HEALTH TIPS

ಜಿ 20 ಶೃಂಗಸಭೆ ಮುಕ್ತಾಯ: ಕೇರಳ ಪ್ರವಾಸೋದ್ಯಮ ಪ್ರತಿನಿಧಿಗಳಿಂದ ಪ್ರಶಂಸೆ


          ತಿರುವನಂತಪುರಂ: ಜಿ 20 ಶೃಂಗಸಭೆಯಲ್ಲಿ ಅಂತಾರಾಷ್ಟ್ರೀಯ ಮತ್ತು ದೇಶೀಯ ಪ್ರತಿನಿಧಿಗಳು ಕೇರಳದ ಶ್ರೀಮಂತ ಸಾಂಸ್ಕøತಿಕ ಪರಂಪರೆ ಮತ್ತು ನೈಸರ್ಗಿಕ ಸೌಂದರ್ಯ ಮತ್ತು ಕೇರಳ ಪ್ರವಾಸೋದ್ಯಮದ ಬೆಚ್ಚಗಿನ ಆತಿಥ್ಯವನ್ನು ಗುರುತಿಸುವ ಕುಮಾರಕಂ ಸಮ್ಮೇಳನ ಶ್ಲಾಘನೆಗಳೊಮದಿಗೆ ಕೊನೆಗೊಂಡಿತು.
        ಕೇರಳ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಟಿಡಿಸಿ) ಒಡೆತನದ ವಾಟರ್‍ಸ್ಕೇಪ್ಸ್ ರೆಸಾರ್ಟ್‍ನಲ್ಲಿ ಭಾರತೀಯ ಶೆರ್ಪಾ ಅಮಿತಾಭ್ ಕಾಂತ್ ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ 30 ರಿಂದ ಏಪ್ರಿಲ್ 2 ರವರೆಗೆ ನಡೆದ ಸಭೆಯಲ್ಲಿ ಜಿ20 ಸದಸ್ಯ ರಾಷ್ಟ್ರಗಳು, ಒಂಬತ್ತು ಆಹ್ವಾನಿತ ದೇಶಗಳು ಮತ್ತು ವಿವಿಧ ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ಸಂಸ್ಥೆಗಳಿಂದ 120 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.
         ಈಗಾಗಲೇ ಜವಾಬ್ದಾರಿಯುತ ಪ್ರವಾಸೋದ್ಯಮದ ಮೂಲಕ ವಿಶ್ವ ಪ್ರವಾಸೋದ್ಯಮ ನಕ್ಷೆಯಲ್ಲಿ ಸ್ಥಾನ ಪಡೆದಿರುವ ಕುಮಾರಕಂ ಜಿ20 ಶೃಂಗಸಭೆಯ ಆತಿಥ್ಯವು ದೊಡ್ಡ ಉತ್ತೇಜನವಾಗಿದೆ. ಕುಮಾರಕಂನಲ್ಲಿ ಕೇರಳ ಪ್ರವಾಸೋದ್ಯಮದ ಪರಿಸರ ಸ್ನೇಹಿ ಪ್ರವಾಸೋದ್ಯಮ ಉಪಕ್ರಮಗಳು ನೈಸರ್ಗಿಕ ಸೌಂದರ್ಯವನ್ನು ಆನಂದಿಸುವ ಪ್ರತಿನಿಧಿಗಳಿಗೆ ಹೊಸ ಅನುಭವವನ್ನು ನೀಡಿತು. ಸಮ್ಮೇಳನದ ಸಮನ್ವಯಕ್ಕಾಗಿ ಸುಮಾರು ಐವತ್ತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಕುಮಾರಕಂನಲ್ಲಿ ಕಾರ್ಯನಿರ್ವಹಿಸಿದರು.
          ವೆಂಬನಾಡು ಸರೋವರದ ದಡದಲ್ಲಿರುವ ಸ್ಥಳದಲ್ಲಿ ವಿಶ್ವದರ್ಜೆಯ ವ್ಯವಸ್ಥೆ ಹಾಗೂ ಸೌಲಭ್ಯ ಕಲ್ಪಿಸಿರುವುದು ಪ್ರತಿನಿಧಿಗಳನ್ನು ಆಕರ್ಷಿಸಿದೆ ಎಂದು ಪ್ರವಾಸೋದ್ಯಮ ಸಚಿವ ಪಿ.ಎ. ಮುಹಮ್ಮದ್ ರಿಯಾಝ್ ಹೇಳಿದರು. ಶೃಂಗಸಭೆಯನ್ನು ಆಯೋಜಿಸಲು ಕೇರಳ ಪ್ರವಾಸೋದ್ಯಮವು ಕುಮಾರಕೋಮ್ ಅನ್ನು ಆಯ್ಕೆ ಮಾಡಿರುವುದು ಒಂದು ಸಂಚಲನವಾಗಿತ್ತು. ಇದು ಕುಮಾರಕೋಮ್‍ನ ಪ್ರವಾಸೋದ್ಯಮ ಬೆಳವಣಿಗೆಗೆ ಮತ್ತಷ್ಟು ಸಹಾಯ ಮಾಡುತ್ತದೆ. ಜಿ 20 ಶೃಂಗಸಭೆಯು ಕೇರಳದ ಪ್ರವಾಸೋದ್ಯಮ ಕ್ಷೇತ್ರದ ಉತ್ಕರ್ಷಕ್ಕೆ ಮತ್ತು ಅದರ ಆರ್ಥಿಕತೆಯ ಬೆಳವಣಿಗೆಗೆ ಪ್ರೇರಣೆಯಾಗಲಿದೆ ಎಂದು ಭಾವಿಸಲಾಗಿದೆ ಎಂದು ಸಚಿವರು ಹೇಳಿದರು.

         ಕೇರಳದ ಪರಂಪರೆಯನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು, ನೆಲ ಮತ್ತು ಹಿನ್ನೀರಿನ ಸುಮಾರು 1,200 ಕೇರಳದ ಹೆಸರಾಂತ ಕಲಾವಿದರ ಪ್ರದರ್ಶನಗಳು, ಕೇರಳದ ವಿಶಿಷ್ಟ ಕಲಾ ಪ್ರಕಾರಗಳಾದ ಪೂರಂ, ವಲ್ಲಂಕಾಳಿ, ಕಲರಿಪಯಟ್ ಇತ್ಯಾದಿಗಳ ಪ್ರಸ್ತುತಿಗಳಿಗೆ ವೇದಿಕೆ ಸಾಕ್ಷಿಯಾದಾಗ ಹಬ್ಬದ ವಾತಾವರಣವು ಪ್ರತಿದಿನವೂ ಎದ್ದುಕಾಣುತ್ತಿತ್ತು. ವಡ್ಕನ್‍ಪಾಟ್‍ನಲ್ಲಿ ಉಣ್ಣಿಯಾರ್ಚಾ ಅವರ ಜೀವನ ಕಥೆಯ ನಾಟಕೀಕರಣವು ಪ್ರತಿನಿಧಿಗಳಿಂದ ಪ್ರಶಂಸೆಗೆ ಪಾತ್ರವಾಯಿತು. ಹೌಸ್‍ಬೋಟ್‍ನಲ್ಲಿನ ಪ್ರವಾಸವು ಪ್ರತಿನಿಧಿಗಳಿಗೆ ವಿಶಿಷ್ಟ ಅನುಭವವನ್ನು ನೀಡಿತು.
          ಸಮ್ಮೇಳನದ ಸಮಾರೋಪ ದಿನದಂದು ಕೇರಳದ ರಾಷ್ಟ್ರೀಯ ಹಬ್ಬವಾದ ಓಣಂನ ಮನರಂಜನೆಯು ಪ್ರತಿನಿಧಿಗಳ ಉತ್ಸಾಹವನ್ನು ಉತ್ತುಂಗಕ್ಕೇರಿಸಿತು. ಓಣಂ ಕಾರ್ಯಕ್ರಮಗಳಾದ ಪೂಕಳಂ, ಓಣಸದ್ಯ, ಪುಲಿಕಳಿ, ಕುಮ್ಮಟಿಕಳಿ, ಉಂಜಾಳಟ್ಟಂ, ವಡಂವಲಿ ಸಂಭ್ರಮಕ್ಕೆ ರಂಗು ತುಂಬಿದವು. ಪ್ರತಿನಿಧಿಗಳು ಗೋಧಿ ಹೊಟ್ಟಿನಿಂದ ಮಾಡಿದ ಪರಿಸರ ಸ್ನೇಹಿ ಬಟ್ಟಲಿನಲ್ಲಿ ಓಣಂ ಸದ್ಯವನ್ನು ಸವಿದರು.
         ವಿಶ್ವದ 20 ದೊಡ್ಡ ಆರ್ಥಿಕತೆಗಳ ಉನ್ನತ ಅಧಿಕಾರಿಗಳು ನಾಲ್ಕು ದಿನಗಳ ಶೃಂಗಸಭೆಯಲ್ಲಿ ಭಾರತದ ಉ20 ಅಧ್ಯಕ್ಷತೆಯಲ್ಲಿ ಇಲ್ಲಿಯವರೆಗೆ ಮಾಡಿದ ಕೆಲಸವನ್ನು ನಿರ್ಣಯಿಸಲು ಮತ್ತು ಹಲವಾರು ಜಾಗತಿಕ ಸಮಸ್ಯೆಗಳು ಮತ್ತು ಸವಾಲುಗಳನ್ನು ನಿಭಾಯಿಸಲು ಮುಂದಿನ ಮಾರ್ಗವನ್ನು ನಿರ್ಣಯಿಸಲು ಚರ್ಚೆ ನಡೆಸಿದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries