ಕುಂಬಳೆ: ಒಂದು-ಕುಂದು ನಲುವತ್ತು ದೈವಗಳ ಕುಞÂನಾಗರ ಕೊಟ್ಯದಲ್ಲಿ ದೈವಗಳ ಕೋಲ ಏಪ್ರಿಲ್ 8 ಮತ್ತು 9ರಂದು ಜರಗಲಿದೆ. ಮೊಗೇರ ಸಮುದಾಯದ ಹಿರಿಯ ದಿ.ಕುಂಬಳೆ ಪಡುಮನೆ ಕಾವು ಮತ್ತು ಸಹೋದರರು ಪ್ರಾಚೀನಕಾಲದಿಂದಲೇ ಆರಾಧಿಸಿಕೊಂಡು ಬರುತ್ತಿದ್ದ ಈ ಸನ್ನಿಧಿಯಲ್ಲಿ ಒಂದು ಕುಂದು ನಲವತ್ತು ದೈವಗಳ ಕೊಟ್ಯವಿದೆ. ಏಪ್ರಿಲ್ 8 ರಂದು ಬೆಳಗ್ಗೆ 9ಗಂಟೆಗೆ ಸ್ಥಳ ಶುದ್ಧಿ, ಮಧ್ಯಾಹ್ನ 12ಕ್ಕೆ ಗುಳಿಗನ ಕೋಲಪ್ರಸಾದ ವಿತರಣೆ ಬಳಿಕ ಅನ್ನದಾನ, ಅಪರಾಹ್ನ 2ರಿಂದ ಕೊರತಿಯಮ್ಮನ ಕೋಲ,ಪ್ರಸಾದ ವಿತರಣೆ ನಡೆಯಲಿದೆ. ಮರುದಿನ ಬೆಳಗ್ಗೆ ಹರಕೆ ಕೋಲ ನಡೆಯಲಿದ್ದು, ಮತ್ತೊಮ್ಮೆ ಗುಳಿಗ, ಕೊರತಿ ದೈವಗಳ ನರ್ತನ ಪ್ರಸಾದ ವಿತರಣೆ ನಡೆಯಲಿದೆ. ಎರಡು ದಿನಗಳ ಕಾಲ ನಡೆಯುವ ಈ ಕೋಲದಲ್ಲಿ ಊರ ಪರವೂರ ಆಸಕ್ತ ಶ್ರದ್ಧಾಳುಗಳು ಭಾಗವಹಿಸಲಿರುವರು. ಪ್ರತಿವರ್ಷವೂ ನಡೆಯುವ ಕೋಲಕ್ಕೆ ಪರಿಸರದ ಸಮಸ್ತರೂ ಸಹಕಾರ ನೀಡುತ್ತಿದ್ದಾರೆ.
ಏಪ್ರಿಲ್ 8 ಮತ್ತು 9ರಂದು ಕುಞÂನಾಗರ ಕೊಟ್ಯದಲ್ಲಿ ದೈವಗಳ ಕೋಲ
0
ಏಪ್ರಿಲ್ 06, 2023
Tags

