ ತಲುಪಿದೆ.

ಇದು ದೇಶದ ಗಮನಾರ್ಹ ಸಾಧನೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸ್ಫೂರ್ತಿದಾಯಕ ನಾಯಕತ್ವದಲ್ಲಿ ನಮ್ಮ ರಕ್ಷಣಾ ರಫ್ತು ಬೆಳೆಯುತ್ತಲೇ ಇರುತ್ತದೆ' ಎಂದು ಅವರು ಟ್ವೀಟ್‌ ಮಾಡಿದ್ದಾರೆ.

                    2021-22 ರಲ್ಲಿ ₹ 12,814 ಕೋಟಿ ಮೌಲ್ಯದ ರಕ್ಷಣಾ ಪರಿಕರಗಳು ರಫ್ತಾಗಿದ್ದರೆ, 2020-21ರಲ್ಲಿ ಇದರ ಪ್ರಮಾಣ ₹ 8,434 ಕೋಟಿ ಇತ್ತು. 2019-20 ರಲ್ಲಿ ₹ 9,115 ಕೋಟಿ ಮೌಲ್ಯದಷ್ಟು ರಫ್ತಾಗಿದ್ದರೆ, 2018-19ರಲ್ಲಿ ₹ 10,745 ಕೋಟಿ ಮೌಲ್ಯದಷ್ಟು ರಕ್ಷಣಾ ‍ಪರಿಕರಗಳನ್ನು ಭಾರತ ಮಾರಾಟ ಮಾಡಿತ್ತು.

               2024-25ರ ವೇಳೆಗೆ ₹ 1,75,000 ಕೋಟಿಯ ರಕ್ಷಣಾ ಸಾಮಗ್ರಿಗಳ ಉತ್ಪಾದನೆ ಹಾಗೂ ₹ 35,000 ಕೋಟಿಯಷ್ಟು ರಫ್ತು ಮಾಡುವ ಗುರಿ ಹಾಕಿಕೊಳ್ಳಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries