HEALTH TIPS

ಅಯೋಧ್ಯೆಯ ಶ್ರೀರಾಮಮಂದಿರ ರಕ್ಷಣೆಗೆ ಆಧುನಿಕ ತಂತ್ರಜ್ಞಾನ; 77 ಕೋಟಿ ರೂ. ಖರ್ಚು !

 

              ಉತ್ತರಪ್ರದೇಶ: ಅಯೋಧ್ಯೆಯ ರಾಮ ಮಂದಿರಕ್ಕೆ ತಂತ್ರಜ್ಞಾನ ಆಧಾರಿತ ಭದ್ರತಾ ವ್ಯವಸ್ಥೆಯನ್ನು 77 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ.

                 ಅಯೋಧ್ಯಾ ಪಟ್ಟಣದ ಸುರಕ್ಷತೆಗಾಗಿ ನೀವು ಅನೇಕ ತಾಂತ್ರಿಕ ಬದಲಾವಣೆಗಳನ್ನು ಸಹ ನೋಡುತ್ತೀರಿ, ಏಕೆಂದರೆ ಇದು ನಮ್ಮ ಆದ್ಯತೆಯ ಭಾಗವಾಗಿದೆ.

                          ಹೀಗಾಗಿ ಕೆಲವು ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗಿದೆ. ಜನವರಿಯಲ್ಲಿ ಅಂದರೆ ಸಾರ್ವತ್ರಿಕ ಚುನಾವಣೆಗೆ ತಿಂಗಳುಗಳ ಮೊದಲು ದೇವಾಲಯವನ್ನು ಉದ್ಘಾಟಿಸಲಾಗುವುದು ಎಂದು ಕೇಂದ್ರ ಹೇಳಿದೆ.

                    ಉತ್ತರ ಪ್ರದೇಶದ ಪೊಲೀಸ್ ಮಹಾಸಂಚಾಲಕರಾದ ರಾಮ ಕುಮಾರ ವಿಶ್ವಕರ್ಮ ಇವರು ಶ್ರೀರಾಮಜನ್ಮ ಭೂಮಿಯ ಮೇಲೆ ಕಟ್ಟುವ ಭವ್ಯ ಶ್ರೀರಾಮ ಮಂದಿರದ ಭದ್ರತೆಯ ಬಗ್ಗೆ ಮಾಹಿತಿ ನೀಡುವಾಗ, ದೇವಸ್ಥಾನದ ಭದ್ರತೆಗಾಗಿ ಆಧುನಿಕ ತಂತ್ರಜ್ಞಾನಕ್ಕಾಗಿ 77 ಕೋಟಿ ರೂಪಾಯಿ ಖರ್ಚು ಮಾಡಲಾಗುವುದು.

ದೇವಸ್ಥಾನದಲ್ಲಿ ಇರಲಿವೆ 800 ಕ್ಯಾಮೆರಾ: ದೇವಸ್ಥಾನದ ಬಾಗಿಲಿನ ಪರಿಸರದಲ್ಲಿ ಕಾವಲಿಗಾಗಿ ಮುಖ    ಪರಿಚಯ 'ಫೇಸ್ ರೆಕಾಗ್ನಿಶನ್' ತಂತ್ರಜ್ಞಾನದ ಉಪಯೋಗ ಮಾಡಲಾಗುವುದು. ಸಂಪೂರ್ಣ ದೇವಸ್ಥಾನದಲ್ಲಿ 800 ಕ್ಯಾಮೆರಾ ಅಳವಡಿಸಲಾಗುವುದು. ಆಕಾಶದಿಂದ ಡ್ರೋನ್ ಮೂಲಕ 24 ಗಂಟೆ ನಿಗಾ ವಹಿಸಲಾಗುವುದು. ದೇವಸ್ಥಾನದ ಭದ್ರತೆಗಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸಿಯ ಉಪಯೋಗ ಮಾಡಲಾಗುವುದು.

ಆಧುನಿಕ ತಂತ್ರಜ್ಞಾನಕ್ಕಾಗಿ 77 ಕೋಟಿ ರೂ. : ದೇವಸ್ಥಾನ ಪೂರ್ಣವಾದ ನಂತರ ಭಕ್ತರ ಗದ್ದಲ, ಐದು ಪಟ್ಟು ಹೆಚ್ಚಾಗುವುದು. ಆದ್ದರಿಂದ ಸ್ವಯಂ ಚಾಲಿತ 'ಶಾರ್ಟ್ ಗನ್', 'ಬುಲೆಟ್ ಪ್ರೂಫ್ ಜಾಕೆಟ್', 'ಕಾವಲು ಉಪಕರಣ', ಸರಯೂ ನದಿಯಲ್ಲಿ ನೇಮಿಸಲಾಗುವ ಶಸ್ತ್ರ ಸಜ್ಜಿತ ನೌಕೆ ಮುಂತಾದ ಉಪಕರಣ ಖರೀದಿಗಾಗಿ ಖರ್ಚು ಮಾಡಲಾಗುವುದು. ಭದ್ರತೆಗಾಗಿ ಅಯೋಧ್ಯೆಯಲ್ಲಿ ಅನೇಕ ವಾಚ್ ಟವರ್ ಕಟ್ಟಲಾಗುವುದು.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries