HEALTH TIPS

ಕೇರಳದಲ್ಲಿ ಎರಡು ತಿಂಗಳಲ್ಲಿ 8,600 ಟನ್‍ಗಳಷ್ಟು ಜೈವಿಕ ವಿಘಟನೀಯವಲ್ಲದ ತ್ಯಾಜ್ಯ ವಿಲೇವಾರಿ


            ತಿರುವನಂತಪುರಂ: ಬ್ರಹ್ಮಪುರಂನ ಡಂಪ್‍ಯಾರ್ಡ್‍ಗೆ ಬೆಂಕಿ ಹೊತ್ತಿಕೊಂಡ ಬಳಿಕ ನಡೆದ ಅವಾಂತರ ಬಳಿಕ ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳ ಕಣ್ಣು ತೆರೆಸಿದೆ. ಬೆಂಕಿಯ ನಂತರ, ಜೈವಿಕ ವಿಘಟನೀಯವಲ್ಲದ ಕಸದ ಸಂಗ್ರಹಣೆ ಮತ್ತು ಅದರ ವಿಲೇವಾರಿ  ಕೇರಳದಲ್ಲಿ ಸಾರ್ವಕಾಲಿಕ ಎತ್ತರವನ್ನು ತಲುಪಿದೆ, ಸ್ಥಳೀಯಾಡಳಿತ (ಎಲ್‍ಎಸ್‍ಜಿ) ಸಂಸ್ಥೆಗಳು ಮನೆ-ಮನೆಗಳÉ ಕಸ ಸಂಗ್ರಹಣೆಯನ್ನು ತೀವ್ರಗೊಳಿಸುತ್ತಿವೆ.
            ಕಳೆದ ಎರಡು ತಿಂಗಳುಗಳಲ್ಲಿ, ಎಲ್ ಎಸ್ ಜಿ ಗಳ ಹಸಿರು ಕ್ರಿಯಾಸೇನೆ ಸ್ವಯಂಸೇವಕರ ಸಹಾಯದಿಂದ, 8,699 ಟನ್ ಜೈವಿಕ ವಿಘಟನೀಯವಲ್ಲದ ತ್ಯಾಜ್ಯವನ್ನು ಸಂಗ್ರಹಿಸಿ ಕ್ಲೀನ್ ಕೇರಳ ಕಂಪನಿ ಲಿಮಿಟೆಡ್ ಗೆ ಹಸ್ತಾಂತರಿಸಲಾಯಿತು. ಮಾರ್ಚ್‍ನಲ್ಲಿ ಸ್ಥಳೀಯ ಸಂಸ್ಥೆಗಳು 5,258 ಟನ್ ಜೈವಿಕ ವಿಘಟನೀಯವಲ್ಲದ ತ್ಯಾಜ್ಯವನ್ನು ಸಂಗ್ರಹಿಸಿ ಸಿಕೆಸಿಎಲ್‍ಗೆ ಹಸ್ತಾಂತರಿಸಿತ್ತು. ಅದರಲ್ಲಿ 1,818 ಟನ್‍ಗಳನ್ನು ಎರ್ನಾಕುಳಂನಿಂದ ಸಂಗ್ರಹಿಸಲಾಗಿದೆ, ಇದು ಎಲ್ಲಾ ಜಿಲ್ಲೆUಳಿಗಿಂತ ಅತ್ಯಧಿಕವಾಗಿದೆ.
            ಫೆಬ್ರವರಿಯಲ್ಲಿ ರಾಜ್ಯಾದ್ಯಂತ ಒಟ್ಟು 3,441 ಟನ್ ಜೈವಿಕ ವಿಘಟನೀಯವಲ್ಲದ ತ್ಯಾಜ್ಯವನ್ನು ಸಿಕೆಸಿಎಲ್ ಸಂಗ್ರಹಿಸಿತ್ತು. ಪ್ರಸ್ತುತ, ರಾಜ್ಯಾದ್ಯಂತ ಸುಮಾರು 32,000 ಹಸಿರು ಕ್ರಿಯಾಸೇನೆಯ ಸದಸ್ಯರನ್ನು ಮನೆ-ಮನೆಗೆ ತ್ಯಾಜ್ಯ ಸಂಗ್ರಹಿಸಲು ನಿಯೋಜಿಸಲಾಗಿದೆ.
            ಮನೆಗಳಿಂದ ತ್ಯಾಜ್ಯ ಸಂಗ್ರಹಣೆಯಲ್ಲಿ ತೀವ್ರ ಹೆಚ್ಚಳವು ಸಿಕೆಸಿಎಲ್ ಅನ್ನು ಇತರ ಖಾಸಗಿ ಸೇವಾ ಪೂರೈಕೆದಾರರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಪ್ರೇರೇಪಿಸಿತು ಮತ್ತು ತ್ಯಾಜ್ಯದ ಸಕಾಲಿಕ ವಿಲೇವಾರಿ ಖಚಿತಪಡಿಸುತ್ತದೆ. “ಪ್ರಸ್ತುತ, ನಾವು ಈ ಕ್ಷೇತ್ರದಲ್ಲಿ ಪರಿಣತಿಯನ್ನು ಹೊಂದಿರುವ 40 ಸೇವಾ ಪೂರೈಕೆದಾರರೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಈಗ, ಬಹುಪಾಲು ಸ್ಥಳೀಯ ಸಂಸ್ಥೆಗಳು ನಮ್ಮೊಂದಿಗೆ ಎಂಒಯುಗಳಿಗೆ ಸಹಿ ಹಾಕಿವೆ. ಸ್ಥಳೀಯ ಸಂಸ್ಥೆಗಳು ಇತರ ಸೇವಾ ಪೂರೈಕೆದಾರರ ಮೇಲೆ ಅವಲಂಬಿತವಾಗಿವೆ, ಅವರು ತ್ಯಾಜ್ಯವನ್ನು ಆಯ್ದವಾಗಿ ಸಂಗ್ರಹಿಸುತ್ತಾರೆ, ಇದು ನಿರ್ವಹಿಸಲ್ಪಡದಿದ್ದರೆ ಶೇಖರಣೆಗೆ ಕಾರಣವಾಗುತ್ತದೆ” ಎಂದು ಸಿಕೆಸಿಎಲ್‍ನ ಅಧಿಕಾರಿಯೊಬ್ಬರು ಹೇಳಿದರು.

            ಎರ್ನಾಕುಳಂ ಜಿಲ್ಲೆ ಉತ್ತಮ ಕ್ಷಮತೆ ನಿರ್ವಹಿಸಿದೆ.  ಕೊಚ್ಚಿ ಕಾರ್ಪೋರೇಷನ್ ನೊಂದಿಗಿನ ಒಪ್ಪಂದದ ನಂತರ, ಬ್ರಹ್ಮಪುರಂನಿಂದ ಸುಮಾರು 210 ಟನ್ ತ್ಯಾಜ್ಯವನ್ನು ಸ್ಥಳಾಂತರಿಸಲಾಗಿದೆ. ನಿಗಮವು ಹೆಚ್ಚು ಗಮನಹರಿಸಬೇಕು ಮತ್ತು ಉತ್ಪತ್ತಿಯಾಗುವ ತ್ಯಾಜ್ಯಕ್ಕೆ ಸಮಗ್ರ ಆರ್ಥಿಕತೆಯನ್ನು ರಚಿಸಬೇಕು ಎಂದು ಅಧಿಕಾರಿಗಳು ಹೇಳಿರುವರು.
        ಹಸಿರು ಕ್ರಿಯಾಸೇನೆಯು ಫೆಬ್ರವರಿ ಮತ್ತು ಮಾರ್ಚ್‍ನಲ್ಲಿ ಥರ್ಮಾಕೋಲ್ ಬಾಕ್ಸ್‍ಗಳು, ಗಾಜು, ಪ್ಲಾಸ್ಟಿಕ್, ಔಷಧಿ ಪಟ್ಟಿಗಳು, ಚೂರುಚೂರು ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯಗಳನ್ನು ಒಳಗೊಂಡಿರುವ ಜೈವಿಕ ವಿಘಟನೀಯವಲ್ಲದ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿಗೊಳಿಸುವ ಮೂಲಕ ಕ್ರಮವಾಗಿ 42 ಲಕ್ಷ ಮತ್ತು 64 ಲಕ್ಷ ರೂ.ಆದಾಯ ಪಡೆದಿದೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries